ದೀಪಾವಳಿ ಹಬ್ಬದಂದು ವಿಶೇಷ ಸ್ಥಳಕ್ಕೆ ಡಿಕೆ ಶಿವಕುಮಾರ್ ಭೇಟಿ
ಎಲ್ಲೆಡೆ ಬೆಳಕಿನ ಹಬಬ್ವಾಗಿವಾರುವ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಮನೆ, ಅಂಗಡಿಗಳಲ್ಲಿ ಲಕ್ಷ್ಮೀ ಪೂಜೆ ಪಾರ್ಥನೆ ಗಳು ನಡೆಯುತ್ತಿವೆ. ಮತ್ತೊಂದೆಡೆ ಶಿರಾ, ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಸೋತು ಬಳಿಕ ಸೈಲೆಂಟ್ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವುಮಾರ್ ದೀಪಾವಳಿ ಹಬ್ಬದಂದು ವಿಶೇಷ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ.
ಶಿರಾ ಹಾಗೂ ಆರ್‌ಆರ್ ನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಟೆಂಪಲ್ ರನ್ ಶುರು ಮಾಡಿದ್ದಾರೆ.
ಇಂದು (ಸೋಮವಾರ) ಪ್ರಸಿದ್ಧ ಹಾಸನಾಂಬೆ ದೇಗುಲದ ವಾರ್ಷಿತ ಉತ್ಸವದ ಕೊನೆ ದಿನವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ದೇವಿನ ದರ್ಶನ ಪಡೆದಿದ್ದಾರೆ.
ಪತ್ನಿ ಉಷಾ ಜೊತೆಗೆ ಹಾಸನಾಂಬೆ ದರ್ಶನ ಪಡೆದ ಡಿಕೆ ಶಿವಕುಮಾರ್
ಹಾಸನಾಂಬ ಉತ್ಸವದ ಕಡೆದಿನವಾದ ಇಂದು (ಸೋಮವಾರ) ದೇಗುಲಕ್ಕೆ ಪತ್ನಿ ಉಷಾ ಜೊತೆಗೆ ಹಾಸನಕ್ಕೆ ಆಗಮಿಸಿದ ಡಿಕೆ ಶಿವಕುಮಾರ್ ಹಾಸನಾಂಬೆ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಮೊನ್ನೆ ಅಷ್ಟೇ ತಮ್ಮ ಕುಟುಂಬದ ದೇವತೆ ಕಬಾಳಮ್ಮನ ದರ್ಶನ ಪಡೆದಿದ್ದರು.
ಶಿರಾ ಹಾಗೂ ಆರ್.ಆರ್.ನಗರ ಉಪಚುನಾವಣೆಯಲ್ಲಿ ಸೋಲಿನ ಬಳಿಕ ಡಿಕೆಶಿ ಮತ್ತೆ ಟೆಂಪಲ್ ರನ್ ಶುರು ಮಾಡಿದ್ದು, ಯಶಸ್ಸಿಗಾಗಿ ದೇವರಿಗೆ ಪೂಜೆ-ಪುನಸ್ಕಾರಗಳನ್ನ ಮಾಡುತ್ತಿದ್ದಾರೆ.