ಚಿತ್ರಗಳಲ್ಲಿ: ಪಕ್ಷಬೇಧ ಮರೆತು ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ ಗಣ್ಯರು
ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಹೃದಯಸಂಬಂಧಿ ತೊಂದರೆಯುಂಟಾಗಿದ್ದು ಆಂಜಿಯೋಪ್ಲಾಸ್ಟ್ ಮಾಡಲಾಗಿದೆ. ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ನಾನು 100 ಪರ್ಸೆಂಟ್ ಫಿಟ್ ಆಗಿದ್ದೇನು ಎಂದು ಸ್ಪಷ್ಟಪಡಿಸಿದರು.
ಇನ್ನು ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಪಕ್ಷಬೇಧ ಮರೆತು ಇಂದು [ಗುರುವಾರ] ಆಸ್ಪತ್ರೆಗೆ ಭೇಟಿ ನೀಡಿ ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದರು. ಈ ವೇಳೆ ಕೆಲ ಸಮಯ ಒಬ್ಬರಿಗೊಬ್ಬರು ಜೋಕ್ ಮಾಡುತ್ತ ನಕ್ಕು ನಲಿದರು. ರಾಜಕೀಯವಾಗಿ ಶತ್ರುಗಳು ಇರಬಹುದು. ಆದರೆ ವೈಯಕ್ತಿಕವಾಗಿ ಯಾರಿಗೆ ಯಾರೂ ಶತ್ರುಗಳಲ್ಲ ಅನ್ನೋದಕ್ಕೆ ಇದು ಸೂಕ್ತ ಉದಾಹರಣೆ.
ಹೃದಯಸಂಬಂಧಿ ಕಾಯಿಲೆಂದಾಗಿ ಆಂಜಿಯೋಪ್ಲಾಸ್ಟ್ ಶಸ್ತ್ರಚಿಕಿತ್ಸೆಗೊಳಗಾಗಿರುವ ಸಿದ್ದರಾಮಯ್ಯನವರ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಪಕ್ಷಬೇಧ ಮರೆತು ಗೃಹ ಸಿಚಿವ ಬಸವರಾಜ್ ಬೊಮ್ಮಾಯಿ ಅವರು ಬೆಂಗಳೂರಿನ ನಾರಾಯಣ ಸೂಪರ್ ಸ್ಪೆಷಲಿಟಿ ಆಸ್ಪತ್ರೆಗೆ ದಾಖಲಾಗಿರುವ ಸಿದ್ದರಾಮಯ್ಯನವರ ಆರೋಗ್ಯ ವಿಚಾರಿಸಿದರು.
ರಾಜಕೀಯದೊಳಗ ನಿತ್ಯ ಜಗಳ ಮಾಡ್ತಿದ್ದವ್ರು ಇವರು. ಸಚಿವ ಕೆ.ಎಸ್. ಈಶ್ವರಪ್ಪ ಅವರು ಸಿದ್ದರಾಮಯ್ಯನವರ ವಿರುದ್ಧ ಹರಿಹಾಯುತ್ತಿದ್ದವರು, ಈಗ ಸಿದ್ದು ಕೈಕುಲುಕಿ ಬೇಗ ಗುಣಮುಖರಾಗಿ ಬನ್ನಿ ಎಂದರು. ಈ ಪೋಟೋ ನೋಡಿದ್ ಮೇಲೆ ರಾಜಕೀಯದಲ್ಲಿ ಯಾರು ಶಾಶ್ವತ ಶತ್ರುಗಳು ಅಲ್ಲ, ಮಿತ್ರರೂ ಅಲ್ಲ ಎನ್ನುವುದನ್ನು ಸಾರಿದರು.
ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ ಬಳಿಕ ಆಸ್ಪತ್ರೆ ಆವರಣದಲ್ಲಿ ಸಿಎಂ ಯಡಿಯೂರಪ್ಪ ಅವರು ಮಾಧ್ಯಮಗಳಿಗೆ ಪ್ರಿಕ್ರಿಯಿಸಿದರು.
ಯಡಿಯೂರಪ್ಪ ಜತೆ ಬೆಂಗಳೂರಿನ ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಬಿ.ಝಡ್.ಜಮೀರ್ ಅಹ್ಮದ್ ಖಾನ್ ಕೂಡ ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದರು.
ಸಿದ್ದರಾಮಯ್ಯನವರ ಆರೋಗ್ಯದ ಬಗ್ಗೆ ಹಲವು ಊಹಾಪೋಹಗಳು ಎದ್ದಿದ್ದವು. ಇದೀಗ ಸ್ವತಃ ಸಿದ್ದರಾಮಯ್ಯನವರೇ ಇಂದು [ಗುರುವಾರ] ಆಸ್ಪತ್ರೆಯಲ್ಲಿ ದಿಢೀರ್ ಸುದ್ದಿಗೋಷ್ಠಿ ನಡೆಸಿ, ನಾನು 100 ಪರ್ಸೆಂಟ್ ಫಿಟ್ ಆಗಿದ್ದೇನು ಎಂದು ಸ್ಪಷ್ಟಪಡಿಸಿದರು.
ನಾನು 100 ಪರ್ಸೆಂಟ್ ಫಿಟ್ ಆಗಿದ್ದೇನೆ. ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಯಾರೂ ಬರಬೇಡಿ. ಡಿಸ್ಚಾರ್ಜ್ ಆದ ಬಳಿಕ ಮನೆಗೇ ಬನ್ನಿ ಎಂದು ಹೇಳಿದರು.
ಸಿದ್ದರಾಮಯ್ಯನವರು ಬೇಗ ಗುಣಮುಖರಾಗಲೆಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಟ್ವೀಟ್ ಮೂಲಕ ಆಶಿಸಿದ್ದಾರೆ.
ಸಿದ್ದರಾಮಯ್ಯ ಶೀಘ್ರ ಗುಣಮುಖರಾಗಲೆಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರು ಟ್ವೀಟ್ ಮೂಲಕ ಮಾಜಿ ಶಿಷ್ಯಗೆ ಹಾರೖಸಿದರು.