ಹೈಕಮಾಂಡ್ನಿಂದ ಸಂದೇಶ ತಂದಿರುವೆ ಎಂದ ಉಸ್ತುವಾರಿ: ಸಂಪುಟ ವಿಸ್ತರಣೆಯೋ? ಪುನಾರಚನೆಯೋ?
ಬಿಜೆಪಿ ಮಹತ್ವದ ಕೋರ್ ಕಮಿಟಿ ಮೀಟಿಂಗ್ ಬೆಳಗಾವಿಯಲ್ಲಿ ನಡೆಯುತ್ತಿದೆ. ರಾಜ್ಯ ನೂತನ ಉಸ್ತುವಾರಿ ಅರುಣ್‌ಸಿಂಗ್ ಸಭೆಯ ನೇತೃತ್ವ ವಹಿಸಿದ್ದಾರೆ. ಬೆಳಗಾವಿಗೆ ಆಗಮಿಸಿದ ಅರುಣ್‌ಸಿಂಗ್‌ರನ್ನು ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಸಚಿವ ರಮೇಶ್ ಜಾರಕಿಹೊಳಿ ಅವರು ಬರ ಮಾಡಿಕೊಂಡಿದ್ದು, ಮಹಿಳಾ ಕಾರ್ಯಕರ್ತರು ಆರತಿ ಎತ್ತಿ, ಕುಂಕುಮವಿಟ್ಟು ಸ್ವಾಗತಿಸಿಕೊಂಡಿದ್ದಾರೆ. ಈ ವೇಳೆ ಮಾತನಾಡಿದ ಅವರು ಹೈಕಮಾಂಡ್ನಿಂದ ಸಂದೇಶ ತಂದಿರುವೆ ಎಂದಿದ್ದು, ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಗರಿಗೆದರಿದೆ.
ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸನ್ಮಾನಿಸಿದರು.
ರಾಜ್ಯ ಉಸ್ತುವಾರಿಯಾಗಿ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ ಆಗಮಿಸಿ ಕೋರ್ ಕಮಿಟಿ ಸಭೆಯಲ್ಲಿ ಭಾಗಿಯಾದರು.
ಸಭೆಗೂ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಅರುಣ್ ಸಿಂಗ್, ಹೈಕಮಾಂಡ್ನಿಂದ ಸಂದೇಶ ತಂದಿರುವೆ ಆದರೆ ಅದನ್ನ ಬಹಿರಂಗವಾಗಿ ಹೇಳಲ್ಲ ಎಂದಿದ್ದಾರೆ.
ವಿಸ್ತರಣೆ ವಿಚಾರ ಇದು ಪಕ್ಷದ ಆಂತರಿಕ ವಿಚಾರ ಅದನ್ನ ಹೊರಗೆ ಹೇಳಲ್ಲ. ಈ ಕುರಿತು ಕೋರ್ ಕಮೀಟಿ ಸಭೆಯಲ್ಲಿ ಚರ್ಚೆ ಮಾಡ್ತಿನಿ ಎಂದಿದ್ದಾರೆ.
ಉಸ್ತುವಾರಿ ತಂದ ಸಂದೇಶವನ್ನ ಖಚಿತ ಪಡಿಸಿರುವ ಸಿಎಂ ಬಿಎಸ್‌ವೈ, ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರಚನೆ ವಿಷಯದಲ್ಲಿ ರಾಜ್ಯದ ಉಸ್ತುವಾರಿ ವಹಿಸಿಕೊಂಡಿರುವ ಅರುಣ್ ಸಿಂಗ್ ಅವರು ಸಂದೇಶ ತಂದಿದ್ದಾರೆ. ಅವರ ಸಂದೇಶ ನೋಡಿ ರಾಜ್ಯದ ಅಧ್ಯಕ್ಷರ ನೇತೃತ್ವದಲ್ಲಿ ಅವರೊಂದಿಗೆ ಎಲ್ಲಾ ವಿಚಾರ ಚರ್ಚೆ ನಡೆಸಿದ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಹೇಳಿದರು
ಹೈಕಮಾಂಡ್ ಸಂದೇಶ ಕೊಟ್ಟ ಕಳುಹಿಸಿದ್ದು, ಸಂಪುಟ ಪುನಾರಚನೆಯೋ ಅಥವಾ ಸಂಪುಟ ವಿಸ್ತರಣೆಯೋ ಎನ್ನುವುದು ಶನಿವಾರ ಸಂಜೆ ಅಥವಾ ಭಾನುವಾರ ಎಲ್ಲಾ ಚಿತ್ರಣ ಬಹಿರಂಗವಾಗಲಿದೆ.ಇದರಿಂದ ಅವರ ಸಂದೇಶ ಭಾರೀ ಕುತೂಹಲ ಮೂಡಿಸಿದೆ.