ರಾಹುಲ್ ಜನ್ಮದಿನ: ಕೊರೋನಾ ಸಂಕಷ್ಟದಲ್ಲಿರುವ ಜನರ ಸಹಾಯಕ್ಕೆ ನಿಂತ ಕಾಂಗ್ರೆಸ್
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರಿಗೆ ಇಂದು (ಜೂನ್.19) 51ನೇ ಜನ್ಮದಿನದ ಸಂಭ್ರಮ. 51ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಾಹುಲ್ ಗಾಂಧಿಯವರಿಗೆ ಕಾಂಗ್ರೆಸ್ ಮುಖಂಡರು, ನಾಯಕರು ಶುಭಕೋರಿದ್ದಾರೆ. ಹಾಗೇ ಅವರ ಜನ್ಮದಿನವನ್ನು ಪಕ್ಷ ಸೇವಾ ದಿವಸ್ ಆಗಿ ಆಚರಿಸುತ್ತಿದೆ.
ಕಾಂಗ್ರೆಸ್ನ ಅಧ್ಯಕ್ಷರಾಗಿದ್ದ ಅವರು ಕಳೆದ ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಸದ್ಯಕ್ಕಂತೂ ಕೇರಳದ ವಯಾನಾಡಿನ ಸಂಸದರಾಗಿರುವ ಅವರು ಪಕ್ಷದ ಹೆಚ್ಚಿನ ಜವಾಬ್ದಾರಿಯನ್ನು ಹೊರಲು ಅದ್ಯಾಕೋ ಮನಸು ಮಾಡುತ್ತಿಲ್ಲ. ಅದೇನೇ ಇರಲಿ 51ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಾಹುಲ್ ಗಾಂಧಿಯವರಿಗೆ ಕಾಂಗ್ರೆಸ್ ಮುಖಂಡರು, ನಾಯಕರು ಶುಭಕೋರಿದ್ದಾರೆ. ಹಾಗೇ ಅವರ ಜನ್ಮದಿನವನ್ನು ಪಕ್ಷ ಸೇವಾ ದಿವಸ್ ಆಗಿ ಆಚರಿಸುತ್ತಿದೆ.
ರಾಹುಲ್ ಗಾಂಧಿಯವರ ಜನ್ಮದಿನದ ಪ್ರಯುಕ್ತ ಕಾಂಗ್ರೆಸ್ ದೇಶಾದ್ಯಂತ ಸೇವಾ ದಿವಸ್ ಆಚರಿಸುತ್ತಿದೆ.
ಕೊರೋನಾದಿಂದ ಸಂಕಷ್ಟದಲ್ಲಿರುವ ಜನರಿಗೆ ಕಾಂಗ್ರೆಸ್ ಸಹಾಯ ಮಾಡುವ ಮೂಲಕ ರಾಹುಲ್ ಗಾಂಧಿ ಅವರ ಜನ್ಮದಿನವನ್ನು ಆಚರಿಸಲಾಯ್ತು.
ದೆಹಲಿಯ ಕಚೇರಿಯಲ್ಲಿ ನಿರ್ಗತಿಕರಿಗೆ ಪಡಿತರ ಕಿಟ್‌ಗಳನ್ನು ವಿತರಿಸಲಾಯಿತು, ನಾಗರಿಕರಿಗೆ ಉಚಿತ ಲಸಿಕೆ ಶಿಬಿರ ಮತ್ತು ಈ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ನಿರುದ್ಯೋಗಕ್ಕೊಳಗಾದವರಿಗೆ ಆರ್ಥಿಕ ನೆರವು ಸಹ ನೀಡಿದರು.
ಇನ್ನು ಕೊರೊನಾದಿಂದ ಮೃತಪಟ್ಟವರ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ಹೇಳುವ ಜತೆಗೆ ಅವರ ಅಗತ್ಯಗಳನ್ನು ಕೇಳಿ, ಪೂರೈಸುತ್ತಿದ್ದಾರೆ.
ದೇಶಾದ್ಯಂತ ಸೇವಾ ದಿವಸ್ ಆಚರಿಸುತ್ತಿರುವ ಕಾಂಗ್ರೆಸ್, ಬಡವರಿಗೆ ಅಗತ್ಯವಿರುವ ವಸ್ತುಗಳನ್ನು ಹಂಚುತ್ತಿದೆ. ಅಂದರೆ ಫೇಸ್ಮಾಸ್ಕ್, ಮೆಡಿಸಿನ್ ಕಿಟ್, ಆಹಾರ ತಿಂಡಿಗಳನ್ನು ಉಚಿತವಾಗಿ ವಿತರಿಸುತ್ತಿದೆ.
ಹಾಗೇ ಬರ್ತ್ ಡೇ ದಿನ ಕೂಡ ನೆಟ್ಟಿಗರು ಅವರನ್ನು ಟ್ರೋಲ್ ಮಾಡಿ ಟ್ವೀಟ್ ಮಾಡುವ ಮೂಲಕ ವಿಶ್ ಮಾಡಿದ್ದಾರೆ. ರಾಹುಲ್ ಗಾಂಧಿಯವರನ್ನು ಜೋಕ್ ಮಾಡಿದ ಮೀಮ್ಸ್ಗಳನ್ನು ಹಾಕಿ ಫನ್ನಿ ವಿಶ್ಗಳನ್ನೂ ಮಾಡಿದ್ದಾರೆ.