ನಾಳೆ ಸಿಎಂ, ಡಿಸಿಎಂ ಪದಗ್ರಹಣ: ಕಂಠೀರವ ಸ್ಟೇಡಿಯಂಗೆ ಡಿಕೆಶಿ ಭೇಟಿ, ಪರಿಶೀಲನೆ
ಬೆಂಗಳೂರು(ಮೇ.19): ನಾಳೆ ಸಿಎಂ, ಡಿಸಿಎಂ ಪದಗ್ರಹಣ ಕಾರ್ಯಕ್ರಮ ಇರುವ ಹಿನ್ನಲೆಯಲ್ಲಿ ಸರ್ಕಾರ ಏನೇನು ಸಿದ್ಧತೆ ಮಾಡಿಕೊಳ್ಳಲಾಗಿದೆ ಅನ್ನೋದನ್ನ ನೋಡಲಿಕ್ಕೆ ಕಂಠೀರವ ಸ್ಟೇಡಿಯಂಗೆ ಬಂದಿದ್ದೇನೆ ಅಂತ ನಿಯೋಜಿತ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ.
ನಾಳಿನ ಪದಗ್ರಹಣ ಕಾರ್ಯಕ್ರಮಕ್ಕೆ ದೇಶಾದ್ಯಂತ ರಾಷ್ಟ್ರೀಯ ನಾಯಕರಗಳು ಬರಲಿದ್ದಾರೆ. ಅವರಿಗೆ ಏನೇನು ವ್ಯವಸ್ಥೆ ಆಗಿದೆ ಅನ್ನೋದನ್ನ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ ಅಂತ ಡಿಕೆಶಿ ತಿಳಿಸಿದ್ದಾರೆ.
ರಾಜ್ಯದ ಜನತೆಗೆ ಹೇಳೋದು ಇಷ್ಟೇ ನಾನು ಯಾರೂ ಆಹ್ವಾನ ಪತ್ರಿಕೆಗೆ ಕಾಯಬೇಕಾಗಿಲ್ಲ ಎಲ್ಲರೂ ಬರಬಹುದು ಅಂತ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಒಂದು ಗಂಟೆಗಳ ಕಾಲ ತಾಳ್ಮೆಯಿಂದ ಈ ಕಾರ್ಯಕರಮದಲ್ಲಿ ಪಾಲ್ಗೊಳ್ಳಬೇಕು. ನಾವು ಯಾರಿಗೂ ಸಂದೇಶ ಕೊಡುವ ಅವಶ್ಯಕಥೆ ಇಲ್ಲ. ಈಗಾಗಲೇ ರಾಜ್ಯದ ಜನ ಸಂದೇಶ ಕೊಟ್ಟಿದ್ದಾರೆ ಅಂತ ಡಿಕೆಶಿ ಹೇಳಿದ್ದಾರೆ.
ನಾಳೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಿದ್ದರಾಮಯ್ಯ ಎರಡನೇ ಬಾರಿಗೆ ಸಿಎಂ ಹಾಗೂ ಮೊದಲ ಸಲ ಡಿ.ಕೆ. ಶಿವಕುಮಾರ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಕ್ಕೆ ಸುಮಾರು ಒಂದು ಲಕ್ಷ ಜನ ಸೇರುವ ಸಾಧ್ಯತೆ ಇದೆ.
ನಾಳಿನ ಕಾರ್ಯಕ್ರಮಕ್ಕೆ ಸಾವಿರಾರು ಜನರು ಸೇರುವುದರಿಂದ ಪೊಲೀಸ್ ಇಲಾಖೆ ಕೂಡ ಸರ್ವಸನ್ನದ್ಧವಾಗಿದೆ. ಕ್ರೀಡಾಂಗಣದ ಸುತ್ತ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.