ವಿಭಿನ್ನ ರೀತಿಯಲ್ಲಿ ರಾಜಕೀಯ ಶಕ್ತಿ ಪ್ರದರ್ಶನ: ಲೇಟ್ ಆದ್ರೂ ಲೆಟೆಸ್ಟ್ ಡಿಕೆಶಿ
ಡಿ.ಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದು, ಪ್ರತಿಜ್ಞಾ ವಿಧಿಗೆ ತಯಾರಿಗಳು ನಡೆಯುತ್ತಿದೆ. ಕೊರೋನಾ ಸಂಕಷ್ಟದ ನಡುವೆಯೂ ವಿಭಿನ್ನ ರೀತಿಯಲ್ಲಿ ರಾಜಕೀಯ ಶಕ್ತಿ ಪ್ರದರ್ಶನಕ್ಕೆ ತಯಾರಿ ನಡೆಯುತ್ತಿದೆ. ಕೆಪಿಸಿಸಿ ಅಧ್ಯಕ್ಷಗಿರಿ ಸಿಕ್ಕು ಮೂರು ತಿಂಗಳು ಆಗಿದೆ. ಆದ್ರೆ, ಕೊರೋನಾದಿಂದ ಅಧಿಕಾರ ಸ್ವೀಕಾರ ಮಾಡಿಲಿಕ್ಕೆ ಆಗಿರಲಿಲ್ಲ. ಇದೀಗ ಲೇಟ್ ಆದ್ರೂ ಲೆಟೆಸ್ಟ್ ಅಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಜೂನ್ 14 ರಂದು ಪದಗ್ರಹಣ ಮಾಡಲಿದ್ದಾರೆ.
ಡಿಕೆಶಿ ಪ್ರತಿಜ್ಞಾ ವಿಧಿಗೆ ತಯಾರಿಗಳು ನಡೆಯುತ್ತಿದ್ದು ಕೊರೋನಾ ಸಂಕಷ್ಟದ ನಡುವೆಯೂ ವಿಭಿನ್ನ ರೀತಿಯಲ್ಲಿ ರಾಜಕೀಯ ಶಕ್ತಿ ಪ್ರದರ್ಶನಕ್ಕೆ ತಯಾರಿ ನಡೆಯುತ್ತಿದೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದ ಗ್ಲೋಬಲ್ ಕಾಲೇಜು ಆವರಣದಲ್ಲಿ “”ಪ್ರತಿಜ್ಞಾ ದಿನ”” ಕಾರ್ಯಕ್ರಮದ ಪೂರ್ವಭಾವಿ ತಯಾರಿ ವೀಕ್ಷಿಸಿದರು.
ಇದೇ ಸಂದರ್ಭದಲ್ಲಿ ಪಕ್ಷದ ನಾಯಕರು ಹಾಗೂ ಉಸ್ತುವಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಅಗತ್ಯ ಮಾರ್ಗದರ್ಶನ ನೀಡಿದರು.
ಪ್ರತಿ ಜಿಲ್ಲೆಗಳಲ್ಲೂ ಹಾಗೂ ಬ್ಲಾಕ್ ಮಟ್ಟದಲ್ಲಿ ಕಾರ್ಯಕ್ರಮವನ್ನು ನೋಡಲು ಆನ್‌ಲೈನ್ ವ್ಯವಸ್ಥೆ ಕಲ್ಪಿಸಲಾಗಿದೆ.
100 ಕ್ಕೆ ಮೀರಿ ಜನರು ಸೇರದಂತೆ ಎಲ್ಲಾ ಕಡೆಗಳಲ್ಲೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿತ್ತು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆಯೇ ಖುದ್ದು ಸಿಎಂ ಬಿಎಸ್ ಯಡಿಯೂರಪ್ಪ ಅವರು ಡಿಕೆ ಶಿವಕುಮಾರ್‌ಗೆ ದೂರವಾಣಿ ಕರೆ ಮಾಡಿ ಪದಗ್ರಹಣ ಫಂಕ್ಷನ್ ಮಾಡಿಕೊಳ್ಳುವಂತೆ ಹೇಳಿದ್ದರು.