ಪ್ರಧಾನಿ ಮೋದಿ ಕರೆಗೆ ಬೆಲೆ ಕೊಟ್ಟ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ
ಕೊರೋನಾ ಭೀತಿಯ ಮಧ್ಯೆಯೂ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಮತ್ತೊಂದೆಡೆ ಈ ದೀಪಾವಳಿಯಂದು ಒಂದು ದೀಪ ಸೈನಿಕರಿಗಾಗಿ ಬೆಳಗಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದು, ಅದನ್ನ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಪಾಲಿಸಿದ್ದಾರೆ.
ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರು ಬೆಳಕಿನ ಹಬ್ಬ ದೀಪಾವಳಿ ಅಂಗವಾಗಿ ಇಂದು (ಭಾನುವಾರ) ದೀಪಾವಳಿ ಆಚರಿಸದರು.
ಕುಟುಂಬ ಸಮೇತರಾಗಿ ದೀಪ ಹಚ್ಚಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿರುವಂತೆ ಗಡಿಯಲ್ಲಿ ತಮ್ಮ ಪ್ರಾಣದ ಹಂಗು ತೊರೆದು ನಮ್ಮೆಲ್ಲರನ್ನು ಕಾಯುತ್ತಿರುವ ಹೆಮ್ಮೆಯ ಸೈನಿಕರಿಗಾಗಿ ದೀಪ ಹಚ್ಚುವ ಮೂಲಕ ಪ್ರಾರ್ಥಿಸಿದರು.
ಈ ದೀಪಾವಳಿಯಂದು ಒಂದು ದೀಪ ಸೈನಿಕರಿಗಾಗಿ ಬೆಳಗಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದರು.
ಮೋದಿ ಕರೆ ನೀಡಿದ ಹಿನ್ನೆಲೆಯಲ್ಲಿ ಅರವಿಂದ ಲಿಂಬಾವಳಿ ಅವರು ದೀಪ ಹಚ್ಚಿದರು.