ಮೋಡಗಳಲ್ಲಿ ಮೂಡಿ ಬಂದ ಯೇಸು ಕ್ರಿಸ್ತ, ಫೋಟೋ ವೈರಲ್!

First Published 18, May 2019, 3:46 PM

ಮೋಡಗಳಲ್ಲಿ ಚಿತ್ರ ವಿಚಿತ್ರ ದೃಶ್ಯಗಳು ಕಾಣುವುದು ಸಹಜ, ಆದರೀಗ ಮೋಡಗಳಲ್ಲಿ ಮೂಡಿ ಬಂದ ಯೇಸು ಕ್ರಿಸ್ತನಂತೆ ಕಾಣುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಫೋಟೋಗಳ ಒಂದು ಝಲಕ್ ಇಲ್ಲಿದೆ

ಅರ್ಜೆಂಟೈನಾದಲ್ಲಿ ಮೂಡಿದ ಮೋಡಗಳಲ್ಲಿ ಯೇಸು ಕ್ರಿಸ್ತನಂತಹ ಆಕೃತಿ ಕಾಣಿಸಿಕೊಂಡಿದ್ದು, ಸದ್ಯ ಈ ಪೋಟೋಗಳು ವೈರಲ್ ಆಗಿವೆ.

ಇಲ್ಲಿನ ಸೇಂಟ್ ಸಲ್ವಾದೊರ್ ನಗರದಲ್ಲಿ ಮೂಡಿದ್ದ ಮೋಡಗಳಲ್ಲಿ ಕಂಡು ಬಂದ ದೃಶ್ಯಗಳನ್ನು ಮೋನಿಕಾ ಅರಾಮಾಯೋ ಎಂಬವರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

ಮೋಡಗಳಲ್ಲಿ ಮೂಡಿ ಬಂದಿರುವ ಈ ದೃಶ್ಯ, ಬ್ರೆಜಿಲ್ ನ ರಿಯೋ ಡಿ ಜನೇರಿಯಾದಲ್ಲಿರುವ ಯೇಸುವಿನ 'ಕ್ರೈಸ್ಟ್ ದ ರಿಡೀಮರ್' ಪ್ರತಿಮೆಯಂತೆ ಕಂಡು ಬಂದಿದೆ ಎಂಬುವುದು ಕೆಲವರ ಅಭಿಪ್ರಾಯವಾಗಿದೆ.

ಮತ್ತೆ ಕೆಲವರು ಯೇಸುವನ್ನು ಶಿಲುಭೆಗೇರಿಸುವುದಕ್ಕೂ ಮುನ್ನ ತೊಡಿಸಲಾದ ಮುಳ್ಳಿನ ಕಿರೀಟ ತೊಟ್ಟಂತಹ ದೃಶ್ಯದಂತೆ ಭಾಸವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದ ಕೆಲ ನೆಟ್ಟಿಗರು ಇದು ಬೆಳಕಿನಾಟ, ಮೋಡಗಳಲ್ಲಿ ಇಂತಹ ಆಕೃತಿಗಳು ಕಾಣುವುದು ಸಾಮಾನ್ಯ ಎಂದಿದ್ದಾರೆ. ಇನ್ನು ಕೆಲವರು ಇದು ಫೋಟೋಶಾಪ್ ಮಾಡಿ ಮೂಡಿಸಿರುವ ದೃಶ್ಯ, ಕೆವಲ ಕಣ್ಕಟ್ಟು ಎಂದು ಕಮೆಂಟ್ ಮಾಡಿದ್ದಾರೆ

ಮೋಡಗಳಲ್ಲಿ ಇಂತಹ ದೃಶ್ಯಗಳಲ್ಲಿ ಕಾಣುತ್ತಿರುವುದು ಹೊಸತೇನಲ್ಲ. ವಿಜ್ಞಾನಿಗಳನ್ವಯ ವ್ಯಕ್ತಿಯೊಬ್ಬ ಮೋಡಗಳನ್ನು ನೋಡುವಾಗ ಆತನ ಮನದಲ್ಲಿ ಯಾವ ಯೋಚನೆ ಅಥವಾ ಯಾವ ಚಿತ್ರಣವಿರುತ್ತದೋ ಅದೇ ಮೋಡದಲ್ಲೂ ಕಾಣಿಸಿಕೊಳ್ಳುತ್ತದೆ ಎನ್ನಲಾಗಿದೆ.