MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
IPL Auction Update
Karnataka Weather Update
PM Narendra Modi Birthday
Karnataka Cabinet Meeting
UPI Payment Charges
Nelamangala Metro Connectivity
Karnataka Congress District Presidents
Dharwad Tehsildar
Bengaluru PVR INOX Fined 75K
Gadag's Bhishma Lake
Koppal Ancient Inscription
Coastal Karnataka Railway Connectivity
Sakleshpur Railway Project
  • Home
  • Money
  • UPI: ಸರ್ಕಾರಕ್ಕೆ ಹೋದದ್ದು ಸಣ್ಣ ಪಾಲು! ಯುಪಿಐ 'MDR'ನ ಅಸಲಿ ಲಾಭ ತಲುಪುತ್ತಿರೋದು ಆ ದೈತ್ಯರಿಗೆ! ಶಾಕಿಂಗ್ ಮಾಹಿತಿ ರಿವೀಲ್!

UPI: ಸರ್ಕಾರಕ್ಕೆ ಹೋದದ್ದು ಸಣ್ಣ ಪಾಲು! ಯುಪಿಐ 'MDR'ನ ಅಸಲಿ ಲಾಭ ತಲುಪುತ್ತಿರೋದು ಆ ದೈತ್ಯರಿಗೆ! ಶಾಕಿಂಗ್ ಮಾಹಿತಿ ರಿವೀಲ್!

2026ರಿಂದ ಜಾರಿಗೆ ಬರಲಿರುವ ಯುಪಿಐ ಹೊಸ ನಿಯಮದಂತೆ 2,000 ರೂ. ಮೇಲ್ಪಟ್ಟ ಪಾವತಿಗಳಿಗೆ ಎಂಡಿಆರ್ ಶುಲ್ಕ ವಿಧಿಸಲಾಗುತ್ತದೆ. ಈ ಶುಲ್ಕದ ಬಹುಪಾಲು ಲಾಭ ಸರ್ಕಾರಕ್ಕಲ್ಲ, ಬದಲಾಗಿ ಆ ದೈತ್ಯರ ಜೇಬಿಗೆ ಹೋಗಲಿದೆ ಅದರ ಸಂಪೂರ್ಣ ವಿವರ ಇಲ್ಲಿದೆ.

2 Min read
Author : Bhimasi M Koleppanavar
Published : Sep 17 2026, 05:22 PM IST
Share this Photo Gallery
  • FB
  • TW
  • Linkdin
  • Whatsapp
15
ಜೀವನದ ಭಾಗವಾದ ಯುಪಿಐ!
Image Credit : Asianet News

ಜೀವನದ ಭಾಗವಾದ ಯುಪಿಐ!

ನವದೆಹಲಿ: ಭಾರತದಲ್ಲಿ ಯುಪಿಐ (UPI) ಎನ್ನುವುದು ಪ್ರತಿಯೊಬ್ಬರ ದೈನಂದಿನ ಜೀವನದ ಭಾಗವಾಗಿದೆ. ಟೀ ಅಂಗಡಿಯಿಂದ ಹಿಡಿದು ದೊಡ್ಡ ಶಾಪಿಂಗ್ ಮಾಲ್‌ಗಳವರೆಗೆ ಉಚಿತವಾಗಿ ನಡೆಯುತ್ತಿದ್ದ ಈ ಡಿಜಿಟಲ್ ಪಾವತಿ ವ್ಯವಸ್ಥೆಯ ಹಿನ್ನೆಲೆಯಲ್ಲಿ ಈಗ ಭಾರಿ ಆರ್ಥಿಕ ಸಂಚಲನವೊಂದು ಸೃಷ್ಟಿಯಾಗಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಇತ್ತೀಚೆಗೆ ಬಿಡುಗಡೆ ಮಾಡಿರುವ ದತ್ತಾಂಶಗಳು, 'ಉಚಿತ ಸೇವೆ'ಯ ಮುಸುಕಿನ ಹಿಂದೆ ನಿಜಕ್ಕೂ ಹಣ ಯಾರ ಜೇಬಿಗೆ ತಲುಪುತ್ತಿದೆ ಎಂಬ ಅಚ್ಚರಿಯ ಸತ್ಯವನ್ನು ಬಟಾಬಯಲು ಮಾಡಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಎಓಡಿಆರ್ ನಿಯಮ ಮತ್ತು ಸಸ್ಪೆನ್ಸ್!
Image Credit : Asianet News

ಎಓಡಿಆರ್ ನಿಯಮ ಮತ್ತು ಸಸ್ಪೆನ್ಸ್!

ಅಕ್ಟೋಬರ್ 15, 2026 ರಿಂದ ಜಾರಿಗೆ ಬರಲಿರುವ ಹೊಸ ನಿಯಮದಂತೆ, ಮಧ್ಯಮ ಮತ್ತು ದೊಡ್ಡ ಮಳಿಗೆಗಳಲ್ಲಿ 2,000 ರೂಪಾಯಿಗಿಂತ ಹೆಚ್ಚಿನ ಯುಪಿಐ ಪಾವತಿಗಳಿಗೆ ಶೇಕಡಾ 0.4 ರಷ್ಟು ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ವಿಧಿಸಲಾಗುತ್ತದೆ. ಮೇಲ್ನೋಟಕ್ಕೆ ಈ ಶುಲ್ಕವು ಸರ್ಕಾರ ಅಥವಾ ನಿಯಂತ್ರಣ ಸಂಸ್ಥೆಗಳ ಖಜಾನೆ ತುಂಬುತ್ತದೆ ಎಂದು ಸಾಮಾನ್ಯ ಜನರು ಭಾವಿಸಿದ್ದರು. ಆದರೆ, ಎನ್‌ಪಿಸಿಐ ದತ್ತಾಂಶವನ್ನು ವಿಶ್ಲೇಷಿಸಿದಾಗ ಹೊರಬಿದ್ದ ಸತ್ಯವೇ ಬೇರೆ. ಈ ಶೇಕಡಾವಾರು ಸಂಗ್ರಹದ ಅಸಲಿ ಸಿಂಹಪಾಲು ತಲುಪುತ್ತಿರುವುದು ಸರ್ಕಾರಕ್ಕಲ್ಲ, ಬದಲಾಗಿ ಖಾಸಗಿ ಬ್ಯಾಂಕುಗಳು ಮತ್ತು ವಿದೇಶಿ ತಂತ್ರಜ್ಞಾನ ದೈತ್ಯ ಕಂಪನಿಗಳ ಜೇಬಿಗೆ.

Related Articles

Related image1
UPI Payment: ಯಾರೇ ವಿರೋಧಿಸಿದ್ರೂ ಯುಪಿಐ ಮೇಲಿನ ಶುಲ್ಕ ವಾಪಸ್ ಇಲ್ಲ: ಹೊರಬಿತ್ತು ಅಚ್ಚರಿಯ ಸತ್ಯ! ಯಾವಾಗ ಜಾರಿ?
Related image2
UPI Payment: ಯುಪಿಐ ವಹಿವಾಟಿನ ಮೇಲಿನ ಶುಲ್ಕ: ಕೇಂದ್ರದ ವಿರುದ್ಧ ಹೋರಾಟಕ್ಕೆ ಕರೆ ನೀಡಿದ ಸಿಎಂ!
35
ಯಾರಿಗೆ ಸಿಗಲಿದೆ ಕೋಟಿ ಕೋಟಿ ಲಾಭ?
Image Credit : Asianet News

ಯಾರಿಗೆ ಸಿಗಲಿದೆ ಕೋಟಿ ಕೋಟಿ ಲಾಭ?

ಒಟ್ಟು ಸಂಗ್ರಹವಾಗುವ ಎಂಡಿಆರ್ ಶುಲ್ಕದಲ್ಲಿ ಅತಿ ಹೆಚ್ಚು ಪಾಲು ತಲುಪುವುದು ಗ್ರಾಹಕರು ಬಳಸುವ ಬ್ಯಾಂಕ್‌ಗೆ (Customer/Payer's Bank). ಎರಡನೇ ಅತಿ ದೊಡ್ಡ ಪಾಲು ಪಾವತಿ ಸ್ವೀಕರಿಸುವ ವ್ಯಾಪಾರಿಯ ಬ್ಯಾಂಕ್‌ಗೆ (Merchant's Bank) ಸಿಕ್ಕರೆ, ಮೂರನೇ ಪಾಲು PhonePe, Google Pay ನಂತಹ ಯುಪಿಐ ಆ್ಯಪ್‌ಗಳಿಗೆ ಹಾಗೂ ಪೇಮೆಂಟ್ ಪ್ರೊಸೆಸರ್‌ಗಳಿಗೆ ತಲುಪುತ್ತದೆ. ಖಾಸಗಿ ಬ್ಯಾಂಕುಗಳ ಪೈಕಿ ಯೆಸ್ ಬ್ಯಾಂಕ್ (Yes Bank) ಈ ವಹಿವಾಟುಗಳ ಪ್ರಕ್ರಿಯೆಯಲ್ಲಿ ಅಗ್ರಸ್ಥಾನದಲ್ಲಿದ್ದು, ಸಿಂಹಪಾಲನ್ನು ತನ್ನದಾಗಿಸಿಕೊಳ್ಳಲಿದೆ. ಇದರ ನಂತರ ಐಸಿಐಸಿಐ ಬ್ಯಾಂಕ್ (ICICI Bank), ಆಕ್ಸಿಸ್ ಬ್ಯಾಂಕ್ (Axis Bank) ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳು (HDFC Bank) ಅತಿ ಹೆಚ್ಚು ಆದಾಯ ಗಳಿಸಲಿವೆ.

45
ವಿದೇಶಿ ಆ್ಯಪ್ ದೈತ್ಯರ ರಾಜಾಧಿಪತ್ಯ!
Image Credit : Asianet News

ವಿದೇಶಿ ಆ್ಯಪ್ ದೈತ್ಯರ ರಾಜಾಧಿಪತ್ಯ!

ಮತ್ತೊಂದೆಡೆ, ಭಾರತೀಯರು ಬಳಸುವ ಯುಪಿಐ ಆ್ಯಪ್‌ಗಳ ಪೈಕಿ PhonePe ಮತ್ತು Google Pay ಜಂಟಿಯಾಗಿ ಶೇಕಡಾ 80 ರಷ್ಟು ವಹಿವಾಟು ಪ್ರಮಾಣವನ್ನು ನಿಯಂತ್ರಿಸುತ್ತವೆ. ಇದರರ್ಥ, MDR ಸಂಗ್ರಹದಿಂದ ಬರುವ ಸಾವಿರಾರು ಕೋಟಿ ರೂಪಾಯಿ ಲಾಭದ ಬೃಹತ್ ಪಾಲು ನೇರವಾಗಿ ಈ ಎರಡು ಪ್ರಮುಖ ಆ್ಯಪ್ ಕಂಪನಿಗಳ ಖಾತೆ ಸೇರಲಿದೆ. ಲೆಕ್ಕಾಚಾರಗಳ ಪ್ರಕಾರ, ಈ ಹೊಸ ವ್ಯವಸ್ಥೆಯಿಂದ ತಿಂಗಳಿಗೆ ಸುಮಾರು 2,400 ಕೋಟಿ ರೂಪಾಯಿಗಳಷ್ಟು ಆದಾಯ ಸೃಷ್ಟಿಯಾಗಲಿದ್ದು, ಅದರಲ್ಲಿ ಬಹುಪಾಲು ಈ ಖಾಸಗಿ ರಂಗದ ದೈತ್ಯ ಸಂಸ್ಥೆಗಳ ಪಾಲಾಗಲಿದೆ.

55
ಸಾಮಾನ್ಯ ಜನರಿಗೆ ತೊಂದರೆಯಿದೆಯೇ?
Image Credit : Asianet News

ಸಾಮಾನ್ಯ ಜನರಿಗೆ ತೊಂದರೆಯಿದೆಯೇ?

ಸಾಮಾನ್ಯ ಗ್ರಾಹಕರಿಗೆ ಮತ್ತು ಸಣ್ಣ ವ್ಯಾಪಾರಿಗಳಿಗೆ (ತಿಂಗಳಿಗೆ 1 ಲಕ್ಷ ರೂ. ವರೆಗೆ ವ್ಯಾಪಾರ ಮಾಡುವವರಿಗೆ) ಈ MDR ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಅಲ್ಲದೆ ವ್ಯಕ್ತಿಯಿಂದ ವ್ಯಕ್ತಿಗೆ (P2P) ನಡೆಯುವ ಹಣ ವರ್ಗಾವಣೆಗೆ ಯಾವುದೇ ಶುಲ್ಕವಿರುವುದಿಲ್ಲ. ಆದಾಗ್ಯೂ, "ಉಚಿತ ಡಿಜಿಟಲ್ ಕ್ರಾಂತಿ"ಯ ಹೆಸರಿನಲ್ಲಿ ದೇಶದ ಹಣಕಾಸು ವ್ಯವಸ್ಥೆಯ ಹಿನ್ನೆಲೆಯಲ್ಲಿ ಬೃಹತ್ ಖಾಸಗಿ ಬ್ಯಾಂಕುಗಳು ಹಾಗೂ ವಿದೇಶಿ ಮೂಲದ ಆ್ಯಪ್‌ಗಳು ಹೇಗೆ ಕೋಟ್ಯಂತರ ರೂಪಾಯಿಗಳ ಸೈಲೆಂಟ್ ಲಾಭ ಗಳಿಸುತ್ತಿವೆ ಎಂಬುದನ್ನು ಎನ್‌ಪಿಸಿಐ ದತ್ತಾಂಶ ಸಾಬೀತುಪಡಿಸಿದೆ.

About the Author

BM
Bhimasi M Koleppanavar
ಹುಬ್ಬಳ್ಳಿ-ಧಾರವಾಡದ ಮಧ್ಯದ ಶಿವಳ್ಳಿ ನನ್ನ ಹುಟ್ಟೂರು. ಮೈಸೂರಿನಲ್ಲಿ ಎಂ.ಎ. ವ್ಯಾಸಂಗ ಮಾಡುವಾಗಲೇ ಪತ್ರಿಕೋದ್ಯಮಕ್ಕೆ ಕಾಲಿಟ್ಟೆ. ಹುಬ್ಬಳ್ಳಿಯ ‘ಉದಯವಾಣಿ’ಯಿಂದ ಆರಂಭವಾದ ನನ್ನ ಮಾಧ್ಯಮ ಜರ್ನಿ, ‘ವಿಜಯವಾಣಿ’ ಮತ್ತು ‘ನ್ಯೂಸ್ 18’ ಸಂಸ್ಥೆಗಳ ಮೂಲಕ ಸಾಗಿತು. ಪ್ರಸ್ತುತ ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ರಾಜಕೀಯ, ಕ್ರೈಂ, ಸುದ್ದಿಗಳೇ ಅಚ್ಚು ಮೆಚ್ಚು.
ಯುಪಿಐ (ಏಕೀಕೃತ ಪಾವತಿ ಇಂಟರ್ಫೇಸ್)
ಕೇಂದ್ರ ಸರ್ಕಾರ
ಬ್ಯಾಂಕ್
ಹಣ (Hana)
 

Latest Videos
Recommended Stories
Recommended image1
ಮಗನ ಯೂಟ್ಯೂಬ್ ಚಾನೆಲ್‌ಗೆ ಮಿಲಿಯನ್ ವ್ಯೂಸ್, ಅಪ್ಪನ ಖಾತೆಗೆ ₹1 ಕೋಟಿ ನಷ್ಟ! ಈ ವೈರಲ್ ಸುದ್ದಿಯ ಅಸಲಿಯತ್ತೇನು?
Recommended image2
UPI Payment: ಯಾರೇ ವಿರೋಧಿಸಿದ್ರೂ ಯುಪಿಐ ಮೇಲಿನ ಶುಲ್ಕ ವಾಪಸ್ ಇಲ್ಲ: ಹೊರಬಿತ್ತು ಅಚ್ಚರಿಯ ಸತ್ಯ! ಯಾವಾಗ ಜಾರಿ?
Recommended image3
UPI: ವ್ಯಾಪಾರಿಗಳ ಗಮನಕ್ಕೆ; ಯುಪಿಐ ಪಾವತಿ ಮೇಲೆ ಎಂ‌ಡಿ‌ಆರ್ ಕಡಿತವಾಗದಂತೆ ತಡೆಯಲು ಈ 5 ಟಿಪ್ಸ್ ಬಳಸಿ!
Related Stories
Recommended image1
UPI Payment: ಯಾರೇ ವಿರೋಧಿಸಿದ್ರೂ ಯುಪಿಐ ಮೇಲಿನ ಶುಲ್ಕ ವಾಪಸ್ ಇಲ್ಲ: ಹೊರಬಿತ್ತು ಅಚ್ಚರಿಯ ಸತ್ಯ! ಯಾವಾಗ ಜಾರಿ?
Recommended image2
UPI Payment: ಯುಪಿಐ ವಹಿವಾಟಿನ ಮೇಲಿನ ಶುಲ್ಕ: ಕೇಂದ್ರದ ವಿರುದ್ಧ ಹೋರಾಟಕ್ಕೆ ಕರೆ ನೀಡಿದ ಸಿಎಂ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved