ಆ್ಯಪಲ್ ಐಫೋನ್ 14ಗೆ ಸೂಪರ್ ಆಫರ್: 64 ಸಾವಿರಕ್ಕೂ ಕಡಿಮೆ ಬೆಲೆಗೆ ಖರೀದಿಸಲು ಹೀಗೆ ಮಾಡಿ..
ಐಫೋನ್ 15 ಸೀರಿಸ್ ಬಿಡುಗಡೆ ಬಳಿಕ ಐಫೋನ್ 14 ಬೆಲೆಯನ್ನು ಕಡಿಮೆ ಮಾಡಿದೆ. ಆದರೆ, ನೀವು ಆ್ಯಪಲ್ ಸ್ಟೋರ್‌ನಲ್ಲಿ ಲಭ್ಯವಿರುವ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿಸಲು ಹೀಗೆ ಮಾಡಿ..

ಆ್ಯಪಲ್ ಕಂಪನಿ ಐಫೋನ್ 15 ಸೀರಿಸ್ ಅನ್ನು ಬಿಡುಗಡೆ ಮಾಡಿದ್ದು, ಈ ಹಿನ್ನೆಲೆ ಐಫೋನ್ 14 ಬೆಲೆಯನ್ನು ಕಡಿಮೆ ಮಾಡಿದೆ. ಐಫೋನ್ 14 ಪ್ರೋ ಮತ್ತು ಐಫೋನ್ 14 ಪ್ರೋ ಮ್ಯಾಕ್ಸ್ ಮಾಡೆಲ್‌ಗಳ ಮಾರಾಟ ಸ್ಥಗಿತಗೊಳಿಸಿದ್ದರೂ, ಐಫೋನ್ 14 ಮತ್ತು ಐಫೋನ್ 14 ಪ್ಲಸ್ ಈ ಮೊದಲಿಗಿಂತ ಹೆಚ್ಚು ಕೈಗೆಟುಕುವ ದರದಲ್ಲಿದೆ.
ಇನ್ನು, ನೀವು ಐಫೋನ್ 15 ಬದಲು iPhone 14 ಅನ್ನು ಖರೀದಿಸಲು ಯೋಜಿಸುತ್ತಿದ್ದರೆ, ನೀವು ಅದನ್ನು ಆ್ಯಪಲ್ ಸ್ಟೋರ್‌ನಿಂದ ಆನ್‌ಲೈನ್‌ನಲ್ಲಿ 65,000 ರೂಗಳಿಗೆ ಸುಲಭವಾಗಿ ಖರೀದಿಸುವ ಮಾರ್ಗವಿದೆ. ಹೇಗೆ ಅಂತೀರಾ.. ಇಲ್ನೋಡಿ..
Apple iPhone 14 ಬೆಲೆ ಕಡಿತ
ಆ್ಯಪಲ್ ಐಫೋನ್ 14 ಅನ್ನು 79,900 ರೂಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿತ್ತು. ಆದರೆ, ಐಫೋನ್ 15 ಸೀರಿಸ್ ಬಿಡುಗಡೆಯ ನಂತರ, ಆ್ಯಪಲ್ ಅಧಿಕೃತವಾಗಿ iPhone 14 ನಲ್ಲಿ 10 ಸಾವಿರ ರೂ. ಬೆಲೆ ಕಡಿತ ಘೋಷಿಸಿದೆ. ಇದು ಬೆಲೆಯನ್ನು 69,900 ರೂ. ಗೆ ತರುತ್ತದೆ. ಇದರರ್ಥ, ಅಧಿಕೃತ ಬೆಲೆ ಕಡಿತದೊಂದಿಗೆ ಫೋನ್ ಈಗಾಗಲೇ 70,000 ರೂ ಕ್ಕೂ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.
ಇದು ಐಫೋನ್ 14 ಪ್ಲಸ್‌ಗೆ ಸಹ ಅನ್ವಯಿಸುತ್ತದೆ. ಫೋನ್‌ನ ಅಧಿಕೃತ ಬಿಡುಗಡೆ ಬೆಲೆ 89,900 ರೂ. ಆಗಿದ್ದರೂ, ರಿಯಾಯಿತಿಯ ನಂತರ, 79,900 ರೂ. ಗಳಲ್ಲಿ ಲಭ್ಯವಿದೆ.
ಬ್ಯಾಂಕ್ ರಿಯಾಯಿತಿ
ಇದಲ್ಲದೇ, HDFC ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳ ಮೂಲಕ ಖರೀದಿದಾರರು 4,000 ರೂ.ಗಳ ಹೆಚ್ಚುವರಿ ರಿಯಾಯಿತಿಯನ್ನು ಸಹ ಪಡೆಯಬಹುದು. ಹೆಚ್ಚುವರಿ 4,000 ರೂ. ರಿಯಾಯಿತಿ ಸೇರಿದಂತೆ, ಫೋನ್‌ನ ಬೆಲೆ 65,900 ರೂ. ಗೆ ಸಿಗುತ್ತದೆ.
ಅದೇ ರೀತಿ, ಐಫೋನ್ 14 ಪ್ಲಸ್ HDFC ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳ ರಿಯಾಯಿತಿಯ ನಂತರ 75,500 ರೂ. ಗೆ ಲಭ್ಯವಿರುತ್ತದೆ.
ಅಷ್ಟೇ ಅಲ್ಲದೆ, ಇದಕ್ಕೂ ಕಡಿಮೆ ಬೆಲೆಗೆ ಐಫೋನ್ 14 ಅನ್ನು ಖರೀದಿಸಲು ಬಯಸಿದರೆ, ನೀವು ಅದರ ಬೆಲೆಗಳನ್ನು ಅಮೆಜಾನ್ ಇಂಡಿಯಾ ವೆಬ್‌ಸೈಟ್, ಕ್ರೋಮಾ, ರಿಲಯನ್ಸ್ ಡಿಜಿಟಲ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಇತರ ಆನ್‌ಲೈನ್ ಚಿಲ್ಲರೆ ಅಂಗಡಿಗಳಲ್ಲಿ ಪರಿಶೀಲಿಸಬಹುದು. ಬ್ಯಾಂಕ್ ರಿಯಾಯಿತಿಗಳು ಸೇರಿದಂತೆ 63,900 ರೂ.ಗಳಿಗೆ ನೀವು ಅದನ್ನು ಪಡೆಯಬಹುದು.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.