ಕಲಾವಿದೆ ಕೈಯಲ್ಲಿ ಅರಳಿದ ಗೆಜ್ಜೆವಸ್ತ್ರಗಳಿವು!

First Published 16, Aug 2019, 4:43 PM

ಹಬ್ಬ ಹರಿದಿನಗಳು ಬಂತೆಂದರೆ ದೇವರ ಅಲಂಕಾರಕ್ಕೆ ಗೆಜ್ಜೆವಸ್ತ್ರ ಬೇಕೇಬೇಕು. ಹತ್ತಿಯಿಂದ ಮಾಡುವ ಈ ಗೆಜ್ಜೆವಸ್ತ್ರ ದೇವರ ಪೂಜೆಗೆ ಶ್ರೇಷ್ಠ ಎನ್ನುವ ನಂಬಿಕೆಯಿದೆ. ಶಿವಮೊಗ್ಗ ಜಿಲ್ಲೆಯಕಪ್ದೂರಿನ ಸವಿತಾ ಗುರುಪ್ರಸಾದ್ ಬಣ್ಣ ಬಣ್ಣದ ರಂಗೋಲಿ ಇಡುವುದರಲ್ಲಿ, ಗೆಜ್ಜೆವಸ್ತ್ರ ಮಾಡುವುದರಲ್ಲಿ ಎತ್ತಿದ ಕೈ. ಇವರ ಕೈಯಲ್ಲಿ ಅರಳಿದ ಚಂದ ಚಂದದ ಗೆಜ್ಜೆವಸ್ತ್ರಗಳಿವು. 

ನಾಜೂಕಿನಿಂದ ಮಾಡೋ ಗೆಜ್ಜೆವಸ್ತ್ರವನ್ನು ವಿಧವಿಧವಾಗಿ ಸೃಷ್ಟಿಸುವುದರಲ್ಲಿ ಸವಿತಾರದ್ದು ಎತ್ತಿದ ಕೈ.

ಇನ್ನೇನು ಗೌರಿ ಹಬ್ಬಕ್ಕೆ ಎರಡು ವಾರಗಳಿವೆ. ಮಲೆನಾಡಲ್ಲಿ ಬಿಡದೆ ಮಳೆ ಸುರಿಯುತ್ತಿದೆ. ತಾಯಂದಿರು ಮಾತ್ರ ಗೆಜ್ಜೆವಸ್ತ್ರ ಮಾಡುವಲ್ಲಿ ಬ್ಯುಸಿ.

ಗೌರಿ ವ್ರತ ಮಾಡುವ ಮಗಳಿಗೆ ತಾಯಿ ಮನೆಯಿಂದ ಗೆಜ್ಜೆವಸ್ತ್ರ ಕೊಡುವುದು ಸಂಪ್ರದಾಯ.

ಹತ್ತಿಯಲ್ಲಿ, ಸಂತ್ರದ (ಸಂತೆ) ತಗಡಿನೊಂದಿಗೆ ಮಾಡಿದ ಚೆಂದನೆಯ ವಸ್ತ್ರದೊಂದಿಗೆ ತವರು ಮನೆಯಿಂದ ಅರಿಷಿನ-ಕುಂಕುಮ ಬಂದರೆ ಹೆಣ್ಣಿಗೆ ಎಲ್ಲಿಲ್ಲದ ಸಂಭ್ರಮ.

ಕಲೆಯೊಂದಿಗೆ ಭಾವನೆಗಳನ್ನು ಹೊತ್ತು ತರುವ ತರಾವರಿ ಗೆಜ್ಜೆವಸ್ತ್ರವನ್ನು ಕಣ್ತುಂಬಿಕೊಳ್ಳುವುದು ಹೆಣ್ಣಿಗೆ ಸಿಗೋ ಸುಖಗಳಲ್ಲಿ ಒಂದು.

ಮಣೆ ಮೇಲೆ ತೆಳ್ಳನೆ ಎಳೆ ಮಾಡಿಕೊಂಡು, ಅದರಿಂದಲೇ ವಿಧ ವಿಧವಾದ ಮಾಲೆ ತಯಾರಿಸೋ ಗೆಜ್ಜೆವಸ್ತ್ರ ಮಾಡುವುದೊಂದು ಅದ್ಭುತ ಕಲೆ.

ಮಗಳೊಂದಿಗೆ ಗಣೇಶನನ್ನು ಪೂಜಿಸುವ ಅಳಿಯನಿಗೂ ತವರಿಂದ ಬರುತ್ತೆ ಗೆಜ್ಜೆವಸ್ತ್ರ.

ಅಮ್ಮ ಪ್ರೀತಿ ತುಂಬಿಸಿ, ಹಾರೈಸಿ ಕಳುಹಿಸಿದ ಗೆಜ್ಜೆವಸ್ತ್ರಕ್ಕೆ ಅರಿಶಿಣ-ಕುಂಕುಮ ಹಚ್ಚಿ ದೇವರಿಗೆ ಏರಿಸಿದರೆ ಭಗವಂತನೂ ಸಂಪ್ರೀತನಾಗುತ್ತಾನೆಂಬ ನಂಬಿಕೆ.

ನಾಲ್ಕು ಮುತ್ತೈದೆಯೊಂದಿಗೆ ಗೌರಿ ಪೂಜೆ ಮಾಡುವ ಹೆಣ್ಣಿಗೆ ತಾನು ತಂದ ಗೆಜ್ಜೆವಸ್ತ್ರವನ್ನು ಪಕ್ಕದವರು ಹೊಗಳಿದರೆ ಎಲ್ಲಿಲ್ಲದ ಹೆಮ್ಮೆ.

ಗೌರಿ ಹಬ್ಬಕ್ಕೆ ತಂಗಿಗೆ ಅಥವಾ ಅಕ್ಕನಿಗೆ ಕುಂಕುಮ ಕೊಡಲೆಂದು ಅಣ್ಣ ಅಥವಾ ತಮ್ಮ ಮನೆಗೆ ಬರುವುದೇ ಹೆಣ್ಣಿಗೆ ಎಲ್ಲಿಲ್ಲದ ಖುಷಿ.

ತೆಂಗಿನಕಾಯಿ, ಎಳೆ ಬತ್ತಿ, ಅರಿಷಿಣ-ಕುಂಕುಮ, ದಕ್ಷಿಣೆ, ಸೀರೆ...ಹೀಗೆ ಎಲ್ಲ ಮಂಗಲ ವಸ್ತುಗಳೊಂದಿಗೆ ಗೆಜ್ಜೆವಸ್ತ್ರ ಹೆಣ್ಣಿನ ಕೈ ತಲುಪುತ್ತದೆ.

loader