ಹುನಗುಂದ: ಕೊರೋನಾ ಮಧ್ಯೆ ಪ್ರವಾಹ ಬಾರದಿರಲೆಂದು ಸಂಗಮನಾಥನಿಗೆ ವಿಶೇಷ ಪೂಜೆ
ಬಾಗಲಕೋಟೆ(ಜು.18): ಮಹಾಮಾರಿ ಕೊರೋನಾ ಮಧ್ಯೆ ಪ್ರವಾಹ ಬಾರದಿರಲೆಂದು ಯುವಕರ ತಂಡವೊಂದು ಪ್ರಾರ್ಥಿಸಿ ನದಿಗೆ ಪೂಜೆ ಸಲ್ಲಿಸಿದ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ತ್ರಿವೇಣಿ ಸಂಗಮದ ನಾಡು ಕೂಡಲಸಂಗಮದಲ್ಲಿ ಇಂದು(ಶನಿವಾರ) ನಡೆದಿದೆ.
ನದಿ ತೀರದ ಗ್ರಾಮಗಳಿಗೆ ಪ್ರವಾಹ ಭೀತಿ ಹಿನ್ನೆಲೆಯಲ್ಲಿ ವಿಶೇಷವಾಗಿ ಪೂಜೆ ಸಲ್ಲಿಸಿದ ಕ್ರಾಂತಿರಂಗ ಸ್ವಯಂ ಸೇವಾ ಸಂಘಟನೆ
ಬಸವಣ್ಣನವರ ಐಕ್ಯಮಂಟಪದ ಬಳಿ ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಗಳಿಗೆ ಕಾಯಿ ಒಡೆದು, ನದಿಯಲ್ಲಿ ಇಳಿದು ನಮಸ್ಕರಿಸಿ ಪೂಜೆ ಸಲ್ಲಿಸಿದ ಯುವಕರು. ನದಿ ಪೂಜೆ ಬಳಿಕ ಸಂಗಮನಾಥ ದೇವರಿಗೂ ಪೂಜೆ ಸಲ್ಲಿಸಿದ್ದಾರೆ.
ಈಗಾಗಲೇ ಕೊರೋನಾ ಭೀತಿಯಿಂದ ಕಂಗೆಟ್ಟಿರೋ ಜನರಿಗೆ ಇದೀಗ ಪ್ರವಾಹ ಭೀತಿ ಎದುರಾಗಿದೆ. ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಹೆಚ್ಚುವರಿ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಕೂಡಲಸಂಗಮದ ಬಳಿಯ ನದಿ ತೀರದ ಗ್ರಾಮಗಳಿಗೆ ಆತಂಕ ಎದುರಾಗಿದೆ.
ಕಳೆದ ಬಾರಿ ಅತೀವ ಪ್ರವಾಹದಿಂದ ಕಂಗೆಟ್ಟಿದ್ದ ನದಿ ತೀರದ ಗ್ರಾಮಗಳು