MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಪತಿಯ ಲಾಕರ್‌ನಿಂದ 23 ಲಕ್ಷ ಮೌಲ್ಯದ ಚಿನ್ನ ಕದ್ದ ಪತ್ನಿ! ಕಾಪುವಿನಲ್ಲೊಂದು ವಿಚಿತ್ರ ಕಳ್ಳತನ

ಪತಿಯ ಲಾಕರ್‌ನಿಂದ 23 ಲಕ್ಷ ಮೌಲ್ಯದ ಚಿನ್ನ ಕದ್ದ ಪತ್ನಿ! ಕಾಪುವಿನಲ್ಲೊಂದು ವಿಚಿತ್ರ ಕಳ್ಳತನ

ಉಡುಪಿಯ ಉಚ್ಚಿಲದಲ್ಲಿ, ಪತಿಯೊಬ್ಬರು ತಮ್ಮ ಪತ್ನಿಯೇ ಬ್ಯಾಂಕ್ ಲಾಕರ್ ಕೀ ಕದ್ದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ ಎಂದು ಆರೋಪಿಸಿದ್ದಾರೆ. ಪತ್ನಿ ನಕಲಿ ಕೀ ತಯಾರಿಸಿ ಈ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

1 Min read
Author : Kannadaprabha News
Published : Apr 20 2026, 07:57 AM IST
Share this Photo Gallery
  • FB
  • TW
  • Linkdin
  • Whatsapp
15
ಲಕ್ಷಾಂತರ ಮೌಲ್ಯದ ಚಿನ್ನ
Image Credit : Gemini

ಲಕ್ಷಾಂತರ ಮೌಲ್ಯದ ಚಿನ್ನ

ಉಡುಪಿ: ಕಾಪು ತಾಲೂಕಿನ ಉಚ್ಚಿಲ ಎಂಬಲ್ಲಿ ವಿಚಿತ್ರ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ಪತ್ನಿಯೇ ಪತಿಯ ಲಾಕರ್‌ ಕೀ ಕಳವು ಮಾಡಿ ಲಕ್ಷಾಂತರ ಮೌಲ್ಯದ ಚಿನ್ನ ದೋಚಿರುವ ಘಟನೆ ನಡೆದಿದೆ. (ಸಾಂದರ್ಭಿಕ ಚಿತ್ರ)

25
ದಾಂಪತ್ಯ ಜೀವನದಲ್ಲಿ ವೈಮನಸ್ಸು
Image Credit : Gemini

ದಾಂಪತ್ಯ ಜೀವನದಲ್ಲಿ ವೈಮನಸ್ಸು

ಉಚ್ಚಿಲ ಗ್ರಾಮದ ನಿವಾಸಿ ಕಿರಣ್ ಕುಮಾರ್ (42), ಪಡುಬಿದ್ರಿಯ ಕಂಪನಿಯೊಂದರಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿದ್ದಾರೆ. ಇವರು 2016ರಲ್ಲಿ ವನಿತಾ ಎಂಬವರೊಂದಿಗೆ ವಿವಾಹವಾಗಿದ್ದು, ದಾಂಪತ್ಯ ಜೀವನದಲ್ಲಿ ವೈಮನಸ್ಸು ಉಂಟಾಗಿ ಪ್ರಸ್ತುತ ಒಂದೇ ಮನೆಯಲ್ಲಿ ಪ್ರತ್ಯೇಕ ಕೊಠಡಿಗಳಲ್ಲಿ ವಾಸಿಸುತ್ತಿದ್ದರು. (ಸಾಂದರ್ಭಿಕ ಚಿತ್ರ)

Related Articles

Related image1
ಸರಗೂರು ಕೊ*ಲೆಯ ರಹಸ್ಯ ಬಿಚ್ಚಿಟ್ರು ಎಸ್‌ಪಿ; ಅಮೃತಾ-ಸಿದ್ದೇಶ್ ಪ್ಲಾನ್ ಏನಾಗಿತ್ತು?
Related image2
6 ನಿಮಿಷದ ಸೀನ್‌ಗಾಗಿ 90 ಕೋಟಿ ಖರ್ಚು ಮಾಡಿದ್ರು; ಕೊನೆಗೆ ಸಿನಿಮಾದಿಂದಲೇ ಡಿಲೀಟ್ ಆಯ್ತು ದೃಶ್ಯ
35
ದಾಖಲಾತಿಗಳು ಹಾಗೂ ಚಿನ್ನಾಭರಣ
Image Credit : Gemini

ದಾಖಲಾತಿಗಳು ಹಾಗೂ ಚಿನ್ನಾಭರಣ

ಕಿರಣ್ ಕುಮಾರ್ ತಮ್ಮ ಅಗತ್ಯ ದಾಖಲಾತಿಗಳು ಹಾಗೂ ಚಿನ್ನಾಭರಣಗಳನ್ನು ಐಡಿಬಿಐ ಬ್ಯಾಂಕಿನ ಉಡುಪಿ ಶಾಖೆಯ ಲಾಕರ್‌ ನಲ್ಲಿರಿಸಿದ್ದರು ಮತ್ತು ಅದರ ಕೀಯನ್ನು ಮನೆಯ ಅಲ್ಮಾರಿಯಲ್ಲಿ ಇಟ್ಟಿದ್ದರು. ಈ ವಿಷಯ ಪತ್ನಿಗೆ ಗೊತ್ತಾಗಿತ್ತು. (ಸಾಂದರ್ಭಿಕ ಚಿತ್ರ)

45
ಲಾಕರ್‌ನ ಕೀ ಕಳವು
Image Credit : AI Meta

ಲಾಕರ್‌ನ ಕೀ ಕಳವು

ಏಪ್ರಿಲ್ 10ರಂದು ಕಿರಣ್ ಕುಮಾರ್ ಕೆಲಸಕ್ಕೆ ಹೋಗಿದ್ದು, ಮಧ್ಯಾಹ್ನ ಸುಮಾರು 2 ಗಂಟೆಗೆ ವನಿತಾ ಅವರು ಮನೆಯ ಅಲ್ಮಾರಿಯ ಕೀ ಎಲ್ಲೋ ಬಿಸಾಡಿ ಹೋಗಿದೆ ಎಂದು ಹೇಳಿ ಕೀ ಮೇಕರ್‌ರೊಬ್ಬರನ್ನು ಕರೆಸಿ ಅಲ್ಮಾರಿಯ ನಕಲಿ ಕೀ ತಯಾರಿಸಿಕೊಂಡು, ಆ ಕೀಯಿಂದ ಅಲ್ಮಾರಿ ತರೆದು ಅದರೊಳಗಿದ್ದ ಬ್ಯಾಂಕಿನ ಲಾಕರ್‌ನ ಕೀ ಕಳವು ಮಾಡಿದ್ದಾರೆ. (ಸಾಂದರ್ಭಿಕ ಚಿತ್ರ)

ಇದನ್ನೂ ಓದಿ: ಇಂದು ಅಕ್ಷಯ ತೃತೀಯ: ₹20000 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ ಸೇಲ್‌ ನಿರೀಕ್ಷೆ

55
 169 ಗ್ರಾಂ ಚಿನ್ನಾಭರಣ
Image Credit : AI Meta

169 ಗ್ರಾಂ ಚಿನ್ನಾಭರಣ

ನಂತರ ಆ ಕೀಯನ್ನು ಬಳಸಿ ಐಡಿಬಿಐ ಬ್ಯಾಂಕಿನ ಉಡುಪಿ ಶಾಖೆಗೆ ತೆರಳಿ ಲಾಕರ್ ತೆರೆದು, ಸುಮಾರು 169 ಗ್ರಾಂ ಚಿನ್ನಾಭರಣ (ಅಂದಾಜು ಮೌಲ್ಯ 23.67 ಲಕ್ಷ ರು.) ಕಳವು ಮಾಡಿದ್ದಾರೆ ಎಂದು ಕಿರಣ್ ಕುಮಾರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. (ಸಾಂದರ್ಭಿಕ ಚಿತ್ರ)

ಇದನ್ನೂ ಓದಿ: ಬೆಂಗಳೂರು ಕಸಕ್ಕೆ ಹೊಸ ಸೂತ್ರ: ಇನ್ಮುಂದೆ 4 ವಿಧದ ವಿಂಗಡಣೆ ಕಡ್ಡಾಯ; BSWML ಸೂಚನೆ

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಉಡುಪಿ
ಪತ್ನಿ
ಗಂಡ
ಕಳ್ಳತನ ಪ್ರಕರಣ

Latest Videos
Recommended Stories
Recommended image1
ಬೆಂಗಳೂರು ಕಸಕ್ಕೆ ಹೊಸ ಸೂತ್ರ: ಇನ್ಮುಂದೆ 4 ವಿಧದ ವಿಂಗಡಣೆ ಕಡ್ಡಾಯ; BSWML ಸೂಚನೆ
Recommended image2
ದೂರು ಕೊಟ್ಟವಳ ವರಿಸಲು ವ್ಯಕ್ತಿಗೆ ಪೊಲೀಸ್‌ ಬೆದರಿಕೆ, ಹೈಕೋರ್ಟ್‌ ಕೆಂಡಾಮಂಡಲ
Recommended image3
ಕಾಂಗ್ರೆಸ್‌ನಿಂದ ದೇಶದ ಮಹಿಳಾ ಶಕ್ತಿಗೆ ಅಪಮಾನ: ಸಂಸದ ಬೊಮ್ಮಾಯಿ ಕಿಡಿ
Related Stories
Recommended image1
ಸರಗೂರು ಕೊ*ಲೆಯ ರಹಸ್ಯ ಬಿಚ್ಚಿಟ್ರು ಎಸ್‌ಪಿ; ಅಮೃತಾ-ಸಿದ್ದೇಶ್ ಪ್ಲಾನ್ ಏನಾಗಿತ್ತು?
Recommended image2
6 ನಿಮಿಷದ ಸೀನ್‌ಗಾಗಿ 90 ಕೋಟಿ ಖರ್ಚು ಮಾಡಿದ್ರು; ಕೊನೆಗೆ ಸಿನಿಮಾದಿಂದಲೇ ಡಿಲೀಟ್ ಆಯ್ತು ದೃಶ್ಯ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved