ಬಂಪರ್ ಹೊಡೆದ ಬೆಳಗಾವಿಯ ಚೌಕಾಶಿ ಕುಟುಂಬ, ಮನೆಯ 108 ಜನರಿಗೂ ಸಿಗಲಿದೆ ಗ್ಯಾರಂಟಿ ಲಾಭ!
ಬೆಳಗಾವಿ (ಜೂನ್.4): ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಗ್ಯಾರಂಟಿಗಳಿಂದ ಬೆಳಗಾವಿಯ ಗೋಕಾಕ್ ತಾಲೂಕಿನ ಬಡಿಗವಾಡ ಗ್ರಾಮದ ಚೌಕಾಶಿ ಕುಟುಂಬಕ್ಕೆ ಬಂಪರ್ ದೊರೆತಿದೆ. ಈ ಮನೆಯಲ್ಲಿರುವ 108 ಜನರಿಗೂ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಯ ಲಾಭ ಸಿಗಲಿದೆ.
ಕಾಂಗ್ರೆಸ್ ಸರಕಾರ ಘೋಷಿಸಿರುವ ಗ್ಯಾರಂಟಿಗಳಿಂದ ಬೆಳಗಾವಿಯ ಗೋಕಾಕ್ ತಾಲೂಕಿನ ಬಡಿಗವಾಡ ಗ್ರಾಮದ ಚೌಕಾಶಿ ಕುಟುಂಬಕ್ಕೆ ಬಂಪರ್ ದೊರೆತಂತಾಗಿದೆ. ಮನೆಯಲ್ಲಿರುವ 108 ಮಂದಿ ಸದಸ್ಯರಿಗೂ ಕಾಂಗ್ರೆಸ್‌ನ ಎಲ್ಲಾ ಐದು ಗ್ಯಾರಂಟಿ ಯೋಜನೆಗಳ ಲಾಭ ಸಿಗಲಿದೆ.
ವಿದ್ಯಾನಿಧಿ ಯೋಜನೆ, 200 ಯುನಿಟ್ ಉಚಿತ ವಿದ್ಯುತ್, ಉಚಿತ ಬಸ್ ಪ್ರಯಾಣ ಎಲ್ಲದರಲ್ಲೂ ಈ ಕುಟುಂಬಕ್ಕೆ ಬಹುಪಾಲು ಲಾಭ ಸಿಗಲಿದೆ. ಅವಿಭಕ್ತ ಕುಟುಂಬ ಆಗಿದ್ದರೂ ವಾಸಿಸಲು ಈ ಕುಟುಂಬ 9 ಮನೆಗಳನ್ನು ಹೊಂದಿದೆ. ಈ ಒಂದು ಕುಟುಂಬಕ್ಕೆಯೇ ಒಟ್ಟು ಪ್ರತಿ ತಿಂಗಳು 1800 ಯೂನಿಟ್ ವಿದ್ಯುತ್ ಸಿಗಲಿದೆ.
ಇದೇ ಮನೆಯಲ್ಲಿ ಈ ವರ್ಷ ಒಟ್ಟು 6 ಜನರು ಪದವಿ ಮುಗಿಸಿದ್ದು, ಎರಡು ವರ್ಷಗಳ ಅವಧಿಯಲ್ಲಿ ಈ ಕಟುಂಬಕ್ಕೆ 4.30 ಲಕ್ಷ ಹಣ ಸಿಗಲಿದೆ.
60 ಕ್ಕೂ ಅಧಿಕ ಹೆಣ್ಣು ಮಕ್ಕಳು ಈ ಮನೆಯಲ್ಲಿದ್ದು, ಈ ಎಲ್ಲರಿಗೂ ಬಸ್ ಪ್ರಯಾಣ ಉಚಿತವಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆಗೆ ಈ ಬಗ್ಗೆ ಕುಟುಂಬಸ್ಥರು ಮಾತುಕತೆ ನಡೆಸಿದ್ದಾರೆ.