ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸುತ್ತಮುತ್ತಲೂ ಹೈ ಅಲರ್ಟ್
ಕರಾವಳಿಯಲ್ಲಿ ಉಗ್ರರ ದಾಳಿ ಸಾಧ್ಯತೆ ಕಾರಣ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸುತ್ತಮುತ್ತಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಏರ್ ಪೋರ್ಟ್ ಸುತ್ತಮುತ್ತಲಿನ ಜನರನ್ನೂ ಏರ್ ಪೋರ್ಟ್ ಆಡಳಿತ ಮಂಡಳಿ ಎಚ್ಚರಿಸಿದೆ.
Mangaluru
ಮಂಗಳೂರು (Mangaluru) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Airport) ಸುತ್ತಮುತ್ತಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಏರ್ ಪೋರ್ಟ್ ಸುತ್ತಮುತ್ತಲಿನ ಪರಿಸರ ಜನರನ್ನೂ ಅಲರ್ಟ್ ಮಾಡಲಾಗಿದೆ. ಏರ್ ಪೋರ್ಟ್ ಆಡಳಿತ ಮಂಡಳಿ ಎಚ್ಚರಿಸಿದೆ.
Mangaluru
ದೇಶದಲ್ಲಿ ಉಗ್ರರ ವಿಧ್ವಂಸಕ ಕೃತ್ಯ ಸಾಧ್ಯತೆ ಬೆನ್ನಲ್ಲೇ ಮಂಗಳೂರು ಏರ್ ಪೋರ್ಟ್ (airport) ಸುತ್ತಮುತ್ತ ಅಲರ್ಟ್ ಘೋಷಣೆ ಮಾಡುವ ಮೂಲಕ ಜನರನ್ನು ಎಚ್ಚರಿಸಲಾಗಿದೆ. ವಿಮಾನ ನಿಲ್ದಾಣ ವ್ಯಾಪ್ತಿಯ ಅದ್ಯಪಾಡಿ ಸುತ್ತಮುತ್ತಲಿನ ಪರಿಸರದಲ್ಲಿ ಅಲರ್ಟ್ ಘೋಷಣೆಯಾಗಿದೆ.
Mangaluru
ಏರ್ ಪೋರ್ಟ್ ಭದ್ರತೆಯ ಸಿಐಎಸ್ಎಫ್ (CISF) ಹಾಗೂ ಬಜ್ಪೆ ಪೊಲೀಸರಿಂದ ಸ್ಥಳೀಯರಿಗೆ ಜಾಗೃತಿ ಮೂಡಿಸಲಾಗಿದೆ. ಅನುಮಾನಾಸ್ಪದ ವ್ಯಕ್ತಿ ಅಥವಾ ವಸ್ತು, ಡ್ರೋನ್ ಬಳಕೆ ಕಂಡು ಬಂದಲ್ಲಿ ಮಾಹಿತಿ ನೀಡಲು ಸೂಚನೆ ನೀಡಲಾಗಿದೆ.
Mangaluru
ಹಲವು ತಿಂಗಳ ಹಿಂದೆ ಮಂಗಳೂರು ಏರ್ ಪೋರ್ಟ್ ಸುತ್ತಮುತ್ತ ಹಲವು ಬಾರಿ ಡ್ರೊನ್ (Drone) ಹಾರಾಡಿರುವ ಹಿನ್ನೆಲೆ ಎಚ್ಚರಿಸಲಾಗಿದೆ. ಬಿಗಿ ಭದ್ರತೆಯಿದ್ದರೂ ತಿಂಗಳ ಹಿಂದೆ ಏರ್ ಪೋರ್ಟ್ ಪರಿಸರದಲ್ಲಿ ಡ್ರೋನ್ ಹಾರಾಟ ಮಾಡಿತ್ತು.
Mangaluru
ಮಂಗಳೂರಿನಲ್ಲಿ ಸ್ಯಾಟಲೈಟ್ ಫೋನ್ (satellite call) ಕರೆ ಹಾಗೂ ಉಗ್ರರ ಸ್ಲೀಪರ್ ಸೆಲ್ ಮಾಹಿತಿ ಹಿನ್ನೆಲೆ ಮತ್ತಷ್ಟು ಭದ್ರತೆ ಹೆಚ್ಚಿಸಲಾಗಿದೆ. ಮಂಗಳೂರಿನಲ್ಲಿ ಏರ್ ಪೋರ್ಟ್ ಗೆ ಕೇಂದ್ರ ಗುಪ್ತಚರ ಇಲಾಖೆ ಅಲರ್ಟ್ ರವಾನಿಸಿದೆ.
Mangaluru
ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ (suvarnanews) ಏರ್ ಪೋರ್ಟ್ (Airport) ಪಕ್ಕದ ಅದ್ಯಪಾಡಿ ಗ್ರಾಮಸ್ಥರು ತಮಗೆ ನೀಡಿರುವ ಎಚ್ಚರಿಕೆ ಸಂಬಂಧ ಮಾಹಿತಿ ನೀಡಿದ್ದಾರೆ. ನಾವು ಏರ್ ಪೋರ್ಟ್ ರನ್ ವೇ ಪಕ್ಕದಲ್ಲೇ ಇರುವ ಕಾರಣ ನಮ್ಮನ್ನು ಅಲರ್ಟ್ ಮಾಡಿದ್ದಾರೆ. ಏರ್ ಪೋರ್ಟ್ ಸಿಐಎಸ್ಎಫ್ ಸಿಬ್ಬಂದಿ ಮತ್ತು ಪೊಲೀಸರು ಬಂದು ಮಾತನಾಡಿದ್ದಾರೆ ಎಂದು ತಿಳಿಸಿದ್ದಾರೆ.