ಕೊರೋನಾ ಸಂಕಷ್ಟ: ಶ್ರೀರಂಗಪಟ್ಟಣದಲ್ಲಿ ಸರಳ ದಸರಾಗೆ ಚಾಲನೆ

First Published 24, Oct 2020, 10:21 AM

ಶ್ರೀರಂಗ​ಪ​ಟ್ಟಣ(ಅ.24): ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ದಸರಾ ಯಾವುದೇ ಆಡಂಬರವಿಲ್ಲದೇ ಸರಳ ಹಾಗೂ ಸಾಂಪ್ರದಾಯಿಕವಾಗಿ ಶುಕ್ರವಾರ ನಡೆಯಿತು.

<p>ಸಾಂಪ್ರದಾಯಿಕ ಸರಳ ದಸರಾಗೆ ಜಿಲ್ಲೆಯ 17 ಮಂದಿ ಕೊರೋನಾ ವಾರಿಯರ್ಸ್‌ಗಳು ನಾಡ ದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.&nbsp;</p>

ಸಾಂಪ್ರದಾಯಿಕ ಸರಳ ದಸರಾಗೆ ಜಿಲ್ಲೆಯ 17 ಮಂದಿ ಕೊರೋನಾ ವಾರಿಯರ್ಸ್‌ಗಳು ನಾಡ ದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು. 

<p>ತಾಲೂಕಿನ ಕಿರಂಗೂರು ವೃತ್ತದ ಬನ್ನಿ ಮಂಟಪದ ಬಳಿ ನಿರ್ಮಿಸಿದ್ದ ವೇದಿಕೆಯಲ್ಲಿ ಸಂಜೆ 4 ಗಂಟೆಗೆ ವಿಶೇಷವಾಗಿ ಅಲಂಕೃತಗೊಂಡಿದ್ದ ಚಾಮುಂಡೇಶ್ವರಿ ವಿಗ್ರಹ ಹೊತ್ತ ರಥಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.&nbsp;</p>

ತಾಲೂಕಿನ ಕಿರಂಗೂರು ವೃತ್ತದ ಬನ್ನಿ ಮಂಟಪದ ಬಳಿ ನಿರ್ಮಿಸಿದ್ದ ವೇದಿಕೆಯಲ್ಲಿ ಸಂಜೆ 4 ಗಂಟೆಗೆ ವಿಶೇಷವಾಗಿ ಅಲಂಕೃತಗೊಂಡಿದ್ದ ಚಾಮುಂಡೇಶ್ವರಿ ವಿಗ್ರಹ ಹೊತ್ತ ರಥಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. 

<p>ಸ್ಥಳೀಯ ಆಯ್ದ ಜಾನಪದ ಕಲಾತಂಡಗಳು ಪೂರ್ಣಕುಂಭ ಸಹಿತ ಮೆರವಣಿಗೆಗೆ ಸರಳ ಹಾಗೂ ಸಾಂಪ್ರದಾಯಿಕ ಚಾಲನೆ ನೀಡಿ ದಸರಾಗೆ ಮೆರಗು ನೀಡಿದರು.</p>

ಸ್ಥಳೀಯ ಆಯ್ದ ಜಾನಪದ ಕಲಾತಂಡಗಳು ಪೂರ್ಣಕುಂಭ ಸಹಿತ ಮೆರವಣಿಗೆಗೆ ಸರಳ ಹಾಗೂ ಸಾಂಪ್ರದಾಯಿಕ ಚಾಲನೆ ನೀಡಿ ದಸರಾಗೆ ಮೆರಗು ನೀಡಿದರು.

<p>ಪಟ್ಟಣದ ಚಾಮುಂಡೇಶ್ವರಿ ದೇವಾಲಯದಲ್ಲಿನ 5 ಅಡಿ ಎತ್ತರವಿರುವ ದೇವಿಯ ವಿಗ್ರಹ 250 ಕೆ.ಜಿ ತೂಕದ ಚಾಮುಂಡೇಶ್ವರಿ ಮೂರ್ತಿಯನ್ನು ಅಲಂಕರಿಸಿ ಮೆರವಣಿಗೆ ನಡೆಸಲಾಯಿತು. ರಥಸಾಗುವ ಪಟ್ಟಣದ ರಾಜ ಬೀದಿಗಳನ್ನು ತಳಿರು ತೋರಣ ಸೇರಿದಂತೆ ವಿದ್ಯುತ್‌ ದೀಪಾಲಂಕಾರದಿಂದ ಅಲಂಕರಿಸಲಾಗಿತ್ತು. ಕಾರ್ಯಕ್ರಮದಲ್ಲಿ 17 ಮಂದಿ ಕೊರೋನಾ ವಾರಿಯರ್ಸ್‌ಗಳನ್ನು ಸನ್ಮಾನಿಸಲಾಯಿತು.</p>

ಪಟ್ಟಣದ ಚಾಮುಂಡೇಶ್ವರಿ ದೇವಾಲಯದಲ್ಲಿನ 5 ಅಡಿ ಎತ್ತರವಿರುವ ದೇವಿಯ ವಿಗ್ರಹ 250 ಕೆ.ಜಿ ತೂಕದ ಚಾಮುಂಡೇಶ್ವರಿ ಮೂರ್ತಿಯನ್ನು ಅಲಂಕರಿಸಿ ಮೆರವಣಿಗೆ ನಡೆಸಲಾಯಿತು. ರಥಸಾಗುವ ಪಟ್ಟಣದ ರಾಜ ಬೀದಿಗಳನ್ನು ತಳಿರು ತೋರಣ ಸೇರಿದಂತೆ ವಿದ್ಯುತ್‌ ದೀಪಾಲಂಕಾರದಿಂದ ಅಲಂಕರಿಸಲಾಗಿತ್ತು. ಕಾರ್ಯಕ್ರಮದಲ್ಲಿ 17 ಮಂದಿ ಕೊರೋನಾ ವಾರಿಯರ್ಸ್‌ಗಳನ್ನು ಸನ್ಮಾನಿಸಲಾಯಿತು.