ಕೊಡಗಿನಿಂದ ಕನಸಿನ ಬೆನ್ನತ್ತಿ ಭಾರತೀಯ ಯುದ್ಧ ವಿಮಾನ ಏರಿದ್ದು ನಮ್ಮ 'ಪುಣ್ಯ'
ಪ್ರತಿಯೊಬ್ಬರಿಗೂ ಬಾಲ್ಯದಿಂದಲೇ ಸಾಕಷ್ಟು ಕನಸುಗಳಿರುತ್ತವೆ. ಕೆಲವರಿಗೆ ಅದು ಕನಸಾಗಿಯೇ ಉಳಿಯುತ್ತದೆ. ಆದರೆ, ಇನ್ನು ಕೆಲವರು ಅದನ್ನು ನನಸಾಗಿಸಿಕೊಳ್ಳುತ್ತಾರೆ. ಆದರೆ, ತನ್ನ ಕನಸಿನ ಬೆನ್ನತ್ತಿ ಹೊರಟ ಕೊಡಗಿನ ಮಡಿಕೇರಿಯ ಪುಣ್ಯ ಎಂಬ ಯುವತಿ ಭಾರತೀಯ ಸೇನೆಯ ಯುದ್ಧ ವಿಮಾನದ ಪೈಲಟ್ ಆಗಿದ್ದಾರೆ.
ಮಡಿಕೇರಿಯ ಯುವತಿ ಪುಣ್ಯ ನಂಜಪ್ಪ ಭಾರತೀಯ ವಾಯುಸೇನೆಯ ಯುದ್ಧ ವಿಮಾನದ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ.
ಈ ಮೂಲಕ ಈ ಹುದ್ದೆಗೇರಿದ ಕೊಡಗಿನ ಮೊದಲ ಯುವತಿ ಎನಿಸಿಕೊಂಡಿದ್ದಾರೆ.
ಕೊಡಗಿನ ಮಡಿಕೇರಿ ತಾಲೂಕಿನ ನಂಜಪ್ಪ ಮತ್ತು ಅನು ದಂಪತಿಯ ಮಗಳು ಪುಣ್ಯ
9ನೇ ತರಗತಿ ಓದುತ್ತಿರುವಾಗಲೇ ತಾನು ಪೈಲಟ್ ಆಗಬೇಕೆಂಬ ಕನಸು ಕಂಡಿದ್ದರು. ಆ ಕನಸನ್ನು ನನಸಾಗಿಸಿಕೊಳ್ಳಲೇಬೇಕೆಂಬ ಆಸೆಯಿಂದ ಪ್ರಯತ್ನ ನಡೆಸಿದ ಪುಣ್ಯ ಭಾರತೀಯ ಸೇನೆಯಲ್ಲಿ ಯುದ್ಧ ವಿಮಾನದ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ.
ಇಂಜಿನಿಯರಿಂಗ್ ಪದವಿ ಪಡೆದಿರುವ ಪುಣ್ಯ ಪೈಲಟ್ ಆಗಬೇಕೆಂದು ಹೈದರಾಬಾದ್ನಲ್ಲಿ ಒಂದು ವರ್ಷದ ಸೇನಾ ತರಬೇತಿ ಪಡೆದರು.
2019ರಲ್ಲಿ ಟ್ರೈನಿ ಪೈಲಟ್ ಆಗಿ ಭಾರತೀಯ ವಾಯುಸೇನೆಗೆ ಆಯ್ಕೆಯಾದರು.
ಕೊಡಗಿನಿಂದ ತನ್ನ ಕನಸಿನ ಬೆನ್ನತ್ತಿ ಕೊನೆಗೆ ಭಾರತೀಯ ಯುದ್ಧ ವಿಮಾನ ಹೇರಿದ್ದು ನಮ್ಮ 'ಪುಣ್ಯ'
ಕೊನೆಗೂ ಅವರ ಪ್ರಯತ್ನಕ್ಕೆ ಫಲ ಸಿಕ್ಕಿದ್ದು, ಯುದ್ಧ ವಿಮಾನದ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ.
ಈ ಮೂಲಕ ಮನಸು ಮಾಡಿದರೆ ಏನು ಬೇಕಾದರೂ ಸಾಧಿಸಲು ಸಾಧ್ಯ ಎಂಬುದನ್ನು ಕೊಡಗಿನ ಈ ಯುವತಿ ಸಾಬೀತುಪಡಿಸಿ, ಮಾದರಿಯಾಗಿದ್ದಾರೆ.