ಕೃಷ್ಣಮಠದಲ್ಲಿ ಅನ್ನಪ್ರಸಾದ ಆರಂಭ: ಉಡುಪಿಗೆ ಹೋದ್ರೆ ಪ್ರಸಾದ ಸ್ವೀಕರಿಸಿ
ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಯಾತ್ರಾರ್ಥಿಗಳಿಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆ ಭಾನುವಾರದಿಂದ ಪುನರಾರಂಭಗೊಂಡಿದೆ. ಪ್ರತಿನಿತ್ಯ ಮಠಕ್ಕೆ ಭೇಟಿ ನೀಡುವ ಸಾವಿರಾರು ಯಾತ್ರಾರ್ಥಿಗಳಿಗೆ ಶ್ರೀಕೃಷ್ಣ ಪ್ರಸಾದ ರೂಪದಲ್ಲಿ ನಡೆಯುತಿದ್ದ ಭೋಜನದ ವ್ಯವಸ್ಥೆಯನ್ನು ಕರೋನಾ ಲಾಕ್ ಡೌನ್ ಸಂದರ್ಭದಲ್ಲಿ ಮಾ.23ರಿಂದ ಅನಿವಾರ್ಯವಾಗಿ ನಿಲ್ಲಿಸಲಾಗಿತ್ತು. ಇದೀಗ ಮತ್ತೆ ಪುನರಾರಂಭ ಮಾಡಲಾಗಿದೆ.
ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಯಾತ್ರಾರ್ಥಿಗಳಿಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆ ಭಾನುವಾರದಿಂದ ಪುನರಾರಂಭಗೊಂಡಿದೆ.
ಪ್ರತಿನಿತ್ಯ ಮಠಕ್ಕೆ ಭೇಟಿ ನೀಡುವ ಸಾವಿರಾರು ಯಾತ್ರಾರ್ಥಿಗಳಿಗೆ ಶ್ರೀಕೃಷ್ಣ ಪ್ರಸಾದ ರೂಪದಲ್ಲಿ ನಡೆಯುತಿದ್ದ ಭೋಜನದ ವ್ಯವಸ್ಥೆಯನ್ನು ಕರೋನಾ ಲಾಕ್ ಡೌನ್ ಸಂದರ್ಭದಲ್ಲಿ ಮಾ.23ರಿಂದ ಅನಿವಾರ್ಯವಾಗಿ ನಿಲ್ಲಿಸಲಾಗಿತ್ತು.
ಪ್ರಸ್ತುತ ಕರೋನಾ ಹಾವಳಿ ಗಣನೀಯವಾಗಿ ಕಡಿಮೆಯಾಗಿದ್ದು ಮತ್ತು ಕೃಷ್ಣಮಠಕ್ಕೆ ಬರುವ ಭಕ್ತರ ಸಂಖ್ಯೆಯೂ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಭಾನುವಾರ ಭೋಜನ ಶಾಲೆಯಲ್ಲಿ ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಅನ್ನಪ್ರಸಾದವನ್ನು ಬಡಿಸುವುದರ ಮೂಲಕ ಯಾತ್ರಾರ್ಥಿಗಳ ಭೋಜನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪರ್ಯಾಯ ಮಠದ ವ್ಯವಸ್ಥಾಪಕರಾದ ಗೋವಿಂದರಾಜ್, ಪರ್ಯಾಯ ಮಠದ ರೋಹಿತ್ ತಂತ್ರಿ, ಶ್ರೀಕೃಷ್ಣ ಸೇವಾ ಸಮಿತಿಯ ಗಣೇಶ್ ಹೆಬ್ಬಾರ್ ಮೊದಲಾದವರು ಉಪಸ್ಥಿತರಿದ್ದರು.
ಭಾನುವಾರ ಮಧ್ಯಾಹ್ನ ಸುಮಾರು 4800 ಮಂದಿ ಮತ್ತು ರಾತ್ರಿ ಸುಮಾರು 1500 ಮಂದಿ ಭಕ್ತಾಧಿಗಳು ಅನ್ನಪ್ರಸಾದವನ್ನು ಸ್ವೀಕರಿಸಿದರು
ನೀವು ಉಡುಪಿಗೆ ಹೋದರೆ ಕೃಷ್ಣಮಠದಲ್ಲಿ ಅನ್ನಪ್ರಸಾದ ಮಾಡಿಕೊಂಡು ಬನ್ನಿ