ಸಿಎಂ ಬದಲಾಯಿಸಿದರೆ ಜನ ಚಪ್ಪಲಿ ತಗೊಳ್ತಾರೆ: ಪ್ರಮೋದ್ ಮುತಾಲಿಕ್
ಕೊಪ್ಪಳ(ಜು.30): ರಾಜ್ಯ ರಾಜಕಾರಣದಲ್ಲಿ ಇಂತಹ ಅನವಶ್ಯಕ ಗೊಂದಲ ಸೃಷ್ಠಿಸಬೇಡಿ. ರಾಜ್ಯದ ಜನರು ಕೊರೋನಾ ಭೀತಿ, ಆತಂಕದಲ್ಲಿ ಇದ್ದಾರೆ. ಇಂತಹ ಸಂದರ್ಭದಲ್ಲಿ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ರಾಜಕೀಯ ದುಷ್ಟತನ, ನೀಚತನ ಮಾಡಬಾರದು. ಅಕಸ್ಮಾತ್ ಹಾಗೆ ಮಾಡಿದರೆ ಜನ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಚಪ್ಪಲಿ ತೆಗೆದುಕೊಂಡು ಬೆನ್ನು ಹತ್ತುತ್ತಾರೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂಜನಾದ್ರಿ ಪರ್ವತದಿಂದ ಶಿಲೆ, ಜಲ ಮತ್ತು ಮೃತ್ತಿಕಾವನ್ನು ತಂದು ಕೊಪ್ಪಳದ ಗವಿಮಠದಲ್ಲಿ ವಿಶೇಷ ಪೂಜೆಯನ್ನು ಮಾಡಿಸುವ ಮೂಲಕ ಅಯೋಧ್ಯೆಗೆ ರವಾನಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಮೋದ್ ಮುತಾಲಿಕ್
ಓವೈಸಿ ನಾಯಿ ಇದ್ದಂತೆ. ಅದು ಯಾವಾಗ ಬೇಕಾದರೂ ಬೊಗಳುತ್ತಲೇ ಇರುತ್ತದೆ. ಪ್ರಧಾನಿ ಮೋದಿ ಅವರು ಆನೆ. ಓವೈಸಿಯಂತಹ ನಾಯಿ ಬೊಗಳಿಕೆಗೆ ಈ ಆನೆ ಯಾವುದೇ ಸೊಪ್ಪು ಹಾಕುವುದಿಲ್ಲ. ಗದ್ದಲ, ಗಲಾಟೆ ಇಲ್ಲದೆ ಶಾಂತಿಯುತವಾಗಿ ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಲ್ಲಿ ಶಂಕು ಸ್ಥಾಪನೆ ಕಾರ್ಯಕ್ರಮ ನಡೆಯುತ್ತದೆ ಎಂದರು.
ಬೇರೆ ಬೇರೆ ಸಂದರ್ಭದಲ್ಲಿ ಅನಂತ ಕುಮಾರ್ ಹೆಗಡೆ ಮುಖ್ಯಮಂತ್ರಿ ಎಂದು ಬಿಂಬಿಸಲಾಯಿತು. ಉಮೇಶ ಕತ್ತಿ ನಾನೇ ಸಿಎಂ ಎಂದು ಹೇಳಿಕೊಂಡರು.
ಕೊರೋನಾ ಸಂದರ್ಭದಲ್ಲಿ ಸಿಎಂ ಬದಲಾವಣೆಯ ಮಾತುಗಳು ರಾಜ್ಯ ರಾಜಕಾರಣದಲ್ಲಿ ಅನವಶ್ಯಕ ಎಂದ ಮುತಾಲಿಕ್