ಪೊಳಲಿ ರಾಜರಾಜೇಶ್ವರಿ ಸನ್ನಿಧಿಯಲ್ಲಿ ಶಿಕ್ಷಣ ಸಚಿವ: ಇಲ್ಲಿವೆ ಫೋಟೋಸ್

First Published 11, Jul 2020, 7:31 AM

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕೊರೋನಾ ಆತಂಕದ ನಡುವೆ ಯಶಸ್ವಿಯಾಗಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಪತ್ನಿ ಕೆ.ಎಚ್‌.ಸಾವಿತ್ರಿ ಅವರೊಂದಿಗೆ ಬಂಟ್ವಾಳ ತಾಲೂಕಿನ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇಲ್ಲಿವೆ ಫೋಟೋಸ್
ಫೋಟೋ ಕೃಪೆ: ಕಿಶೋರ್ ಪೆರಾಜೆ

ಪೊಳಲಿಯ ತಾಯಿ ಶ್ರೀ ರಾಜರಾಜೇಶ್ವರಿ ನಮ್ಮ ಮಕ್ಕಳಿಗೆಲ್ಲ ಆಶೀರ್ವಾದ ಮಾಡಿದ್ದು, ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ವಿಯಾಗಿ ನಡೆಯುವಂತೆ ಹಾರೈಸಿದ್ದಾಳೆ ಎಂದು ಅವರು ಹೇಳಿದ್ದಾರೆ.

ಎಲ್ಲ ಮಕ್ಕಳ ಪರವಾಗಿ ತಾಯಿಗೆ ಧನ್ಯವಾದ ತಿಳಿಸಲು ಬಂದಿದ್ದೇನೆ ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಹೇಳಿದ್ದಾರೆ.

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಕ್ಷೇತ್ರದ ಮಹಿಮೆಯನ್ನು ಸಚಿವರಿಗೆ ವಿವರಿಸಿದರು. ಪೊಳಲಿ ಕ್ಷೇತ್ರದ ಆನುವಂಶಿಕ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ, ಮೂಡಬಿದಿರೆ ಆಳ್ವಾಸ್‌ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ್‌ ಆಳ್ವ ಇದ್ದರು.

ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್‌ ಆಲಿ, ಡಿಡಿಪಿಐ ಮಲ್ಲೇಸ್ವಾಮಿ, ಇಒ ರಾಜಣ್ಣ, ತಹಸೀಲ್ದಾರ್‌ ರಶ್ಮಿ ಎಸ್‌.ಆರ್‌., ಡಿವೈಎಸ್ಪಿ ವೆಲೆಂಟೈನ್‌ ಡಿಸೋಜ, ಪೊಲೀಸ್‌ ಸರ್ಕಲ್‌ ಇನ್‌ಸ್ಪೆಕ್ಟರ್‌ ಟಿ.ಡಿ.ನಾಗರಾಜ್‌, ಪಿಎಸ್‌ಐ ಪ್ರಸನ್ನ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್‌, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ವಿವಿಧ ಜನಪ್ರತಿನಿಧಿಗಳು, ಇಲಾಖೆಗಳ ಪ್ರಮುಖರು, ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಕಾಲಿನಲ್ಲೇ ಬರೆದು ರಾಜ್ಯದ ಗಮನ ಸೆಳೆದಿದ್ದ ಬಂಟ್ವಾಳ ಎಸ್‌ವಿಎಸ್‌ ಪ್ರೌಢಶಾಲೆಯ ವಿಕಚನಚೇತನ (ಕೈಗಳಿಲ್ಲದ ಬಾಲಕ) ವಿದ್ಯಾರ್ಥಿ ಕೌಶಿಕ್‌ನನ್ನು ಶಿಕ್ಷಣ ಸಚಿವ ಭೇಟಿಯಾದರು.

ಪೊಳಲಿ ರಾಜರಾಜೇಶ್ವರಿಗೆ ನಮಿಸುತ್ತಿರುವ ಸಚಿವ ಎಸ್‌ ಸುರೇಶ್ ಕುಮಾರ್ ದಂಪತಿ

‘ಹೇ ಪುಟ್ಟಾಹೇಗಿದ್ದೀಯಾ..?’ ಎಂದು ಮಾತುಕತೆ ಆರಂಭಿಸಿದ ಅವರು, ಕೌಶಿಕ್‌.. ನೀನೇ ನಮಗೆ ಸ್ಫೂರ್ತಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಆತನ ಪಠ್ಯೇತರ ಚಟುವಟಿಕೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಯಾವ ಪರೀಕ್ಷೆ ಹೇಗಿತ್ತು ಎಂಬ ಮಾಹಿತಿ ಕೇಳಿದರು.

ನಿನ್ನ ಸಾಧನೆಯ ಕುರಿತು ಅದೇ ದಿನ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದೆ ಎಂದರು. ಕೊನೆಗೆ ತಮ್ಮ ಆಪ್ತ ಕಾರ್ಯದರ್ಶಿಯನ್ನು ಕರೆದು ಫೋಟೋ ತೆಗೆಸಿಕೊಂಡರು. ಈ ವೇಳೆ ಕೌಶಿಕ್‌ ಸಚಿವರ ಹೆಸರನ್ನು ಬರೆದು ಅವರಿಗೆ ತೋರಿಸಿದ.

loader