ಭೀಕರ ಪ್ರವಾಹಕ್ಕೆ ತತ್ತರಿಸಿದ ಕಲಬುರಗಿ: ಬೀದಿಗೆ ಬಿದ್ದ ಜನತೆ
ಕಲಬುರಗಿ(ಅ.16): ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಬಂದೊದಗಿದೆ. ಹೀಗಾಗಿ ನಿರಂತರ ಮಳೆಯಿಂದ ಜಲಾಶಯಗಳು ತುಂಬಿ ತುಳುಕುತ್ತಿವೆ. ಇದರಿಂದ ಡ್ಯಾಂನಿಂದ ಅಪಾರ ಪ್ರಮಾಣದಲ್ಲಿ ನೀರನ್ನು ನದಿಗೆ ಹರಿ ಬಿಡಲಾಗುತ್ತಿದೆ. ಭೀಮಾ ನದಿ ಪಾತ್ರದ ಗ್ರಾಮಗಳಿಗೆ ನೀರು ನುಗ್ಗಿದೆ. ಜಮೀನು, ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಅಕ್ಷರಶಹಃ ಬೀದಿ ಪಾಲಾಗಿದ್ದಾರೆ. ಭೀಮಾ ತೀರದ ಫಿರೋಜಾಬಾದ್ ಗ್ರಾಮದ ಜನರು ಗಂಟು ಮೂಟೆ ಸಮೇತ ಕಾಳಜಿ ಕೇಂದ್ರ ಅರಸಿ ಹೊರಟಿದ್ದಾರೆ.
ಕಲಬುರಗಿ ಜಿಲ್ಲೆಯ ಬಹುತೇಕ ನದಿ ಪಾತ್ರದ ಹಲವು ಹಳ್ಳಿಗಳು ಜಲಾವೃತ
ಫಿರೋಜಾಬಾದ್ ಗ್ರಾಮದ ಲಕ್ಷ್ಮಿ ದೇವಸ್ಥಾನ ಸಂಪೂರ್ಣ ಮುಳುಗಡೆ
ಕಲಬುರಗಿ ತಾಲೂಕಿನ ಸಯ್ಯದ್ ಚಿಂಚೋಳಿ ಗ್ರಾಮಕ್ಕೆ ಭೇಟಿ ನೀಡಿ ನೆರೆ ಪೀಡಿತ ಪ್ರದೇಶ ವೀಕ್ಷಿಸಿದ ಕಂದಾಯ ಸಚಿವ ಅರ್.ಅಶೋಕ
ಗ್ರಾಮದ ಮನೆಯೊಂದರಲ್ಲಿ ಮನೆ ಬಿಟ್ಟು ಬರಲ್ಲ ಅಂತ ಹಟ ಹಿಡಿದು ಮನೆ ಮೇಲೆ ಕುಳಿತ ಅಜ್ಜಿ
ಈಗಾಗಲೇ ಅಜ್ಜಿಯ ಮನೆ ಅರ್ಧದಷ್ಟು ಮುಳುಗಿದ ಮನೆ. ನಮಗೆ ಬೇರೆ ವ್ಯವಸ್ಥೆ ಮಾಡುವವರೆಗೂ ಇಲ್ಲಿಂದ ಹೋಗಲ್ಲ ಎನ್ನುತ್ತಿರುವ ವೃದ್ಧೆ
ಇನ್ನೂ ಕಲಬುರಗಿ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ್ದರಿಂದ ಕಿಲೋಮಿಟರ್ ಗಟ್ಟಲೆ ಸಾಲುಗಟ್ಟಿ ನಿಂತ ವಾಹನಗಳು, ಇದರಿಂದ ವಾಹನ ಸವಾರರ ಪರದಾಟ
ಕಾಳಜಿ ಕೇಂದ್ರಕ್ಕೂ ಭೇಟಿ ನೀಡಿದ ಸಂತ್ರಸ್ತರ ಅಹವಾಲು ಆಲಿಸಿದ ಸಚಿವರು