ಬಿಜೆಪಿ ನಾಯಕತ್ವ ಬದಲಾವಣೆ ಮಧ್ಯೆ ಪಂಚಮಸಾಲಿ ಸ್ವಾಮೀಜಿಗಳ ಸಭೆ: ಮೀಟಿಂಗ್ ನಡೆಸಿದ್ದೇಕೆ?
ಬಾಗಲಕೋಟೆ(ಜೂ.23): ಜಿಲ್ಲೆಯ ಜಮಖಂಡಿಯಲ್ಲಿ ನೆಲೋಗಿಯ ಸಿದ್ಧಲಿಂಗ ಸ್ವಾಮೀಜಿ ಅವರ ನೇತೃತ್ವದಲ್ಲಿ ಪಂಚಮಸಾಲಿ ಮಠಾಧೀಶರ ಸಭೆ ನಿನ್ನೆ(ಮಂಗಳವಾರ) ನಡೆದಿದೆ. ಪಂಚಮಸಾಲಿ ಪೀಠದ 26 ಜನ ಸ್ವಾಮೀಜಿಗಳ ಸಮ್ಮುಖದಲ್ಲಿ ನಡೆದ ಸಭೆ ನಡೆಸಲಾಗಿದೆ. ಅತ್ತ ಬಿಜೆಪಿಯ ನಾಯಕತ್ವ ಬದಲಾವಣೆ ಮಧ್ಯೆ ಇತ್ತ ಪಂಚಮಸಾಲಿ ಸ್ವಾಮೀಜಿಗಳ ಸಭೆ ಮಹತ್ವ ಪಡೆದುಕೊಂಡಿದೆ.
ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಬದಲಾವಣೆ ಮಧ್ಯೆ ಪಂಚಮಸಾಲಿ ಸಮಾಜದ ಸಚಿವ ಮುರುಗೇಶ ನಿರಾಣಿ ಹೆಸರು ಮುಂಚೂಣಿಯಲ್ಲಿದೆ. ಆದರೆ ಸಭೆಯಲ್ಲಿ ರಾಜಕೀಯ ಚರ್ಚೆಯಾಗಿಲ್ಲ, ಮಾಡೋದು ಇಲ್ಲ ಎಂದು ಸುವರ್ಣ ನ್ಯೂಸ್‌ಗೆ ಸಿದ್ದಲಿಂಗ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.
ರಾಜಕೀಯ ಮಾಡೋದು ಸ್ವಾಮೀಜಿಗಳ ಕೆಲಸವಲ್ಲ ಎಂದ ಸಿದ್ದಲಿಂಗ ಸ್ವಾಮೀಜಿ
ನಾಯಕತ್ವ ಬದಲಾವಣೆ ಮಾಡಿದರೂ ಯಡಿಯೂರಪ್ಪನವರಿಗೆ ತೊಂದರೆಯಾಗದಂತೆ ಮಾಡಲಿ ಎಂದಿದ್ದೇವೆ ಅಷ್ಟೇ. ಆದರೆ ಇಂತವರನ್ನೇ ಮಾಡಿ ಎನ್ನುವ ಬೇಡಿಕೆ ನಮ್ಮದಲ್ಲ, ರಾಜಕೀಯ ನಮ್ಮ ಉದ್ದೇಶವಲ್ಲ ಎಂದು ಸ್ಪಷ್ಟಪಡಿಸಿದ ಸ್ವಾಮೀಜಿ
ಪಂಚಮಸಾಲಿ ಸಭೆಯಲ್ಲಿ ಕಾಣಿಸಿಕೊಳ್ಳದ ಪಂಚಮಸಾಲಿ ಪೀಠದ ಕೂಡಲಸಂಗಮ ಮತ್ತು ಹರಿಹರದ ಸ್ವಾಮೀಜಿಗಳು
ಸಮಾಜದ ಅಭಿವೃದ್ಧಿ ಹಿನ್ನೆಲೆಯಲ್ಲಿ ಸಭೆ ನಡೆಸಲಾಗಿದೆ ಎಂದ ನೆಲೋಗಿಯ ಸಿದ್ದಲಿಂಗ ಶ್ರೀ
ಜಮಖಂಡಿಯ ವಾರದ ಎಂಬುವವರ ಮನೆಯಲ್ಲಿ ನಡೆದ ಸಭೆ
ಪ್ರತಿ ತಿಂಗಳು ಒಂದೊಂದು ಜಿಲ್ಲೆಯಲ್ಲಿ ನಡೆಯುತ್ತಿರುವ ಪಂಚಮಸಾಲಿ ಮಠಾಧೀಶರ ಸಭೆ
ಸುಮಾರು 60 ಮಠಾಧೀಶರ ನೇತೃತ್ವದಲ್ಲಿ ಕಟ್ಟಿರುವ ಪಂಚಮಸಾಲಿ ಮಠಾಧೀಶರ ಒಕ್ಕೂಟ