ಲಾಕ್‌ಡೌನ್: ಆನ್‌ಲೈನ್‌ನಲ್ಲಿ ಸರಾಗವಾಗಿ ನಡೆಯುತ್ತೆ ಯೋಗ ಕ್ಲಾಸ್
ಕೊರೋನಾ ಸೋಂಕು ಪರಿಣಾಮ ಇಡೀ ದೇಶವೇ ಲಾಕ್‌ಡೌನ್ ಆಗಿದೆ. ಆದರೆ ಈ ಸಮಯವನ್ನು ಯೋಗ ತರಬೇತುದಾರರೊಬ್ಬರು ಸದುಪಯೋಗ ಪಡಿಸಿಕೊಂಡಿದ್ದು, ತಮ್ಮ ಯೋಗ ಕೇಂದ್ರಕ್ಕೆ ಪ್ರತಿದಿನ ಆಗಮಿಸುತ್ತಿದ್ದ ಮಹಿಳೆಯರಿಗೆ ಯೋಗ ಕಲಿಕೆ ಬಿಟ್ಟು ಹೋಗಬಾರದೆಂಬ ದೃಷ್ಟಿಯಿಂದ ಉಚಿತವಾಗಿ ಆನ್‌ಲೈನ್ ಮೂಲಕ ಯೋಗ ತರಬೇತಿ ನಡೆಸುತ್ತಿದ್ದಾರೆ. ಇಲ್ಲಿವೆ ಫೋಟೋಸ್
Yoga
ಕೊರೋನಾ ಲಾಕ್‌ಡೌನ್ ಆದ ಪರಿಣಾಮ ಜೂಮ್ ಆ್ಯಪ್ ಬಳಸಿ ಮನೆಯಲ್ಲೇ ಪ್ರತಿ ದಿನ ಒಂದುವರೆ ತಾಸು ಉಚಿತವಾಗಿ ಯೋಗ ತರಬೇತಿ ಹೇಳಿಕೊಡುತ್ತಿದ್ದಾರೆ.
ಪ್ರಸ್ತುತ 25ಕ್ಕೂ ಅಧಿಕ ಮಂದಿ ಮಹಿಳೆಯರು ತರಬೇತಿ ಪಡೆಯುತ್ತಿದ್ದು, ಮತ್ತೊಂದು ಬ್ಯಾಚ್ ಮಾಡುವಂತೆ ಸಲಹೆಗಳು ಕೂಡ ಇವರಿಗೆ ಬರುತ್ತಿದೆ. ಲಾಕ್‌ಡೌನ್ ಮುಂದುವರಿದಲ್ಲಿ ಮತ್ತೊಂದು ಬ್ಯಾಚ್ ಆರಂಭ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ ಯೋಗ ತರಬೇತುಗಾರರಾದ ಪ್ರತಿಭಾ.
ಮಾ.29ರಿಂದಲೇ ಆನ್‌ಲೈನ್‌ನಲ್ಲಿ ಯೋಗ ತರಬೇತಿ ಆರಂಭಿಸಲಾಗಿದ್ದು, ಮಹಿಳೆಯರು ಯೋಗ ಕಲಿಕೆಯಲ್ಲಿ ಪ್ರತಿ ದಿನ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಂಜೆ 5ರಿಂದ 6.30ರ ವರೆಗೆ ತರಬೇತಿ ನಡೆಯುತ್ತದೆ. 4.45ಕ್ಕೆ ಮಹಿಳೆಯರು ಯೋಗಾಭ್ಯಾಸ ಮಾಡಲು ಸಿದ್ಧರಾಗಿ ಕುಳಿತಿರುತ್ತಾರೆ.
ತರಬೇತಿಯಲ್ಲಿ ವಿವಿಧ ಆಸನಗಳನ್ನು ಕಲಿಸಲಾಗುತ್ತದೆ. ಲಾಕ್‌ಡೌನ್‌ನಿಂದಾಗಿ ಯೋಗ ಕಲಿಯುತ್ತಿದ್ದವರು ಫ್ಲೆಕ್ಸಿಬಿಲಿಟಿಯನ್ನು ಕಳೆದುಕೊಳ್ಳಬಾರದೆಂಬ ಉದ್ದೇಶದಿಂದ ಆನ್‌ಲೈನ್‌ನಲ್ಲಿ ಯೋಗ ತರಬೇತಿ ನೀಡಲಾಗುತ್ತಿದೆ. ಕೊರೋನಾ ಸೋಂಕಿನಿಂದ ತಪ್ಪಿಸಿಕೊಳ್ಳಲು ಮೂರು ಬಗೆಯ ಪ್ರಾಣಾಯಾಮ ತರಬೇತಿ ಕೂಡ ನೀಡಲಾಗುತ್ತಿದೆ.