ಮೈಸೂರಿನ ಜಯಚಾಮರಾಜೇಂದ್ರ ಝೂ ಓಪನ್: ಬಿಳಿ ಹುಲಿ ಮಿಸ್ ಮಾಡ್ಕೋಬೇಡಿ

First Published Jun 8, 2020, 4:25 PM IST

ಕೊರೋನಾ ವೈರಸ್ ನಿಯಂತ್ರಣ ಹಿನ್ನೆಲೆಯಲ್ಲಿ ಕಳೆದ 86 ದಿನ ಬಂದ್‌ ಆಗಿದ್ದ ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯ ಸೇರಿದಂತೆ ರಾಜ್ಯದ 9 ಮೃಗಾಲಯ ಜೂ. 8ರಿಂದ ಪುನಾರಂಭವಾಗಲಿವೆ. ಸಕಲ ಮುಂಜಾಗ್ರತೆ ಕ್ರಮಗಳೊಂದಿಗೆ ಝೂಗೆ ಆಗಮಿಸುವ ಪ್ರವಾಸಿಗರನ್ನು ಸ್ವಾಗತಿಸಲು ಮೃಗಾಲಯದ ಆಡಳಿತ ಮಂಡಳಿ ಸಜ್ಜಾಗಿದೆ. ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯ ಪುನಾರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ 50 ಮಂದಿಗೆ ಟಿಕೆಟ್ ಪಡೆಯುವ ಮೂಲಕ ಇಂದು ಪ್ರವೇಶಕ್ಕೆ ಚಾಲನೆ ನೀಡಲಾಯಿತು.