ಗಾರ್ಮೆಂಟ್ ನೌಕರರ ಪ್ರತಿಭಟನಾ ಸ್ಥಳಕ್ಕೆ ಸಂಸದೆ ಸುಮಲತಾ ಭೇಟಿ

First Published 10, Jun 2020, 10:38 AM

ಗಾರ್ಮೆಂಟ್ಸ್‌ ಉದ್ಯೋಗವನ್ನೇ ನಂಬಿ ಜೀವನ ನಡೆಸುತ್ತಿರುವ ಸಾವಿರಾರು ಕುಟುಂಬಗಳಿಗೆ ನ್ಯಾಯ ಒದಗಿಸುವ ಸಲುವಾಗಿ ಸರ್ಕಾರ ಹಾಗೂ ಕಂಪನಿಯ ಮುಖ್ಯಸ್ಥರೊಂದಿಗೆ ಶೀಘ್ರವೇ ಚರ್ಚಿಸಿ ಪರಿಹಾರ ಕೊಡಿಸುವ ಭರವಸೆಯನ್ನು ಸಂಸದೆ ಸುಮಲತಾ ನೀಡಿದ್ದಾರೆ. ಇಲ್ಲಿವೆ ಫೋಟೋಸ್

ಶ್ರೀರಂಗಪಟ್ಟಣದ ಬೆಂಗಳೂರು - ಮೈಸೂರು ಹೆದ್ದಾರಿ ಪಕ್ಕದ ಚೆಕ್‌ಪೋಸ್ಟ್‌ ಬಳಿ ಇರುವ ಯೂರೋ ಕ್ಲಾತಿಂಗ್‌ ಗಾರ್ಮೆಂಟ್ಸ್‌ನಲ್ಲಿ ಕಾನೂನು ಬಾಹಿರವಾಗಿ ಏಕಾಏಕಿ ಲೇ-ಆಫ್‌ ನೋಟಿಸ್‌ ಅಂಟಿಸಿದ ಪರಿಣಾಮ ಗಾಬರಿಗೊಂಡ ಕಂಪನಿಯ ಸಾವಿರಾರು ನೌಕರರು ಅಹೋರಾತ್ರಿ ಧರಣಿ ನಡೆಸುತ್ತಿದ್ದ ವಿಚಾರ ತಿಳಿದ ಸಂಸದೆ ಸ್ಥಳಕ್ಕೆ ಆಗಮಿಸಿ ಮನವಿ ಆಲಿಸಿದರು.

ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ಕಾರ್ಮಿಕರು ಅವರ ನ್ಯಾಯಯುತ ಬೇಡಿಕೆಗೆ ಹೋರಾಟ ನಡೆಸುತ್ತಿದ್ದಾರೆ ಎಂದರು

ಮಾಲೀಕರು ಗಾರ್ಮೆಂಟ್ಸ್  ಮುಚ್ಚಲು ಮತ್ತು ಲೇ-ಆಫ್ಗೆ ಅವಕಾಶ ಕೊಡದೆ ಮುಂದುವರಿಸುವ ಪ್ರಯತ್ನ ಮಾಡಬೇಕು. ಇಲ್ಲವಾದಲ್ಲಿ 1400 ಬಡ ಕಾರ್ಮಿಕ ಕುಟುಂಬಗಳು ಬೀದಿ ಪಾಲಾಗಲಿವೆ ಎಂದರು.

ತಮ್ಮ ಹಕ್ಕು ಪ್ರತಿಪಾಧನೆಗಾಗಿ ಅಹೋರಾತ್ರಿ ಹೋರಾಟ ನಡೆಸುತ್ತಿರುವ ಸಾವಿರಾರು ಮಹಿಳಾ ನೌಕರರು ಸೋಮವಾರ ರಾತ್ರಿ ಸಹ ಕುಳಿತಿದ್ದ ಸ್ಥಳವನ್ನು ಕದಲದೆ ಧರಣಿ ನಡೆಸಿದ್ದು ಈ ಕಂಪನಿಯ ಆಡಳಿತ ಸಿಂಬಂಧಿ ವಿದ್ಯುತ… ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸದೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಾರ್ಮೆಂಟ್ಸ್‌ನಲ್ಲಿ ದುಡಿಯುತ್ತಿರುವ ಮಹಿಳೆಯರ ಕಷ್ಟತಮ್ಮ ಅರಿವಿನಲ್ಲಿದೆ. ಈ ವಿಚಾರದ ಬಗ್ಗೆ ಸರ್ಕಾರ, ಸಂಬಂಧಪಟ್ಟಕಾರ್ಮಿಕ ಮಂತ್ರಿಗಳು ಹಾಗೂ ಕಂಪನಿ ಮುಖ್ಯಸ್ಥರೊಂದಿಗೆ ಚರ್ಚಿಸಿ ಎದುರಾಗಿರುವ ಸಮಸ್ಯೆಯನ್ನು ಬಗೆ ಹರಿಸಲಾಗುವುದು ಎಂದಿದ್ದಾರೆ.

loader