ಕೊಪ್ಪಳ: ಎತ್ತಿನಬಂಡಿ ಓಡಿಸಿ ಗಮನಸೆಳೆದ ಶಾಸಕ ದಡೇಸೂಗುರು
ಕನಕಗಿರಿ(ನ.09): ಹಿಂದೊಮ್ಮೆ ಹಲವು ಗ್ರಾಮಗಳ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸುವುದಕ್ಕೆ ಹೋಗಿ ರೆಂಟೆ ಹೊಡೆದು ಸುದ್ದಿಯಾಗಿದ್ದ ಶಾಸಕ ಬಸವರಾಜ ದಡೇಸೂಗುರು ಇದೀಗ ತಾಲೂಕಿನ ಹಿರೇಖೇಡ ಗ್ರಾಮದಲ್ಲಿ ಭಾನುವಾರ ನಡೆದ ವಾಲ್ಮೀಕಿ ಜಯಂತಿಯಲ್ಲಿ ಎತ್ತಿನಬಂಡಿ ಹೊಡೆಯುವ ಮೂಲಕ ಮತ್ತೊಮ್ಮೆ ರೈತರ ಪ್ರೀತಿಗೆ ಪಾತ್ರರಾಗಿದ್ದಾರೆ.
ಹಿಂದೊಮ್ಮೆ ಕೊರೋನಾ ಜಾಗೃತಿ ಮೂಡಿಸಲು ಹಾಗೂ ಹಲವು ಗ್ರಾಮಗಳಲ್ಲಿನ ಗ್ರಾಮಸ್ಥರ ಸಮಸ್ಯೆ ಆಲಿಸುವುದಕ್ಕೆ ಹೋಗಿದ್ದಾಗ ತಮ್ಮ ಹೊಲ ಹದಗೊಳಿಸಲು ರೆಂಟೆ ಹೊಡೆದು ಸುದ್ದಿಯಾಗಿದ್ದರು. ಇದೀಗ ಎತ್ತಿನ ಬಂಡಿ ಹೊಡೆಯುವ ಮೂಲಕ ರೈತರ ಮೆಚ್ಚುಗೆಗೆ ಪಾತ್ರರಾದ ಶಾಸಕರು
ಜಯಂತಿ ಹಾಗೂ ಹಲವು ಸರ್ಕಾರಿ ಹಾಗೂ ಖಾಸಗಿ ಕಾರ್ಯಕ್ರಮಕ್ಕೆಂದು ಹೋಗಿದ್ದಾಗ ಶಾಸಕ ಬಸವರಾಜ ದಡೇಸೂಗುರು ತಾವು ಈ ಹಿಂದೆ ಮಾಡಿದ ಕೃಷಿ ಕೆಲಸಗಳನ್ನು ಮಾಡಿ ರೈತರ ಮನ ಗೆಲ್ಲುತ್ತಿರುವುದಂತೂ ಸುಳ್ಳಲ್ಲ.
ನನ್ನ ಮೂಲ ಕಾಯಕ ಕೃಷಿಯಾಗಿದ್ದು, ಹೊಲ ಹದಗೊಳಿಸುವುದಕ್ಕಾಗಿ ಎಲ್ಲ ಕೆಲಸಗಳನ್ನು ಮಾಡಿದ್ದೇನೆ. ಇದೇನು ಹೊಸದೆನಲ್ಲ. ಕಳೆದ ಹತ್ತು ವರ್ಷದಿಂದ ರಾಜಕಾರಣಕ್ಕೆ ಬಂದಿರುವ ನಾನು ಕೃಷಿ ಚಟುವಟಿಕೆ ಮರೆತಿದ್ದೇನೆ. ಶಾಸಕನಾದ ಮೇಲೆ ಜನರ ಸೇವೆಯ ಜೊತೆಗೆ ಹಳ್ಳಿಗಳಲ್ಲಿನ ಬಿತ್ತನೆ ಮಾಡುವ ಹಾಗೂ ರೆಂಟೆ ಹೊಡೆಯುವಾಗ ಸ್ವತಃ ನಾನೇ ವಾಹನವನ್ನು ತಡೆದು ರೈತ ಪರ ಕಾರ್ಯಗಳನ್ನು ಮಾಡುತ್ತೇನೆ ಎಂದ ಶಾಸಕ ದಡೇಸೂಗುರು
ಇದಕ್ಕೂ ಮೊದಲು ಹಿರೇಖೇಡ ಗ್ರಾಮದ ಬೀದಿಗಳಲ್ಲಿ ವಾಲ್ಮೀಕಿ ಭಾವಚಿತ್ರ ಹಾಗೂ ಮಕ್ಕಳಿಂದ ಸ್ತಬ್ಧಚಿತ್ರ ಮೆರವಣಿಗೆ ನಡೆಯಿತು. ವಾಲ್ಮೀಕಿ ಸಮಾಜದ ಹಿರಿಯರು ಹಾಗೂ ಯುವಕರು ಇದ್ದರು.