ವಿಜಯಪುರ ಶೀಘ್ರ ಸಂಪೂರ್ಣ ಅಭಿವೃದ್ಧಿ: ಶಾಸಕ ಯತ್ನಾಳ
ವಿಜಯಪುರ(ಸೆ.16): ಶೀಘ್ರದಲ್ಲಿಯೇ ವಿಜಯಪುರ ನಗರ ಸಂಪೂರ್ಣ ಅಭಿವೃದ್ಧಿ ಹಾಗೂ ಸುಸಜ್ಜಿತ ರಸ್ತೆಗಳನ್ನು ಹೊಂದಿರುವ ನಗರವಾಗಿ ರೂಪುಗೊಳ್ಳಲಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಮಂಗಳವಾರ ನಗರದ ವಾರ್ಡ್ ನಂ.22ರ ವ್ಯಾಪ್ತಿಯಲ್ಲಿರುವ ಸಂಗೊಳ್ಳಿ ರಾಯಣ್ಣ ಕಾಲೋನಿಯಲ್ಲಿ ಪಾಲಕೆಯ ವತಿಯಿಂದ 29.67 ಲಕ್ಷ ವೆಚ್ಚದ ಸಿಸಿ ರಸ್ತೆ, ಲೋಕೋಪಯೋಗಿ ಇಲಾಖೆಯ ವತಿಯಿಂದ 4 ಕೋಟಿ ವೆಚ್ಚದಲ್ಲಿ ಸರ್ದಾರ್ ವಲ್ಲಭಾಯಿ ಪಟೇಲ್ ವೃತ್ತದಿಂದ ಜಂಕ್ಷನ್ ರಸ್ತೆ ಸುಧಾರಣಾ, ಬಬಲೇಶ್ವರ ನಾಕಾವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕರು
ವಿಜಯಪುರ ನಗರದಲ್ಲಿ ಮಳೆಯಿಂದಾಗಿ ಹದಗೆಟ್ಟಿರುವ ಎಲ್ಲ ರಸ್ತೆಗಳನ್ನು ಗುರುತಿಸಲಾಗಿದೆ. ಈ ಎಲ್ಲ ರಸ್ತೆಗಳಿಗೂ ಕಾಯಕಲ್ಪ ನೀಡಲಾಗುತ್ತಿದ್ದು, ಕೆಲವೆಡೆ ಸಿಸಿ ರಸ್ತೆ ಹಾಗೂ ಉಳಿದ ಕಡೆಗಳಲ್ಲಿ ಅತ್ಯಂತ ಗುಣಮಟ್ಟದಿಂದ ಕೂಡಿದ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗುವುದು. ಶೀಘ್ರದಲ್ಲಿಯೇ ರಸ್ತೆಗಳನ್ನು ಸಂಪೂರ್ಣ ಅಭಿವೃದ್ಧಿಪಡಿಸಿ, ರಸ್ತೆ ಎರಡೂ ಬದಿಗಳಲ್ಲಿಯೂ ಬೀದಿದೀಪ ಅಳವಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಬಬಲೇಶ್ವರ ನಾಕಾದಿಂದ ರಾಮನಗರ ಬಸ್ ನಿಲ್ದಾಣಕ್ಕೆ ಸಂಪರ್ಕಿಸುವ ಎರಡು ಬದಿಯ ಸಂಪರ್ಕ ರಸ್ತೆ ಸಂಪೂರ್ಣ ಅಭಿವೃದ್ಧಿಗೊಳಿಸಲಾಗುವುದು. ಅತ್ಯಂತ ಸುಂದರವಾದ ಸರ್ದಾರ್ ವಲ್ಲಭಾಯಿ ವೃತ್ತವನ್ನು ನಿರ್ಮಿಸಲಾಗುವುದು ಎಂದರು.
ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ, ಪ್ರೇಮಾನಂದ ಬಿರಾದಾರ, ವಿಡಿಎ ಸದಸ್ಯೆ ಸರೋಜಿನಿ ಚೌಧರಿ, ಕೆ.ಇ.ಬಿ ಅಧಿಕಾರಿ ಹಂಡಿ, ಉದ್ಯಮಿ ಗುರು ಕೌಲಗಿ, ಗುರು ಗಚ್ಚಿನಮಠ, ಸಂತೋಷ ಪಾಟೀಲ, ಶಂಕರ ಹೂಗಾರ, ಸಿದ್ದನಗೌಡ ಬಿರಾದಾರ, ಮಡಿವಾಳ ಯಳವಾರ, ಬಸವರಾಜ ಗೊಳಸಂಗಿ, ಚಂದ್ರುಚೌಧರಿ, ಪಾಂಡು ಸಾಹುಕಾರ ದೊಡ್ಡಮನಿ, ರಾಜು ಗಣಿ, ಶರಣು ಕಾಖಂಡಕಿ, ವೀರೇಶ ವಾಲಿಕಾರ, ಬಸವರಾಜ ಬಿರಾದಾರ, ತಳಕೇರಿ, ಹಾಲವಾರ ಈ ಸಂದರ್ಭದಲ್ಲಿ ಇದ್ದರು.