ರೈತರ ಅಭಿವೃದ್ಧಿಗೆ ನಿರಂತರ ಶ್ರಮಿಸುವೆ: ಕೃಷಿ ಸಚಿವ ಬಿ.ಸಿ. ಪಾಟೀಲ
First Published Nov 23, 2020, 12:34 PM IST
ರಟ್ಟೀಹಳ್ಳಿ(ನ.23): ಭಾರತೀಯ ಕೃಷಿ ಮಳೆಯೊಡನೆ ಆಡುವ ಜೂಜಾಟವಿದ್ದಂತೆ. ಆದರೆ ರೈತರಾದ ನಾವು ಕೃಷಿಯಲ್ಲಿ ಬಹು ಬೆಳೆ ಪದ್ಧತಿಯನ್ನು ಅನುಸರಿಸಿದರೆ ಈ ಜೂಜಾಟವನ್ನು ಕೊನೆಗಾಣಿಸಿ ಆರ್ಥಿಕ ಅಭಿವೃದ್ಧಿ ಹೊಂದಬಹುದು. ಹೀಗಾಗಿ ರೈತರ ಮಗನಾಗಿ ರೈತರ ಅಭಿವೃದ್ಧಿಗೆ ನಿರಂತರ ಶ್ರಮಿಸಲು ಶಪಥ ಮಾಡುವೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ರಟ್ಟೀಹಳ್ಳಿ ತಾಲೂಕಿನ ಕಡೂರು ಗ್ರಾಮದಲ್ಲಿ ಭಾನುವಾರ ನೂತನ ಗ್ರಾಮೀಣ ಗೋದಾಮು, ವಾಣಿಜ್ಯ ಮಳಿಗೆ, ಬಸ್ ತಂಗುದಾಣ, ಜಲಾಗಾರ ಕಟ್ಟಡಗಳ ಉದ್ಘಾಟನೆ ನಂತರ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದ ಬಿ.ಸಿ. ಪಾಟೀಲ

ನಾನು ಕೂಡ ಒಬ್ಬ ರೈತನ ಮಗ, ಅದಕ್ಕಾಗಿ ಕೃಷಿ ಖಾತೆಯನ್ನು ಇಚ್ಛೆ ಪಟ್ಟು ಪಡೆದುಕೊಂಡಿದ್ದೇನೆ, ರೈತನಲ್ಲಿ ಆತ್ಮ ವಿಶ್ವಾಸ ತುಂಬುವ ಸಲುವಾಗಿ ನನ್ನ ಜನ್ಮ ದಿನದಂದು ರೈತರೊಂದಿಗೆ ಒಂದು ದಿನ ಎಂಬ ವಿನೂತನ ಕಾರ್ಯಕ್ರಮ ಆರಂಭಿಸಿದ್ದೇನೆ ಎಂದ ಸಚಿವರು
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?