ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ಎಚ್ಚರ: ಅರವಿಂದ ಲಿಂಬಾವಳಿ
ಬೆಂಗಳೂರು(ಮಾ.08): ಮಾಧ್ಯಮಗಳು ಪರಿಣಾಮಕಾರಿಯಾಗಿರುವ ಈಗಿನ ಸನ್ನಿವೇಶದಲ್ಲಿ ಪಕ್ಷದ ನಿಲುವು, ಚಟುವಟಿಕೆಗಳು, ಅಭಿವೃದ್ಧಿ ಯೋಜನೆಗಳ ಕುರಿತು ಸಮಗ್ರ ಅಧ್ಯಯನ ಸಹಿತ ಪ್ರಬಲವಾಗಿ ತಿಳಿಸುವ ಕಾರ್ಯವಾಗಬೇಕು ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ಭಾನುವಾರ ನಗರದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ‘ಮಾಧ್ಯಮ ಮಂಥನ’ ಕಾರ್ಯಾಗಾರ

ಪಕ್ಷದ ಮಾಧ್ಯಮ ಸಂಚಾಲಕರು ಹಾಗೂ ವಕ್ತಾರರನ್ನು ಉದ್ದೇಶಿಸಿ ಮಾತನಾಡಿದ ಅರವಿಂದ ಲಿಂಬಾವಳಿ ಅವರು, ಪಕ್ಷದ ವಿಷಯಗಳು, ಅಭಿವೃದ್ಧಿ ಕಾರ್ಯಗಳ ಪರ ಹಾಗೂ ಟೀಕೆ, ಆರೋಪಗಳ ವಿರುದ್ಧ ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ಪಕ್ಷಕ್ಕೆ ಮುಜುಗರವಾಗದಂತೆ ಎಚ್ಚರ ವಹಿಸಬೇಕು. ಕೇವಲ ಪ್ರಚಾರಕ್ಕೆ ಸೀಮಿತವಾಗದೇ, ಪಕ್ಷದ ಬೆಳವಣಿಗೆಗೆ ಪೂರಕವಾದ ಹೇಳಿಕೆ ನೀಡಬೇಕು ಎಂದರು.

ದೃಶ್ಯ ಮಾಧ್ಯಮಗಳ ಜತೆಗೆ ಸಾಮಾಜಿಕ ಜಾಲತಾಣಗಳು, ಇತರ ಚಾನೆಲ್‌ಗಳು ಹುಟ್ಟಿಕೊಂಡಿವೆ. ಅವೆಲ್ಲವುಗಳನ್ನು ಪಕ್ಷ ಕೇಂದ್ರಿತವಾಗಿ ಮುಖಂಡರು ನಿರ್ವಹಿಸಬೇಕು. ರಾಷ್ಟ್ರ, ರಾಜ್ಯದಂತೆ ಜಿಲ್ಲಾ ಮಟ್ಟದಲ್ಲೂ ಬಿಜೆಪಿ ಕಾರ್ಯಗಳು, ನಗರದ ಅಭಿವೃದ್ಧಿ, ಸಮಸ್ಯೆಗಳ ಕುರಿತು ತಿಳಿಸಬೇಕು. ಅದಕ್ಕಾಗಿ ಮಾಧ್ಯಮ ಸಂಸ್ಥೆಗಳ ಜತೆ ಅನೌಪಚಾರಿಕ ಸಂಬಂಧ ಇಟ್ಟುಕೊಳ್ಳಬೇಕು ಎಂದರು.

‘ಕನ್ನಡಪ್ರಭ’ ಹಾಗೂ ‘ಸುವರ್ಣ ನ್ಯೂಸ್’ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, ಸುದ್ದಿಗಳ ಮೂಲಕ ಮಾಧ್ಯಮಗಳು ಜನರಲ್ಲಿ ಒಂದು ಚಿಂತನೆ, ಅಭಿಪ್ರಾಯ ಮೂಡಿಸುತ್ತವೆ. ಅಂತಹ ಮಾಧ್ಯಮಗಳಿಂದ ಜನರನ್ನು ತಲುಪುವವರು ಜವಾಬ್ದಾರಿ ಹೇಳಿಕೆ ನೀಡಬೇಕು. ಇಂದು ಮಾಧ್ಯಮಗಳನ್ನು ನಿಯಂತ್ರಿಸಿ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಪತ್ರಿಕೆಗಳಂತೆ ವಿಶ್ವಾಸಾರ್ಹ ವಿಷಯ ತಿಳಿಸಿದರೆ ಮಾತ್ರ ಜನರು ಒಪ್ಪುತ್ತಾರೆ. ಅದಕ್ಕಾಗಿ ನವ ಮಾಧ್ಯಮಗಳನ್ನು ಜಾಗ್ರತೆಯಿಂದ ಬಳಸಿಕೊಳ್ಳಬೇಕು ಎಂದರು.

ಪಕ್ಷದ ಮುಖಂಡರಾದ ಕ್ಯಾ.ಗಣೇಶ್ ಕಾರ್ಣಿಕ್, ಎನ್.ಆರ್.ರಮೇಶ್, ಪಿ.ರಾಜೀವ್, ಛಲವಾದಿ ನಾರಾಯಣಸ್ವಾಮಿ, ತೇಜಸ್ವಿನಿಗೌಡ, ಮಂಜುನಾಥ ಮತ್ತಿತರರು ಉಪಸ್ಥಿತರಿದ್ದರು.