ಕಲಬುರಗಿ: ಕೊರೋನಾ 2ನೇ ಅಲೆ ತಪ್ಪಿಸಲು ರೋಡಿಗಿಳಿದ ಜಿಲ್ಲಾಧಿಕಾರಿ ಜ್ಯೋತ್ಸ್ನಾ
ಕಲಬುರಗಿ(ಮಾ.19): ಕೊರೋನಾ ವೈರಸ್ ಮತ್ತೆ ತನ್ನ ಆರ್ಭಟವನ್ನ ಆರಂಭಿಸಿದೆ. ಹೀಗಾಗಿ ದೇಶದ ಹಲವೆಡೆ ಲಾಕ್‌ಡೌನ್, ನೈಟ್ ಕರ್ಫ್ಯೂ ಹೇರಲಾಗಿದೆ. ಕಳೆದ ವರ್ಷ ಮಹಾಮಾರಿ ಕೊರೋನಾ ವೈರಸ್‌ಗೆ ವ್ಯಕ್ತಿಯೊಬ್ಬರು ಬಲಿಯಾಗುವುದರ ಮೂಲಕ ಕಲಬುರಗಿ ಜಿಲ್ಲೆ ಇಡೀ ದೇಶದ ಗಮನವನ್ನ ಸೆಳೆದಿತ್ತು. ಆದರೆ, ಇದೀಗ ಕಲಬುರಗಿ ಜಿಲ್ಲಾಡಳಿತ ಕೋವಿಡ್ 2ನೇ ಅಲೆಯನ್ನ ತಪ್ಪಿಸಲು ಬಹಳಷಷ್ಟು ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದೆ.
ಕೊರೋನಾ 2ನೇ ಅಲೆ ತಪ್ಪಿಸಲು ಜಿಲ್ಲಾಡಳಿತದಿಂದ ಮಾಸ್ಕ್ ಜಾಗೃತಿ ಅಭಿಯಾನ
ಖುದ್ದು ರಸ್ತೆಗೆ ಇಳಿದ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾಮತ್ತು ಪೊಲೀಸ್ ಕಮೀಷನರ್ ಸತೀಶ್ ಕುಮಾರ್
ಮಾಸ್ಕ್ ಇಲ್ಲದೆ ಹೊರಗೆ ಬಂದವರಿಗೆ ದಂಡ ವಿಧಿಸಿ ಉಚಿತ ಮಾಸ್ಕ್ ನೀಡಿದ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಲೋಖಂಡೆ
ನಗರದ ಸೂಪರ್ ಮಾರ್ಕೆಟ್‌ನಲ್ಲಿ ವೃದ್ಧರೊಬ್ಬರಿಗೆ ಮಾಸ್ಕ್ ಕಟ್ಟಿ ಜಾಗೃತಿ ಮೂಡಿಸಿದ ವಿ.ವಿ. ಜ್ಯೋತ್ಸ್ನಾ