ಚಾಮುಂಡಿ ಬೆಟ್ಟದಲ್ಲಿ ನಂದಿ ಪ್ರತಿಮೆಗೆ ಅದ್ಧೂರಿ ಮಹಾಭಿಷೇಕ
ಮೈಸೂರು(ನ.18): ಚಾಮುಂಡಿ ಬೆಟ್ಟದಲ್ಲಿರುವ ನಂದಿ ಪ್ರತಿಮೆಗೆ ಅದ್ಧೂರಿಯಾಗಿ ಮಹಾಭಿಷೇಕ ನಡೆದಿದೆ. ಬೆಟ್ಟದ ಬಳಗ ಸೇವಾ ಟ್ರಸ್ಟ್‌ನಿಂದ ಪ್ರತಿ ಕಾರ್ತಿಕ ಮಾಸದ ಮೂರನೇ ಭಾನುವಾರ ಮಹಾಭಿಷೇಕ ನಡೆಸಿಕೊಂಡು ಬರಲಾಗುತ್ತಿದ್ದು, ನ. 18ರಂದು 14ನೇ ವರ್ಷದ ಅಭಿಷೇಕ ನಡೆದಿದೆ.
ಚಾಮುಂಡಿ ಬೆಟ್ಟದಲ್ಲಿರುವ ನಂದಿ ಪ್ರತಿಮೆಗೆ ಅದ್ಧೂರಿಯಾಗಿ ಮಹಾಭಿಷೇಕ ನಡೆಯಿತು.
ಬೆಟ್ಟದ ಬಳಗ ಸೇವಾ ಟ್ರಸ್ಟ್‌ನಿಂದ ಪ್ರತಿ ಕಾರ್ತಿಕ ಮಾಸದ ಮೂರನೇ ಭಾನುವಾರ ಮಹಾಭಿಷೇಕ ನಡೆಸಿಕೊಂಡು ಬರಲಾಗುತ್ತಿದ್ದು, 14ನೇ ವರ್ಷದ ಅಭಿಷೇಕ ನಡೆದಿದೆ.
ಹಾಲು, ತುಪ್ಪ, ಜೇನು, ಸಕ್ಕರೆ, ಬಾಳೆಹಣ್ಣು, ದ್ರಾಕ್ಷಿ, ಬೆಲ್ಲ, ಖರ್ಜೂರ, ಸೌತೆಕಾಯಿ, ಕಬ್ಬಿನ ಹಾಲು, ಎಳನೀರು, ಅರಶಿನ, ಸಿಂಧೂರ, ಶ್ರೀಗಂಧ, ಪತ್ರೆ, ನಾಣ್ಯ, ಹೂವುಗಳು ಸೇರಿ ಹಲವು ವಸ್ತುಗಳಿಂದ ಅಭಿಷೇಕ ನಡೆಸಲಾಗಿದೆ.
ರುದ್ರಾಭಿಷೇಕ ಸೇರಿ ಮಹಾಮಂಗಳಾರತಿ ಪೂಜೆಯೂ ನಡೆದಿದೆ.
10 ಜನ ಪುರೋಹಿತರು ಮಹಾಭಿಷೇಕ ಪೂಜೆ ನಡೆಸಿಕೊಟ್ಟಿದ್ದು, 2000ಕ್ಕೂ ಹೆಚ್ಚು ಭಕ್ತರು ಮಹಾಭಿಷೇಕವನ್ನು ಕಣ್ತುಂಬಿಕೊಂಡರು.
ಮಹಾಭಿಷೇಕಕ್ಕೆ ಸುಮಾರು 5 ಲಕ್ಷ ರೂಪಾಯಿ ಖರ್ಚಾಗಿದ್ದು, ಮೂರು ಲಕ್ಷ ರೂಪಾಯಿಯಷ್ಟು ನಗದು ದಾನಿಗಳಿಂದ ಲಭಿಸಿದೆ.
ಮೈಸೂರು ಆದಿಚುಂಚನಗಿರಿ ಮಠದ ಮೈಸೂರು ಶಾಖೆಯ ಶ್ರೀ ಸೋಮನಾಥ ಸ್ವಾಮೀಜಿ ಹಾಗೂ ಹೊಸಮಠದ ಚಿದಾನಂದ ಸ್ವಾಮೀಜಿಗಳು ಮಹಾಭಿಷೇಕದ ದಿವ್ಯ ಸಾನಿಧ್ಯ ವಹಿಸಿದ್ದರು.