ಉಡುಪಿಯಲ್ಲಿ ಶ್ರೀಕೃಷ್ಣನ ಪ್ರತಿಷ್ಠಾಪಿಸಿದ ದಿನಾಚರಣೆ: ಸಪ್ತೋತ್ಸವ ಆರಂಭ
ವಿಶ್ವಗುರು ಶ್ರೀಮನ್ಮಧ್ವಾಚಾರ್ಯರು ಶ್ರೀಕೃಷ್ಣನನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಿದ ದಿನಾಚರಣೆಯ ಅಂಗವಾಗಿ ನಡೆಯುವ ಸಪ್ತೋತ್ಸವ ಕಾರ್ಯಕ್ರಮ ಶನಿವಾರ ಶ್ರೀಕೃಷ್ಣ ಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ, ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ ನಡೆಯಿತು. ಇದರ ಚಿತ್ರಗಳು ಇಲ್ಲಿವೆ.
ವಿಶ್ವಗುರು ಶ್ರೀಮನ್ಮಧ್ವಾಚಾರ್ಯರು ಶ್ರೀಕೃಷ್ಣನನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಿದ ದಿನಾಚರಣೆಯ ಅಂಗವಾಗಿ ನಡೆಯುವ ಸಪ್ತೋತ್ಸವ ಕಾರ್ಯಕ್ರಮ ಶನಿವಾರ ಶ್ರೀಕೃಷ್ಣ ಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ, ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ ನಡೆಯಿತು.
ಪರ್ಯಾಯ ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹಾಗೂ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಸಪ್ತೋತ್ಸವವನ್ನು ಉದ್ಘಾಟಿಸಿದರು.
ಕೃಷ್ಣಮಠದ ರಥಬೀದಿಯಲ್ಲಿ ಏಳು ದಿನಗಳ ನಡೆಯುವ ವಾರ್ಷಿಕ ಸಪ್ತೋತ್ಸವು ಪ್ರಾರಂಭಗೊಂಡಿತು.
ಕೃಷ್ಣಮಠದ ರಥಬೀದಿಯಲ್ಲಿ ಏಳು ದಿನಗಳ ನಡೆಯುವ ವಾರ್ಷಿಕ ಸಪ್ತೋತ್ಸವು ಪ್ರಾರಂಭಗೊಂಡಿತು. ಹನಿಯುತಿದ್ದ ಮಳೆಯ ನಡುವೆ, ತಾಳೆಗರಿಯ ಛತ್ರಗಳನ್ನು ಹಿಡಿದು ಅಷ್ಟಮಠಾಧೀಶರು ಉತ್ಸವದಲ್ಲಿ ಪಾಲ್ಗೊಂಡಿದ್ದರು
ಇದೇ ಸಂದರ್ಭದಲ್ಲಿ ವಿದ್ವಾಂಸರಾದ ಕೊರಂಗ್ರಪಾಡಿ ಸೀತಾರಾಮ ಆಚಾರ್ಯ, ಅದಮಾರಿನ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ನಾಗರತ್ನ ರಾವ್, ಮಲಬಾರ್ ಗೋಲ್ಡ್ ಉಡುಪಿ ಶಾಖೆಯ ವ್ಯವಸ್ಥಾಪಕರಾದ ರಾಘವೇಂದ್ರ ನಾಯಕ್ ಇವರನ್ನು ಪರ್ಯಾಯ ಶ್ರೀಪಾದರು ಸನ್ಮಾನಿಸಿದರು.
ಶ್ರೀಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಕೆ