ಆ. 5ರಿಂದ ಲಾಲ್ಬಾಗ್ ಪುಷ್ಪ ಪ್ರದರ್ಶನ: ಡಾ.ರಾಜ್, ಪುನೀತ್ ಕುರಿತ ಹತ್ತಾರು ಆಕರ್ಷಣೆ
ಕೊವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಫಲ ಪುಷ್ಪ ಪ್ರದರ್ಶನ ಈ ವರ್ಷದಿಂದ ಮತ್ತೆ ಆರಂಭವಾಗುತ್ತಿದ್ದು. ಫಲಪುಷ್ಪ ಪ್ರದರ್ಶನವನ್ನು ಜನಪ್ರಿಯ ಸಿನಿಮಾ ನಟರು ಮತ್ತು ಕರ್ನಾಟಕದ ಸಾಂಸ್ಕೃತಿಕ ಐಕಾನ್ಗಳು ಎಂದು ಖ್ಯಾತರಾದ ಡಾ.ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅವರಿಗೆ ಅರ್ಪಿಸಲಾಗಿದೆ. ಡಾ.ರಾಜ್, ಪುನೀತ್ ಕುರಿತ ಹತ್ತಾರು ಆಕರ್ಷಣೆ ಇರಲಿದೆ.
ಕರ್ನಾಟಕ ರತ್ನ ದಿವಂಗತ ಡಾ.ರಾಜ್‌ಕುಮಾರ್ ಮತ್ತು ಡಾ.ಪುನೀತ್ ರಾಜ್‌ಕುಮಾರ್ ಅವರ ನೆನಪಿನಾರ್ಥ ತೋಟಗಾರಿಕೆ ಇಲಾಖೆ ಹಮ್ಮಿಕೊಳ್ಳುತ್ತಿರುವ ಫಲಪುಷ್ಪ ಪ್ರದರ್ಶನಕ್ಕೆ ವಿವಿಧ ಜಾತಿಯ 10 ಲಕ್ಷಕ್ಕೂ ಹೆಚ್ಚು ಹೂವುಗಳ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಗಾಜಿನ ಮನೆಯ ಒಳಭಾಗದಲ್ಲಿ ಗುಲಾಬಿ, ಸೇವಂತಿಗೆ, ಜರ್ಬೆರ, ಲಿಲ್ಲಿ ಸೆರಿದಂತೆ 6.20 ಲಕ್ಷ ಮತ್ತು ಕುಂಡಗಳಲ್ಲಿ ಬೆಳೆದಿರುವ 3.50 ಲಕ್ಷ ಹೂವುಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಷ್ಟೇ ಅಲ್ಲದೆ, 27 ಜಾತಿಯ ವಿದೇಶಿ ಮತ್ತು ಶೀತವಲಯದ 13 ಜಾತಿಯ ಹೂವುಗಳು ಬಳಕೆಯಾಗಲಿವೆ.
ಗಾಜಿನ ಮನೆಯಲ್ಲಿ ಮೈಸೂರಿನ ‘ಶಕ್ತಿಧಾಮ’ ಗಾಜನೂರಿನ ಮನೆಯನ್ನು ನಿರ್ಮಿಸಲಾಗಿದ್ದು, ಹೊರಭಾಗದಲ್ಲಿ ಡಾ.ರಾಜ್ ಮತ್ತು ಪುನೀತ್ ಅವರ ಪ್ರತಿಮೆಗಳು ಎಲ್ಲರನ್ನೂ ಸ್ವಾಗತಿಸಲಿವೆ.
ಗಾಜಿನ ಮನೆಯಲ್ಲಿ ಆಗಸ್ಟ್ 5 ರಿಂದ 15ರವರೆಗೆ ಪ್ರದರ್ಶನ ನಡೆಯಲಿದ್ದು, ಇದೇ ಮೊದಲ ಬಾರಿ ಬೆಳಗ್ಗೆ 7ರಿಂದ ಸಂಜೆ 7 ಗಂಟೆಯವರೆಗೂ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ
ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾಸಂಘದ ಸಹಯೋಗದೊಂದಿಗೆ ನಡೆಯುತ್ತಿರುವ 212ನೇ ಫಲಪುಷ್ಪ ಪ್ರದರ್ಶನ ಇದಾಗಿದೆ. ಆ.5ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗ್ಗೆ 11 ಗಂಟೆಗೆ ಗಾಜಿನ ಮನೆಯಲ್ಲಿ ಪ್ರದರ್ಶನಕ್ಕೆ ಚಾಲನೆ ನೀಡುವರು. ನಟರಾದ ಡಾ. ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್ ಉಪಸ್ಥಿತರಿರುವರು
ಪ್ರದರ್ಶನದ ಅಂಗವಾಗಿ 350 ಮಂದಿ ಪೊಲೀಸ್ ಸಿಬ್ಬಂದಿ ಜೊತೆಗೆ ಗೃಹರಕ್ಷಕ ದಳ ಭದ್ರತಾ ಸಿಬ್ಬಂದಿ ಸೇರಿದಂತೆ ಸುಮಾರು 500 ಮಂದಿಯ ಭದ್ರತೆ ವ್ಯವಸ್ಥೆ ಮಾಡಲಾಗಿದೆ. 125 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. 105 ಮಾರಾಟ ಮಳಿಗೆಗಳನ್ನು ತೆರೆಯಲಾಗುವುದು. ಸುಮಾರು 2.50 ಕೋಟಿ ಖರ್ಚು ಮಾಡಿ ಜನಾಕರ್ಷಣೀಯವಾಗಿ ಪ್ರದರ್ಶನ ನಡೆಸಲಾಗುತ್ತಿದೆ. ಸುಮಾರು 12-15 ಲಕ್ಷ ಮಂದಿ ವೀಕ್ಷಕರು ಬರುವ ಸಾಧ್ಯತೆಯಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಊಟಿ ಮತ್ತು ವಿದೇಶಗಳಿಂದ ಅನೇಕ ದಿನಗಳವರೆಗೆ ಬಾಳಿಕೆ ಬರುವ ಹಲವು ಹೂವಿನ ಗಿಡಗಳು, ಹೂಗಳು ಬಂದಿವೆ. ಫಲಪುಷ್ಪ ಪ್ರದರ್ಶನಕ್ಕೆ 10 ಲಕ್ಷ ಹೂ ಬಳಕೆ ಮಾಡಲಾಗಿದ್ದು, ಇದಕ್ಕೆ 2.50 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.
30 ಅಡಿ ಪುನೀತ್ ಪ್ರತಿರೂಪದ ಚಿನ್ನದ ಲೇಪನ ಇರುವ ಪ್ರತಿಮೆಯನ್ನು ಪ್ರದರ್ಶನ ಸ್ಥಳದಲ್ಲಿ ತಾತ್ಕಾಲಿಕವಾಗಿ ಇರಿಸಲಾಗುವುದು. ಡಾ.ರಾಜ ಕುಮಾರ್ ವಾಸ ಮಾಡಿರುವ ಮನೆಯ ಮಾದರಿಯನ್ನು ಹೂವಿನ ಅಲಂಕಾರದಲ್ಲಿ ರೂಪಿಸಲಾಗುವುದು
ಫಲಪುಷ್ಪ ಪ್ರದರ್ಶನದ ಪ್ರವೇಶ ಶುಲ್ಕ ಸಾಮಾನ್ಯ ದಿನಗಳಲ್ಲಿ .70, ರಜಾ ದಿನ 75 ನಿಗದಿ ಮಾಡಲಾಗಿದೆ. ಇನ್ನು ಕಾರುಗಗಳಿಗೆ ಶಾಂತಿನಗರ ಬಸ್ ನಿಲ್ದಾಣದಲ್ಲಿರುವ ಬಹುಮಹಡಿ ವಾಹನ ನಿಲ್ದಾಣ ಹಾಗೂ ಜೆ.ಸಿ. ರಸ್ತೆಯ ಬಿಬಿಎಂಪಿ ಪಾಲಿಕೆಯ ಬಹುಮಹಡಿ ವಾಹನ ನಿಲ್ದಾಣದಲ್ಲಿ ಪಾರ್ಕಿಂಗ್ ಗೆ ವ್ಯವಸ್ಥೆ ಮಾಡಲಾಗಿದೆ.
ಗಾಜಿನ ಮನೆಯಲ್ಲಿ ಆಗಸ್ಟ್ 5 ರಿಂದ 15ರವರೆಗೆ ಪ್ರದರ್ಶನ ನಡೆಯಲಿದ್ದು, ಇದೇ ಮೊದಲ ಬಾರಿ ಬೆಳಗ್ಗೆ 7ರಿಂದ ಸಂಜೆ 7 ಗಂಟೆಯವರೆಗೂ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತೋಟಗಾರಿಕಾ ಸಚಿವ ಮುನಿರತ್ನ ವಿವರಿಸಿದರು.
ಫಲಪುಷ್ಪ ಪ್ರದರ್ಶನದ ಪ್ರವೇಶ ಶುಲ್ಕ ಸಾಮಾನ್ಯ ದಿನಗಳಲ್ಲಿ .70, ರಜಾ ದಿನ 75 ನಿಗದಿ ಮಾಡಲಾಗಿದೆ. ಇನ್ನು 1 ರಿಂದ 10ನೇ ತರಗತಿವರೆಗಿನ ಶಾಲಾ ಮಕ್ಕಳು ಶಾಲೆಯ ವತಿಯಿಂದ ಹೋದರೆ ಉಚಿತ ಪ್ರವೇಶವಿದೆ.
ಬಿದಿರಿನ ಚೌಕಟ್ಟಿನಲ್ಲಿ ಅರಳಿದ ಫೋಟೊಗಳು, ಡಾ. ರಾಜ್ ಮತ್ತು ಪುನೀತ್ ಬಗೆಗಿನ ಪೇಂಟಿಂಗ್ ಶಿಬಿರ, ಇವರ ಚಿತ್ರಗಳಿಗೆ ಜೀವ ತುಂಬಲು ನಾನಾ ಉಡುಗೆ-ತೊಡುಗೆ ತೊಟ್ಟು ಕಂಗೊಳಿಸಲಿರುವ ಮಕ್ಕಳು, ಮರಳಿನಲ್ಲಿ ಅರಳಿರುವ ಡಾ. ರಾಜ್ ಮತ್ತು ಪುನೀತ್ ಪ್ರತಿಮೆಗಳು