ಕನ್ನಡಿಗರಿಗೆ ರೇಷನ್ ಕಿಟ್ ಕೊಡಲು ಹಿಂದೇಟು: ಆಂಧ್ರದಲ್ಲಿ ಆಹಾರಕ್ಕಾಗಿ ಗರ್ಭಿಣಿ ಸೇರಿ 70 ಕೂಲಿ ಕಾರ್ಮಿಕರ ಪರದಾಟ
ಬಳ್ಳಾರಿ(ಏ.30): ಲಾಕ್‌ಡೌನ್ ಆಗಿದ್ದರಿಂದ ನೆರೆಯ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನರಸಪೇಟೆಯ ಸತ್ಯನಪಲ್ಲಿ ಗ್ರಾಮದಲ್ಲಿ ರಾಜ್ಯದ ಕೂಲಿ ಕಾರ್ಮಿಕರು ಲಾಕ್ ಆಗಿದ್ದಾರೆ. ಹೀಗಾಗಿ ಈ ಬಡ ಕುಟುಂಬಗಳು ಆಹಾರಕ್ಕಾಗಿ ಪರಿತಪಿಸುತ್ತಿವೆ. ಆಂಧ್ರದಲ್ಲಿ ಕನ್ನಡದವರೆಂದು ರೇಷನ್ ಕಿಟ್ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ತುತ್ತಿನ ಚೀಲ ತುಂಬಿಸಿಕೊಳ್ಳಲು ಕಾರ್ಮಿಕರು ಹರಹಸಾಸ ಪಡುತ್ತಿದ್ದಾರೆ.
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾವಿಹಾಳು ಗ್ರಾಮದ 70 ಕೂಲಿ ಕಾರ್ಮಿಕರ ರೋಧನೆ
ಗರ್ಭಿಣಿ, ಮಕ್ಕಳು ಸೇರಿದಂತೆ 70 ಕಾರ್ಮಿಕರು ಆಂಧ್ರ ಪ್ರದೇಶದಲ್ಲಿ ಲಾಕ್
ಆಂಧ್ರಪ್ರದೇಶದಲ್ಲಿ ಕೂಲಿ ಕೆಲಸಕ್ಕೆ ತೆರಳಿದ ರಾವಿಹಾಳು ಕುಟುಂಬದ ಅಳಲು
ಹಸಿದ ಹೊಟ್ಟೆಗೆ ಅವಮಾನದ ಬರೆ ಎಳೆಯೋ ಕೆಲಸವಾಗುತ್ತಿದೆ ಪಕ್ಕದ ರಾಜ್ಯದವರಿಂದ
ಕನ್ನಡದವರೆಂದು ರೇಷನ್ ಕಿಟ್ ಕೊಡಲು ಹಿಂದೇಟು, ಸಂಕಷ್ಟದಲ್ಲಿ ರಾವಿಹಾಳು ಕುಟುಂಬಸ್ಥರು
ಆಂಧ್ರದ ಗುಂಟೂರು ಜಿಲ್ಲೆಯ ನರಸಪೇಟೆಯ ಸತ್ಯನಪಲ್ಲಿ ಗ್ರಾಮದಲ್ಲಿ ಲಾಕ್ ಆಗಿರುವ ರಾಜ್ಯದ ಕೂಲಿ ಕಾರ್ಮಿಕರು
ನಮ್ಮನ್ನು ಸಮಸ್ಯೆಯಿಂದ ಪಾರು ಮಾಡಿ ಎಂದು ಅಳಲು ತೋಡಿಕೊಂಡ ಕಾರ್ಮಿಕರು
ನಮ್ಮನ್ನು ವಾಪಾಸ್ ಕರೆತನ್ನಿ ಎಂದು ಸಿರುಗುಪ್ಪ ತಹಸೀಲ್ದಾರ್‌ಗೆ ಪತ್ರ ಬರೆದ ಕೂಲಿ ಕಾರ್ಮಿಕರು