ಕೊಡವರ ಮನೆ ಮನೆಗಳಲ್ಲೂ ಕೈಲ್ ಪೋವ್ದ್ ಸಂಭ್ರಮ : ನೀವೂ ಕಣ್ತುಂಬಿಕೊಳ್ಳಿ
ಕೊಡವರ ಪ್ರಮುಖವಾದ ಹಬ್ಬಗಳಲ್ಲಿ ಆಯುಧ ಪೂಜೆಯಾಗಿ ಆಚರಿಸಲಾಗುವ ಹಬ್ಬವೇ ಕೈಲ್‌ಪೊವ್ದ್.
ಮೂಲತಃ ಕೃಷಿಕರಾದ ಕೊಡಗಿನ ಜನ ತಮ್ಮ ಆಯುಧಗಳಾದ ಕೋವಿ,ಒಡಿಕತ್ತಿ,ಪೀಚೆಕತ್ತಿ, ಗೆಜ್ಜೆತಂಡ್ ಹಾಗೂ ವ್ಯವಸಾಯಕ್ಕೆ ಬಳಸುವ ಪರಿಕರಗಳನ್ನು ಶುಚಿಗೊಳಿಸಿ ಹಬ್ಬದ ದಿನದಂದು ಪೂಜಿಸುವುದೇ ಕೈಲ್‌ಪೊವ್ದ್‌ನ ವಿಶೇಷ.
ಕೊಡಗಿನ ಬಹುತೇಕ ಪ್ರದೇಶಗಳಲ್ಲಿ ಸೆಪ್ಟೆಂಬರ್ 3ರಂದು ಸಾರ್ವತ್ರಿಕವಾಗಿ ಕೈಲ್‌ಪೊವ್ದ್ ಹಬ್ಬವನ್ನು ಆಚರಿಸಲಾಗುತ್ತದೆ.ಅಂದು ಜಿಲ್ಲೆಗೆ ಸೀಮಿತವಾದಂತೆ ರಜೆಯನ್ನು ಕೂಡ ಘೋಷಿಸಲಾಗುತ್ತದೆ.
ಕೊಡವರ ಪ್ರಮುಖವಾದ ಹಬ್ಬಗಳಲ್ಲಿ ಆಯುಧ ಪೂಜೆಯಾಗಿ ಆಚರಿಸಲಾಗುವ ಹಬ್ಬವೇ ಕೈಲ್‌ಪೊವ್ದ್.
ಮೂಲತಃ ಕೃಷಿಕರಾದ ಕೊಡಗಿನ ಜನ ತಮ್ಮ ಆಯುಧಗಳಾದ ಕೋವಿ,ಒಡಿಕತ್ತಿ,ಪೀಚೆಕತ್ತಿ, ಗೆಜ್ಜೆತಂಡ್ ಹಾಗೂ ವ್ಯವಸಾಯಕ್ಕೆ ಬಳಸುವ ಪರಿಕರಗಳನ್ನು ಶುಚಿಗೊಳಿಸಿ ಹಬ್ಬದ ದಿನದಂದು ಪೂಜಿಸುವುದೇ ಕೈಲ್‌ಪೊವ್ದ್‌ನ ವಿಶೇಷ.
ಕೊಡಗಿನ ಬಹುತೇಕ ಪ್ರದೇಶಗಳಲ್ಲಿ ಸೆಪ್ಟೆಂಬರ್ 3ರಂದು ಸಾರ್ವತ್ರಿಕವಾಗಿ ಕೈಲ್‌ಪೊವ್ದ್ ಹಬ್ಬವನ್ನು ಆಚರಿಸಲಾಗುತ್ತದೆ.
ಅಂದು ಜಿಲ್ಲೆಗೆ ಸೀಮಿತವಾದಂತೆ ರಜೆಯನ್ನು ಕೂಡ ಘೋಷಿಸಲಾಗುತ್ತದೆ.
ಕೈಲ್‌ಪೊವ್ದ್ ಹಬ್ಬದಲ್ಲಿ ಕುಟುಂಬಸ್ಥರೆಲ್ಲಾ ತಮ್ಮ ಕುಟುಂಬದ ಐನ್‌ಮನೆಯಲ್ಲಿ ಸೇರಿ ನೆಲ್ಲಕ್ಕಿ ನಡುಬಾಡೆಯಲ್ಲಿ ದೇವರಿಗೆ ಅಕ್ಕಿ ಹಾಕಿ ಆಯುಧಗಳಿಗೆ ಪೂಜೆ ಸಲ್ಲಿಸುತ್ತಾರೆ.
ಕುಟುಂಬದ ಎಲ್ಲಾ ಸದಸ್ಯರು ಅವಿಭಕ್ತ ಕುಟುಂಬದ ಆಚರಣೆಯಾಗಿ ನಡೆಸಿಕೊಂಡು ಬರುತ್ತಿರುವಂತೆ ಕುಟುಂಬದ ಎಲ್ಲಾ ಸದಸ್ಯರ ಕೋವಿ ಮತ್ತು ಶಸ್ತ್ರಾಸ್ತ್ರಗಳನ್ನು ಅಂದು ಅಲ್ಲಿಯೇ ಜಂಟಿಯಾಗಿ ಪೂಜಿಸುತ್ತಾರೆ.
ಕೈಲ್ ಎಂದರೆ 'ಆಯುಧ', ಪೊಳ್ದ್ ಎಂದರೆ 'ಪೂಜೆ' ಕೈಲ್‌ಪೊವ್ದ್ ಎಂದರೆ ಆಯುಧಾ ಪೂಜೆ.
ಕೊಡವರ ಕ್ಯಾಲೆಂಡರ್‌ನಲ್ಲಿ 4ನೇ ತಿಂಗಳಾದ ಕಕ್ಕಡ ಕಳೆದ ನಂತರ ಬರುವ 5ನೇ ತಿಂಗಳಾದ ಚಿನ್ಯಾರ್‌ನ ಆಚರಣೆಯಲ್ಲಿ ಚಿನ್ಯಾರ್ ಪದ್‌ನಟ್ಟ್ ಅಂದರೆ ಸೆಪ್ಟೆಂಬರ್ 3ರಂದು ಸಾಮಾನ್ಯವಾಗಿ ಕೊಡಗಿನೆಲ್ಲೆಡೆ ಕೈಲ್‌ಪೊವ್ದ್ ಹಬ್ಬದ ಸಂಭ್ರಮ.
ಸಾರ್ವತ್ರಿಕವಾಗಿ ಕೊಡಗಿನಲ್ಲಿ ಸೆಪ್ಟೆಂಬರ್ 3 ರಂದು ಕೈಲ್‌ಪೊವ್ದ್ ಆಚರಿಸಲಾಗುತ್ತದೆಯಾದರೂ ಚಿನ್ಯಾರ್ 02 ರಂದು ಸೂರ್ಲಬ್ಬಿ ನಾಡ್‌ನ ಕೆಲ ಭಾಗಗಳಲ್ಲಿ , ಚಿನ್ಯಾರ್ 10 ರಂದು ಮುತ್ತ್‌ನಾಡ್‌ನ ಕೆಲವೆಡೆ ಹಾಗೂ ಚಿನ್ಯಾರ್ 12 ರಂದು ನಾಲ್‌ನಾಡ್ ಎಂದರೆ ನಾಪೋಕ್ಲು ಭಾಗದಲ್ಲಿ ಜನರು ಈ ಹಬ್ಬವನ್ನು ಆಚರಿಸುತ್ತಾರೆ.
ವಿವಿಧ ಕಡೆಗಳಲ್ಲಿ ಬೇರೆ ಬೇರೆ ದಿನಾಂಕದಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆಯಾದರೂ ಹಬ್ಬದ ಆಚರಣೆಯ ವಿಧಿವಿಧಾನಗಳು ಎಲ್ಲಾ ಕಡೆಗಳಲ್ಲಿಯೂ ಬಹುತೇಕ ಒಂದೇ ತೆರನಾಗಿರುತ್ತವೆ.
ಇದು ಪುರಾತನ ಕಾಲದಿಂದಲೇ ನಡೆದುಕೊಂಡು ಬಂದಿರುವ ಹಬ್ಬವಾಗಿದ್ದು ಇಂದಿಗೂ ಕೂಡ ಪ್ರತಿ ಮನೆಗಳಲ್ಲಿಯೂ ಮುಂದುವರಿಸಿಕೊಂಡು ಹೋಗಲಾಗುತ್ತಿರುವ ಆಚರಣೆ.
ಕೊಡವರ ಮನೆ ಮನೆಗಳಲ್ಲೂ ಕೈಲ್ ಪೋವ್ದ್ ಸಂಭ್ರಮ