ಚೀನಾ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಅವಕಾಶ ಕೊಡಿ: ರಕ್ತದಲ್ಲಿ ಪತ್ರ ಬರೆದ ಹೋಮ್ ಗಾರ್ಡ್
ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಜೂನ್ 15ರ ಮಧ್ಯರಾತ್ರಿ ಲಡಾಕ್‌ನ ಗಲ್ವಾನ್ ವ್ಯಾಲಿಯಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಸಂಘರ್ಷ ಉಂಟಾಗಿತ್ತು. ಈ ಘಟನೆಯಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದಾರೆ. ಹಿನ್ನೆಲೆಯಲ್ಲಿ ಚೀನಾ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಬೇಕೆನ್ನುವ ಕಿಚ್ಚು ಭಾರತದಲ್ಲಿ ಜೋರಾಗಿದೆ. ಇದರ ಮಧ್ಯೆ ಹೋಮ್ ಗಾರ್ಡ್ ಒಬ್ಬರು ಚೀನಾ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಅವಕಾಶ ಕೊಡಿ ಎಂದು ರಾಷ್ಟ್ರಪತಿಗೆ ರಕ್ತದಲ್ಲಿ ಪತ್ರ ಬರೆದ ಮನವಿ ಮಾಡಿಕೊಂಡಿದ್ದಾರೆ.
ಚೀನಾ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಅವಕಾಶ ಕೊಡಿ ಎಂದು ರಾಯಚೂರು ಜಿಲ್ಲೆಯ ಹೋಮ್ ಗಾರ್ಡ್ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.
ರಾಯಚೂರು ಜಿಲ್ಲೆ ಮಸ್ಕಿಯ ಗೃಹ ರಕ್ಷಕ ದಳದ ಸಿಬ್ಬಂದಿ ಲಕ್ಷ್ಮಣ ಮಡಿವಾಳ ಎನ್ನುವರು ಗಡಿಯಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಿ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್‌ಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.
ದೇಶ ಸೇವೆಗಾಗಿ ನನ್ನ ರಕ್ತ ಕುದಿಯುತ್ತಿದೆ. ಗುಲ್ವಾನ್ ಪ್ರದೇಶದಲ್ಲಿ ಕುತಂತ್ರ ಬುದ್ಧಿಯಿಂದ ಚೀನಿಯರು ನಮ್ಮ ಸೈನಿಕರ ಮೇಲೆ ದಾಳಿ ಮಾಡಿದ್ದಾರೆ. ನಮ್ಮ ಸೈನಿಕರು ಹುತಾತ್ಮರಾದಾಗಿನಿಂದ ನನಗೆ ಸರಿಯಾಗಿ ನಿದ್ದೆ ಬರ್ತಿಲ್ಲ ಎಂದು ಪತ್ರದಲ್ಲಿ ಬರೆದಿದ್ದಾರೆ.
ನನಗೆ ಸೇನೆಯ ಗಡಿಯಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಿ. ನನ್ನ ದೇಶದ ಸೈನಿಕರ ಹತ್ಯೆಗೆ ಪ್ರತೀಕಾರ ತೀರಿಸಲು ಸೇನೆಯಲ್ಲಿ ಅವಕಾಶ ಮಾಡಿಕೊಡಿ ಎಂದು ರಾಷ್ಟ್ರಪತಿಗಳಿಗೆ ಪತ್ರ ಮೂಲಕ ಮನವಿ ಮಾಡಿದ್ದಾರೆ.
ಸುಮಾರು ಮೂರು ಪುಟಗಳ ಪತ್ರ ಬರೆದಿದ್ದಾರೆ
ರ ಮೂರು ಪುಟಗಳ ಪತ್ರವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಡ್ರೆಸ್‌ಗೆ ಬರೆದಿದ್ದಾರೆ.
ಬಳಿಕ ಅಂಚೆ ಕಚೇರಿ ಮೂಲಕ ರಾಷ್ಟ್ರಪತಿಗೆ ಪೋಸ್ಟ್ ಮಾಡಿದರು.