- Home
- Karnataka Districts
- ರಾಷ್ಟ್ರೀಯ ಹೆದ್ದಾರಿಗೆ ಬಂದ ಸಾಂಬಾರ್ ಜಗಳ; ಸೋದರಮಾವನಿಂದ ಹಲ್ಲೆಗೆ ಯತ್ನ, ಪೊಲೀಸರ ವಶಕ್ಕೆ
ರಾಷ್ಟ್ರೀಯ ಹೆದ್ದಾರಿಗೆ ಬಂದ ಸಾಂಬಾರ್ ಜಗಳ; ಸೋದರಮಾವನಿಂದ ಹಲ್ಲೆಗೆ ಯತ್ನ, ಪೊಲೀಸರ ವಶಕ್ಕೆ
ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ, ಸಾಂಬಾರ್ ಮಾಡಿಲ್ಲ ಎಂಬ ಕಾರಣಕ್ಕೆ ನಾಗರಾಜ್ ಎಂಬ ವ್ಯಕ್ತಿ ಕುಡಿದು ಬಂದು ತನ್ನ ಸೋದರಿ ಮತ್ತು ಆಕೆಯ ಮಗಳ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಸ್ಥಳೀಯರು ಜಗಳ ಬಿಡಿಸಲು ಹೋದಾಗ ಅವರ ಮೇಲೂ ಹಲ್ಲೆಗೆ ಮುಂದಾಗಿದ್ದು, ಕೊನೆಗೆ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ಸಾಂಬಾರ್ ಗಲಾಟೆ
ಸಾಂಬಾರ್ ಮಾಡಿಲ್ಲ ಎಂಬ ಕಾರಣಕ್ಕೆ ಸೋದರಿಯ ಪುತ್ರಿ ಮೇಲೆ ಹಲ್ಲೆಗೆ ಯತ್ನಿಸಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಾಂದಿ ಎಂಬಲ್ಲಿ ಘಟನೆ ನಡೆದಿದೆ.
ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ
ನಾಗರಾಜ್ ಎಂಬಾತನೇ ಸೋದರಿ ಮಗಳ ಮೇಲೆ ಹಲ್ಲೆಗೆ ಯತ್ನಿಸಿದ ವ್ಯಕ್ತಿ. ಚಿತ್ರದುರ್ಗ ಮೂಲದ ನಾಗರಾಜು ಕುಟುಂಬ ಸಮೇತ ಕೂಲಿ ಕೆಲಸಕ್ಕಾಗಿ ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಿದ್ದು, ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಈತ ವಾಸವಾಗಿದ್ದಾನೆ.
ಕುಡಿದು ಗಲಾಟೆ
ಸಾಂಬಾರ್ ಮಾಡಿಲ್ಲ ಅಂತಾ ಕುಡಿದು ಬಂದು ಅಕ್ಕ-ಅಕ್ಕನ ಮಗಳ ಮೇಲೆ ಹಲ್ಲೆಗೆ ನಾಗರಾಜ್ ಮುಂದಾಗಿದ್ದಾನೆ. ಮನೆಯಿಂದ ಹೊರಬಂದು ರಸ್ತೆ ಬದಿ ನಿಂತು ಸುಮಾರು ಸಮಯ ಜಗಳ ಮಾಡಿದ್ದಾನೆ. ಅಕ್ಕ ಅಂಜಲಿ, ಮಗಳು ಮೌಲ್ಯ ಮೇಲೆ ನಾಗರಾಜ್ ದೌರ್ಜನ್ಯ ನಡೆಸುತ್ತಿದ್ದನು.
ಇದನ್ನೂ ಓದಿ: ಭಾರತವನ್ನ ನರಕ ಎಂದ ಟ್ರಂಪ್ ಒಬ್ಬ ಹುಚ್ಚ, ಕೇಂದ್ರದ ಕೆಲವು ನಾಯಕರು ಅಮೆರಿಕದ ಗುಲಾಮರಂತೆ ವರ್ತಿಸುತ್ತಿದ್ದಾರೆ:: ಲಾಡ್ ಆಕ್ರೋಶ
ನಾಗರಾಜುನನ್ನು ವಶಕ್ಕೆ ಪಡೆದ ಪೊಲೀಸರು
ಈ ವೇಳೆ ಜಗಳ ಬಿಡಿಸಲು ಹೋದ ಸ್ಥಳೀಯರು ಮೇಲೂ ನಾಗರಾಜು ಹಲ್ಲೆಗೆ ಮುಂದಾಗಿದ್ದಾನೆ. ಕೆಲವರು ಜಗಳದ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದುಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಆಲ್ಡೂರು ಪೊಲೀಸರು ನಾಗರಾಜುನನ್ನು ವಶಕ್ಕೆ ಪಡೆದಕೊಂಡಿದ್ದಾರೆ.
ಇದನ್ನೂ ಓದಿ: ಅಡ್ಡಬೋರ್ ಮೂಲಕ ಬತ್ತಿದ ಕೆರೆ, ಬಾವಿಗಳಲ್ಲಿ ನೀರಿನ ಸೆಲೆ; ಮಂಗಳೂರಿನಲ್ಲಿ ಜಲಕ್ರಾಂತಿ

