ದಾಸೋಹ ಮೂರ್ತಿ ಹಾಲಕೆರೆ ಅನ್ನದಾನೇಶ್ವರ ಶ್ರೀಗಳಿಗೆ ಜನ್ಮದಿನೋತ್ಸವ
First Published Dec 19, 2020, 11:33 AM IST
ನಿಂಗರಾಜ ಬೇವಿನಕಟ್ಟಿ
ನರೇಗಲ್ಲ(ಡಿ.19): ಅನ್ನ, ಅಕ್ಷರ ದಾಸೋಹದ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿ, ಸಾವಿರಾರು ಶಿಕ್ಷಕರ ಸಮುದಾಯಕ್ಕೆ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿದ ಹಾಲಕೆರೆ ಅನ್ನದಾನೇಶ್ವರ ಶ್ರೀಗಳು 83 ವಸಂತಗಳನ್ನು ಪೂರೈಸಿ 84ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ರಾಜ್ಯಾದ್ಯಂತ ಹಾಲಕೆರೆ ಅನ್ನದಾನೇಶ್ವರ ಮಠದ ವಿವಿಧ ಮಠ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಪೂಜಾ ಕೈಂಕರ್ಯಗಳು ಜರುಗಲಿವೆ.

ಶಿಕ್ಷಣ ಕ್ಷೇತ್ರ ತೆರೆಯುವ ಮೂಲಕ ಅಸಂಖ್ಯಾತ ಮಕ್ಕಳ ಅಕ್ಷರ ನಿಧಿಯಾಗಿರುವ ಶ್ರೀಗಳು, ಸದಾ ರೈತಪರವಾದ ವಿಚಾರಧಾರೆ ಹೊಂದಿ ಸಾವಯವ ಕೃಷಿಗೆ ಉತ್ತೇಜನ ನೀಡಿ, ಮಣ್ಣಿನ ಸಂರಕ್ಷಣೆ ಕುರಿತು ಕಾರ್ಯಕ್ರಮ ಹಮ್ಮಿಕೊಂಡು ರೈತರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸಬೇಕೆಂಬ ಮಹಾತ್ವಾಕಾಂಕ್ಷೆಯಿಂದ ನಕಲು ರಹಿತ ಪರೀಕ್ಷೆಗೆ ಆದ್ಯತೆ ನೀಡಿರುವ ಶ್ರೀಗಳು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಹಾಲಕೆರೆ ಮಠದಿಂದ ಉಳವಿ ವರೆಗೆ 261 ಚಕ್ಕಡಿಗಳ ಮೂಲಕ ಸತತ ಹದಿನೈದು ದಿನಗಳ ಕಾಲ ಚಕ್ಕಡಿಯಲ್ಲಿ ಸಾಗರೋಪಾದಿ ಭಕ್ತರೊಂದಿಗೆ ಉಳವಿಯಾತ್ರೆ ಕೈಗೊಂಡು ಜನತೆಗೆ ಅರಿವು ಮೂಡಿಸಿದರು.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?