ಕೊಪ್ಪಳ: ಗವಿಮಠ ಶ್ರೀಗಳ ಪದವಿ ಕ್ಲಾಸ್‌ಮೇಟ್ಸ್‌ಗಳಿಂದ ಕೋವಿಡ್ ಆಸ್ಪತ್ರೆಗೆ ದೇಣಿಗೆ
ಕೊಪ್ಪಳ(ಜೂ.07): ಗವಿಮಠ ಶ್ರೀಗಳ ಪದವಿ ಸಹಪಾಠಿಗಳೆಲ್ಲ ಸೇರಿ ಕೋವಿಡ್ ಆಸ್ಪತ್ರೆಗೆ 87 ಸಾವಿರ ರು. ಯನ್ನ ದೇಣಿಗೆಯಾಗಿ ನೀಡಿದ್ದಾರೆ. ಕೊರೋನಾ 2ನೇ ಅಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಕೋವಿಡ್ ದಾಳಿಗೆ ತುತ್ತಾಗಿ ಪಡಬಾರದ ಸಂಕಷ್ಟಗಳಲ್ಲ ಅನುಭವಿಸಿದ್ದಾರೆ. ಇತ್ತೀಚೆಗೆ ಗವಿಮಠದಿಂದ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. ಹೀಗಾಗಿ ಕೊರೋನಾ ರೋಗಿಗಳಿಗೆ ಸಹಾಯವಾಗಲಿ ಅಂತ ಗವಿಮಠ ಶ್ರೀಗಳ ಪದವಿ ಕ್ಲಾಸ್‌ಮೇಟ್ಸ್‌ಗಳು ಧನಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಶ್ರೀ ಗವಿಸಿದ್ಧೇಶ್ವರ ಕೋವಿಡ್ ಆಸ್ಪತ್ರೆಗೆ ಶ್ರೀಗವಿಸಿದ್ಧೇಶ್ವರ ಪದವಿ ಕ್ಲಾಸ್‌ಮೇಟ್ಸ್‌ಗಳಿಂದ 87 ಸಾವಿರ ರು. ದೇಣಿಗೆ
ಭಾನುವಾರ ಶ್ರೀಗಳನ್ನು ಭೇಟಿಯಾಗಿ ಸುಮಾರು ಹೊತ್ತು ಮಾತನಾಡಿದ ಪದವಿ ಸಹಪಾಠಿಗಳು
ಶ್ರೀಗಳು ಕೋವಿಡ್ ಆಸ್ಪತ್ರೆ ಪ್ರಾರಂಭಿಸಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಗೆಳೆಯರು
ಶ್ರೀಗಳು ಸಹ ತಮ್ಮ ಕ್ಲಾಸ್‌ಮೇಟ್ಸ್‌ಗಳೊಂದಿಗೆ ಆತ್ಮೀಯವಾಗಿಯೇ ಮಾತನಾಡಿ, ಯರ್ಯಾರು ಏನೇನು ಮಾಡುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಪಡೆಯುತ್ತಲೇ ಪದವಿ ಓದುವ ಸಂದರ್ಭವನ್ನು ಮೆಲಕು ಹಾಕಿದರು.
ಶ್ರೀಗಳ ಸೂಚನೆಯಂತೆ ಮಠದಲ್ಲಿಯೇ ಎಲ್ಲರೂ ಪ್ರಸಾದ ಸ್ವೀಕಾರ ಮಾಡಿದ್ದು, ಗವಿಮಠ ಶ್ರೀಗಳ ಸ್ನೇಹಬಳಗ ಫುಲ್ ಖುಷಿಪಟ್ಟಿದೆ