ಬೆಂಗಳೂರು ವಿಭಾಗೀಯ ರೈಲ್ವೆಗೆ 9 ವಿಭಾಗಗಳಲ್ಲಿ ದಕ್ಷತಾ ಪ್ರಶಸ್ತಿ

First Published 15, Oct 2020, 9:26 AM

ಬೆಂಗಳೂರು(ಅ.15): ನೈಋುತ್ಯಯು ರೈಲ್ವೆ ಸಪ್ತಾಹದ ಅಂಗವಾಗಿ 2019-20ನೇ ಸಾಲಿನಲ್ಲಿ ವಿಭಾಗೀಯ ರೈಲ್ವೆಗಳ ವಿವಿಧ ವಿಭಾಗಗಳ ಅತ್ಯುತ್ತಮ ಕಾರ್ಯ ನಿರ್ವಹಣೆಗೆ ಕೊಡಮಾಡುವ ಪ್ರಶಸ್ತಿಗಳ ಪೈಕಿ ಬೆಂಗಳೂರು ವಿಭಾಗೀಯ ರೈಲ್ವೆಗೆ ಸಮಗ್ರ ಪ್ರಶಸ್ತಿಯೂ ಸೇರಿದಂತೆ 9 ವಿಭಾಗಗಳಲ್ಲಿ ದಕ್ಷತಾ ಪ್ರಶಸ್ತಿ ಲಭಿಸಿದೆ.

<p>65ನೇ ರೈಲ್ವೆ ಸಪ್ತಾಹದ ಅಂಗವಾಗಿ ಮಂಗಳವಾರ ಹುಬ್ಬಳ್ಳಿಯ ರೈಲ್‌ ಸೌಧದಲ್ಲಿ ನಡೆದ ಕಾರ್ಯಕ್ರಮ ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ ವಿಭಾಗಗಳ ಕಾರ್ಯ ನಿರ್ವಹಣೆಯ ದಕ್ಷತೆ ಆಧರಿಸಿ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ತಿಳಿಸಿದ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕ್‌ ಕುಮಾರ್‌ ವರ್ಮಾ</p>

65ನೇ ರೈಲ್ವೆ ಸಪ್ತಾಹದ ಅಂಗವಾಗಿ ಮಂಗಳವಾರ ಹುಬ್ಬಳ್ಳಿಯ ರೈಲ್‌ ಸೌಧದಲ್ಲಿ ನಡೆದ ಕಾರ್ಯಕ್ರಮ ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ ವಿಭಾಗಗಳ ಕಾರ್ಯ ನಿರ್ವಹಣೆಯ ದಕ್ಷತೆ ಆಧರಿಸಿ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ತಿಳಿಸಿದ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕ್‌ ಕುಮಾರ್‌ ವರ್ಮಾ

<p>ಒಟ್ಟು 20 ದಕ್ಷತಾ ಪ್ರಶಸ್ತಿಯಲ್ಲಿ ಬೆಂಗಳೂರು ವಿಭಾಗಕ್ಕೆ 9 ಪ್ರಶಸ್ತಿಗಳು ಲಭಿಸಿವೆ. ಅಂತೆಯೆ ಕಾರ್ಯ ದಕ್ಷತೆ ವ್ಯಕ್ತಿಗತ ವರ್ಗದಲ್ಲಿ ವಿಭಾಗದ 9 ಗೆಜೆಟೆಡ್‌ ಅಧಿಕಾರಿಗಳು ಹಾಗೂ 57 ಮಂದಿ ಸಿಬ್ಬಂದಿಗೆ ನೈಋುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯ್‌ ಕುಮಾರ್‌ ಸಿಂಗ್‌ ಅವರು ಪ್ರಶಸ್ತಿ ಪ್ರದಾನ ಮಾಡಿದರು ಎಂದ ಅಶೋಕ್‌ ಕುಮಾರ್‌ ವರ್ಮಾ</p>

ಒಟ್ಟು 20 ದಕ್ಷತಾ ಪ್ರಶಸ್ತಿಯಲ್ಲಿ ಬೆಂಗಳೂರು ವಿಭಾಗಕ್ಕೆ 9 ಪ್ರಶಸ್ತಿಗಳು ಲಭಿಸಿವೆ. ಅಂತೆಯೆ ಕಾರ್ಯ ದಕ್ಷತೆ ವ್ಯಕ್ತಿಗತ ವರ್ಗದಲ್ಲಿ ವಿಭಾಗದ 9 ಗೆಜೆಟೆಡ್‌ ಅಧಿಕಾರಿಗಳು ಹಾಗೂ 57 ಮಂದಿ ಸಿಬ್ಬಂದಿಗೆ ನೈಋುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯ್‌ ಕುಮಾರ್‌ ಸಿಂಗ್‌ ಅವರು ಪ್ರಶಸ್ತಿ ಪ್ರದಾನ ಮಾಡಿದರು ಎಂದ ಅಶೋಕ್‌ ಕುಮಾರ್‌ ವರ್ಮಾ

<p>ಬೆಂಗಳೂರು ವಿಭಾಗಕ್ಕೆ ವಾಣಿಜ್ಯ ದಕ್ಷತೆ, ವಿದ್ಯುತ್‌ ಉಳಿತಾಯ, ಎಂಜಿನಿಯರಿಂಗ್‌ ಕಾರ್ಯ, ವೈದ್ಯಕೀಯ ಸೇವೆ, ನಿಟ್ಟೂರು ನಿಲ್ದಾಣ ಉತ್ತಮ ನಿರ್ವಹಣೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಉತ್ತಮ ಕಾರ್ಯ ನಿರ್ವಹಣೆಗಾಗಿ ಪ್ರಶಸ್ತಿ ಲಭಿಸಿದೆ. ಬೆಂಗಳೂರು ವಿಭಾಗವು ನಿರಂತರವಾಗಿ ಸೇವೆ ಹಾಗೂ ಮೂಲ ಸೌಕರ್ಯ ಉನ್ನತೀಕರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಅಂತೆಯೆ ಪ್ರಯಾಣಿಕ ಸೇವೆ ಜತೆಗೆ ಸರಕು ಸಾಗಣೆಗೂ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ತಿಳಿಸಿದ್ದಾರೆ.</p>

ಬೆಂಗಳೂರು ವಿಭಾಗಕ್ಕೆ ವಾಣಿಜ್ಯ ದಕ್ಷತೆ, ವಿದ್ಯುತ್‌ ಉಳಿತಾಯ, ಎಂಜಿನಿಯರಿಂಗ್‌ ಕಾರ್ಯ, ವೈದ್ಯಕೀಯ ಸೇವೆ, ನಿಟ್ಟೂರು ನಿಲ್ದಾಣ ಉತ್ತಮ ನಿರ್ವಹಣೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಉತ್ತಮ ಕಾರ್ಯ ನಿರ್ವಹಣೆಗಾಗಿ ಪ್ರಶಸ್ತಿ ಲಭಿಸಿದೆ. ಬೆಂಗಳೂರು ವಿಭಾಗವು ನಿರಂತರವಾಗಿ ಸೇವೆ ಹಾಗೂ ಮೂಲ ಸೌಕರ್ಯ ಉನ್ನತೀಕರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಅಂತೆಯೆ ಪ್ರಯಾಣಿಕ ಸೇವೆ ಜತೆಗೆ ಸರಕು ಸಾಗಣೆಗೂ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ತಿಳಿಸಿದ್ದಾರೆ.

<p>1853ರ ಏಪ್ರಿಲ್‌ 16ರಂದು ದೇಶದ ಪ್ರಥಮ ರೈಲು ಮುಂಬೈನಿಂದ ಥಾಣೆವರೆಗೆ ಸಂಚರಿಸಿದ ಸ್ಮರಣಾರ್ಥ ಪ್ರತಿ ವರ್ಷ ರೈಲ್ವೆ ಸಪ್ತಾಹ ಆಚರಿಸಲಾಗುತ್ತದೆ. ಈ ವೇಳೆ ರೈಲ್ವೆ ಮಂಡಳಿ, ವಲಯ ಮತ್ತು ವಿಭಾಗೀಯ ಮಟ್ಟದಲ್ಲಿ ಉತ್ತಮ ಸೇವೆ ಮಾಡಿದ ಅಧಿಕಾರಿ ಹಾಗೂ ಸಿಬ್ಬಂದಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ.</p>

1853ರ ಏಪ್ರಿಲ್‌ 16ರಂದು ದೇಶದ ಪ್ರಥಮ ರೈಲು ಮುಂಬೈನಿಂದ ಥಾಣೆವರೆಗೆ ಸಂಚರಿಸಿದ ಸ್ಮರಣಾರ್ಥ ಪ್ರತಿ ವರ್ಷ ರೈಲ್ವೆ ಸಪ್ತಾಹ ಆಚರಿಸಲಾಗುತ್ತದೆ. ಈ ವೇಳೆ ರೈಲ್ವೆ ಮಂಡಳಿ, ವಲಯ ಮತ್ತು ವಿಭಾಗೀಯ ಮಟ್ಟದಲ್ಲಿ ಉತ್ತಮ ಸೇವೆ ಮಾಡಿದ ಅಧಿಕಾರಿ ಹಾಗೂ ಸಿಬ್ಬಂದಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

loader