MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಸರ್ಕಾರಿ ಅಧಿಕಾರಿಗಳ ಎಡವಟ್ಟು, ಬರಗಾಲದಲ್ಲಿ ಬೆಳೆವಿಮೆ ಪರಿಹಾರಕ್ಕೂ ಬಿತ್ತು ಪೆಟ್ಟು; ಪಂಚಾಯತಿಗೆ ಬೀಗ ಜಡಿದ ರೈತರು!

ಸರ್ಕಾರಿ ಅಧಿಕಾರಿಗಳ ಎಡವಟ್ಟು, ಬರಗಾಲದಲ್ಲಿ ಬೆಳೆವಿಮೆ ಪರಿಹಾರಕ್ಕೂ ಬಿತ್ತು ಪೆಟ್ಟು; ಪಂಚಾಯತಿಗೆ ಬೀಗ ಜಡಿದ ರೈತರು!

ದಾವಣಗೆರೆ ತಾಲೂಕಿನ ಐಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಧಿಕಾರಿಗಳ ತಪ್ಪು ಜಿಪಿಎಸ್ ಸರ್ವೆಯಿಂದಾಗಿ ಸಾವಿರಾರು ರೈತರು ಬೆಳೆವಿಮೆ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಒಣ ಬೇಸಾಯದ ಜಮೀನುಗಳನ್ನು ನೀರಾವರಿ ಪ್ರದೇಶವೆಂದು ನಮೂದಿಸಿದ್ದನ್ನು ಖಂಡಿಸಿ ರೈತರು ಪಂಚಾಯತಿಗೆ ಬೀಗ ಜಡಿದು ಪ್ರತಿಭಟಿಸಿದ್ದಾರೆ.

2 Min read
Author : Sathish Kumar KH
Published : Oct 19 2026, 05:22 PM IST
Share this Photo Gallery
  • FB
  • TW
  • Linkdin
  • Whatsapp
15
ಬರಗಾಲದಲ್ಲಿ ಬೆಳೆವಿಮೆ ಪರಿಹಾರ ಕಳೆದುಕೊಳ್ಳುವ ಭೀತಿ
Image Credit : Asianet News

ಬರಗಾಲದಲ್ಲಿ ಬೆಳೆವಿಮೆ ಪರಿಹಾರ ಕಳೆದುಕೊಳ್ಳುವ ಭೀತಿ

ದಾವಣಗೆರೆ (ಅ.19): ಒಂದೆಡೆ ಮಳೆಯಿಲ್ಲದೆ ಕಂಗಾಲಾಗಿರುವ ಅನ್ನದಾತನಿಗೆ, ಇನ್ನೊಂದೆಡೆ ಅಧಿಕಾರಿಗಳ ಬೇಜವಾಬ್ದಾರಿತನ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅಧಿಕಾರಿಗಳು ಮಾಡಿದ ಒಂದೇ ಒಂದು ಯಡವಟ್ಟಿನಿಂದಾಗಿ ಸಾವಿರಾರು ರೈತರು ಬೆಳೆವಿಮೆ (Crop Insurance) ಪರಿಹಾರ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇದರಿಂದ ಆಕ್ರೋಶಗೊಂಡ ರೈತರು ಗ್ರಾಮ ಪಂಚಾಯತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ದಾವಣಗೆರೆ ತಾಲೂಕಿನ ಐಗೂರು ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಸರ್ವೆ ಮಾಡುವಾಗ ಎಡವಟ್ಟಾಗಿದ್ದೇನು?
Image Credit : Asianet News

ಸರ್ವೆ ಮಾಡುವಾಗ ಎಡವಟ್ಟಾಗಿದ್ದೇನು?

ಐಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಐಗೂರು, ಬೋರಗೊಂಡನಹಳ್ಳಿ, ಲಿಂಗಾಪುರ, ಅಗಸನಕಟ್ಟೆ, ತುಂಬಿಗೆರೆ ಸೇರಿದಂತೆ ಒಟ್ಟು 7 ಗ್ರಾಮಗಳ ಸುಮಾರು 3,500ಕ್ಕೂ ಹೆಚ್ಚು ರೈತರು ಬೆಳೆವಿಮೆ ಮಾಡಿಸಿದ್ದರು. ಈ ಬಾರಿ ಭೀಕರ ಬರಗಾಲವಿದ್ದು, ಸಮರ್ಪಕವಾಗಿ ಸರ್ವೆ ನಡೆದಿದ್ದರೆ ರೈತರಿಗೆ ಬರ ಪರಿಹಾರ ಹಾಗೂ ವಿಮಾ ಮೊತ್ತ ಕೈಸೇರುತ್ತಿತ್ತು.

ಆದರೆ, ಕೃಷಿ ಮತ್ತು ಪಂಚಾಯತಿ ಅಧಿಕಾರಿಗಳು ರೈತರಿಗೆ ಯಾವುದೇ ಮುನ್ಸೂಚನೆ ನೀಡದೆ, ಕೇವಲ ಬೋರ್‌ವೆಲ್‌ಗಳಿಂದ ನೀರು ಹಾಯಿಸಿಕೊಂಡಿದ್ದ ಬೆರಳೆಣಿಕೆಯ ಜಮೀನುಗಳಿಗೆ ಭೇಟಿ ನೀಡಿ ಜಿಪಿಎಸ್ (GPS) ಸರ್ವೆ ನಡೆಸಿದ್ದಾರೆ. ಪರಿಣಾಮವಾಗಿ, ಇಡೀ ಪ್ರದೇಶದ ಒಣ ಬೇಸಾಯದ (ಖುಷ್ಕಿ) ಜಮೀನುಗಳನ್ನು 'ನೀರಾವರಿ ಆಶ್ರಿತ ಪ್ರದೇಶ'ವೆಂದು ತಪ್ಪಾಗಿ ನಮೂದಿಸಿದ್ದಾರೆ. ಇದರಿಂದಾಗಿ ಮಳೆ ಕೊರತೆಯಿಂದ ಕಂಗಾಲಾಗಿದ್ದ 7 ಗ್ರಾಮಗಳ ಒಣ ಬೇಸಾಯಗಾರರಿಗೆ ವಿಮೆ ಬಾರದಂತಹ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ.

Related Articles

Related image1
ಹಾವೇರಿ ಬೆಳೆವಿಮೆ ಸರ್ವೆ ವೇಳೆ ಅಮಾನವೀಯ ವರ್ತನೆ, ಗ್ರಾ.ಪಂ ಕಾರ್ಯದರ್ಶಿ ಪ್ಯಾಂಟ್ ಬಿಚ್ಚಿಸಿದ ವಿಮಾ ಕಂಪನಿ ಸಿಬ್ಬಂದಿ!
Related image2
ರೈತರ ಏಜೆಂಟರಿಗೆ ಬೆಳೆ ವಿಮೆ ಹಣ ನೀಡಬೇಡಿ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ
35
ಪಂಚಾಯತಿಗೆ ಬೀಗ ಜಡಿದು ರೈತರ ಆಕ್ರೋಶ:
Image Credit : Asianet News

ಪಂಚಾಯತಿಗೆ ಬೀಗ ಜಡಿದು ರೈತರ ಆಕ್ರೋಶ:

ಅಧಿಕಾರಿಗಳ ಈ ಎಡವಟ್ಟು ತಿಳಿಯುತ್ತಿದ್ದಂತೆ ನೂರಾರು ರೈತರು ಒಗ್ಗೂಡಿ ಐಗೂರು ಗ್ರಾಮ ಪಂಚಾಯತಿ ಕಚೇರಿಗೆ ಮುತ್ತಿಗೆ ಹಾಕಿದರು. ಕಚೇರಿಗೆ ಬೀಗ ಜಡಿದ ರೈತರು, ಪಿಡಿಒ (PDO) ಹಾಗೂ ಕಾರ್ಯದರ್ಶಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. 'ಮಳೆಯಿಲ್ಲದೆ ಬೆಳೆ ಸಂಪೂರ್ಣ ಒಣಗಿ ಹೋಗಿದೆ. ಹೀಗಿರುವಾಗ ನೀರಾವರಿ ಬೆಳೆ ಎಂದು ನಮೂದಿಸಿ ನಮ್ಮ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದೀರಾ? ನಮಗೆ ನ್ಯಾಯ ಸಿಗುವವರೆಗೂ ಬೀಗ ತೆಗೆಯುವುದಿಲ್ಲ' ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

45
ಅತ್ತ ಬಿಸಿಲಲ್ಲಿ ರೈತರ ಆಕ್ರೋಶ.. ಇತ್ತ ಎಸಿ ಕಾರಲ್ಲಿ ತಣ್ಣಗೆ ಕುಳಿತ ಆರ್‌ಐ!
Image Credit : Asianet News

ಅತ್ತ ಬಿಸಿಲಲ್ಲಿ ರೈತರ ಆಕ್ರೋಶ.. ಇತ್ತ ಎಸಿ ಕಾರಲ್ಲಿ ತಣ್ಣಗೆ ಕುಳಿತ ಆರ್‌ಐ!

ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪರಿಸ್ಥಿತಿ ತಿಳಿಗೊಳಿಸಲು ದಾವಣಗೆರೆ ತಹಶೀಲ್ದಾರ್ ಸಿ. ರಾಜೇಶ್‌ಕುಮಾರ್ ಅವರು ಸ್ಥಳಕ್ಕೆ ದೌಡಾಯಿಸಿದರು. ತಹಶೀಲ್ದಾರ್ ಜೊತೆಯಲ್ಲಿ ರೆವಿನ್ಯೂ ಇನ್ಸ್‌ಪೆಕ್ಟರ್ (ಆರ್‌ಐ) ಸಿದ್ದೇಶ್ ಕೂಡ ಆಗಮಿಸಿದ್ದರು. ಸ್ಥಳಕ್ಕೆ ಬಂದ ತಹಶೀಲ್ದಾರ್ ರಾಜೇಶ್‌ಕುಮಾರ್ ಅವರು ವಾಹನದಿಂದ ಕೆಳಗಿಳಿದು, ಉರಿಬಿಸಿಲಿನಲ್ಲಿ ನಿಂತಿದ್ದ ಅನ್ನದಾತರ ಮನವೊಲಿಸಲು ಹರಸಾಹಸ ಪಡುತ್ತಿದ್ದರು.

ಆದರೆ, ಅವರ ಜೊತೆಗೆ ಬಂದಿದ್ದ ಆರ್‌ಐ ಸಿದ್ದೇಶ್ ಅವರ ವರ್ತನೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ತಹಶೀಲ್ದಾರ್ ರೈತರೊಂದಿಗೆ ಚರ್ಚಿಸುತ್ತಿದ್ದರೆ, ಇತ್ತ ಆರ್‌ಐ ಸಿದ್ದೇಶ್ ಮಾತ್ರ ಪಾರ್ಕ್ ಮಾಡಿದ್ದ ಸರ್ಕಾರಿ ವಾಹನದಲ್ಲಿ ಎಸಿ (AC) ಆನ್ ಮಾಡಿಕೊಂಡು ಹಾಯಾಗಿ ಕುಳಿತುಕೊಂಡಿದ್ದರು.

55
ಮರು ಸರ್ವೆ ಮಾಡುವಂತೆ ಆಗ್ರಹ
Image Credit : Asianet News

ಮರು ಸರ್ವೆ ಮಾಡುವಂತೆ ಆಗ್ರಹ

ರೈತರ ಕಷ್ಟದ ನಡುವೆಯೂ ಅಧಿಕಾರಿಯೊಬ್ಬರು ತೋರಿದ ಈ 'ಸಾಹೇಬಗಿರಿ' ಮತ್ತು ಬೇಜವಾಬ್ದಾರಿತನ ಸ್ಥಳೀಯರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿತು. ತಕ್ಷಣವೇ ತಪ್ಪಾದ ಸರ್ವೆಯನ್ನು ರದ್ದುಗೊಳಿಸಿ, ಮರು ಸರ್ವೆ ನಡೆಸಿ ಅರ್ಹ ರೈತರಿಗೆ ಬೆಳೆವಿಮೆ ಸಿಗುವಂತೆ ಮಾಡಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ದಾವಣಗೆರೆ
ರೈತರು
ಪ್ರತಿಭಟನೆ
ಕರ್ನಾಟಕ ಸುದ್ದಿ
ಕ್ಷಾಮ
 

Latest Videos
Recommended Stories
Recommended image1
ಬೆಂಗಳೂರು-ವಿಜಯವಾಡ ಪ್ರಯಾಣ ಇನ್ಮುಂದೆ ಜಸ್ಟ್ 6 ಗಂಟೆ! ₹19,000 ಕೋಟಿ ವೆಚ್ಚ, 120 ಕಿ.ಮೀ ವೇಗ
Recommended image2
ನಮ್ಮ ಮೆಟ್ರೋದಲ್ಲಿ ಭರ್ಜರಿ ಉದ್ಯೋಗ, 50 ಸಹಾಯಕ ಭದ್ರತಾ ಅಧಿಕಾರಿ ಹುದ್ದೆಗಳಿಗೆ ಅರ್ಜಿ
Recommended image3
‘ಭಾರತಕ್ಕೆ ದೇಶಪ್ರೇಮಿಗಳು ಬೇಕು, ಪರಾವಲಂಬಿಗಳಲ್ಲ’… ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಕೆನಡಾ ಕ್ರಿಯೇಟರ್ ಖಡಕ್ ಮಾತು!
Related Stories
Recommended image1
ಹಾವೇರಿ ಬೆಳೆವಿಮೆ ಸರ್ವೆ ವೇಳೆ ಅಮಾನವೀಯ ವರ್ತನೆ, ಗ್ರಾ.ಪಂ ಕಾರ್ಯದರ್ಶಿ ಪ್ಯಾಂಟ್ ಬಿಚ್ಚಿಸಿದ ವಿಮಾ ಕಂಪನಿ ಸಿಬ್ಬಂದಿ!
Recommended image2
ರೈತರ ಏಜೆಂಟರಿಗೆ ಬೆಳೆ ವಿಮೆ ಹಣ ನೀಡಬೇಡಿ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved