ಬಾಗಲಕೋಟೆ: ಸಿಲಿಂಡರ್ ಸ್ಫೋಟ, ಬೆಚ್ಚಿಬಿದ್ದ ಜನತೆ
ಬಾಗಲಕೋಟೆ(ಸೆ.03): ಸಿಲಿಂಡರ್ ಲೀಕ್ ಆಗಿ ಸ್ಫೋಟಗೊಂಡ ಪರಿಣಾಮ ಮನೆಯಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಕರಕಲಾದ ಘಟನೆ ನವನಗರದ ಸೆಕ್ಟರ್ ನಂಬರ್ 45ರಲ್ಲಿ ಇಂದು(ಗುರುವಾರ) ನಡೆದಿದೆ. ಅದೃಷ್ಟವಷಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಲೋಕೇಶ್ ಸುಂಕದ ಎಂಬುವರ ಮನೆಯಲ್ಲಿ ಸಿಲಿಂಡರ್ ಸ್ಫೋಟವಾದ ಪರಿಣಾಮ ಹೊತ್ತಿದ ಬೆಂಕಿ
ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದ ಅಗ್ನಿ ಶಾಮಕದಳ ಸಿಬ್ಬಂದಿ
ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ, ಸಿಲಿಂಡರ್ ಸ್ಫೋಟಕ್ಕೆ ಬೆಚ್ಚಿಬಿದ್ದ ಸ್ಥಳೀಯರು
ಬೆಂಕಿಯಲ್ಲಿ ಸುಟ್ಟು ಕರಕಲಾದ ಮನೆಯಲ್ಲಿನ ಬಟ್ಟೆ ಬರೆ, ಪಾತ್ರೆಗಳು
ಬಾಗಲಕೋಟೆ ನವನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ