ರಾಜ್ಯದಲ್ಲಿನ ಸಮಸ್ಯೆಗೆ ಶಿವಲಿಂಗವೇ ಕಾರಣ, ಮತ್ತೆ ಮುನ್ನೆಲೆಗೆ ಬಂದ ತಲಕಾವೇರಿ ಶಿವಲಿಂಗ
ಮುಜರಾಯಿ ಇಲಾಖೆ ವ್ಯಾಪ್ತಿಯ ತಲಕಾವೇರಿ ಕ್ಷೇತ್ರದಲ್ಲಿರುವ ಶಿವಲಿಂಗವನ್ನು ವಿಸರ್ಜನೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿತ್ತು. ಇದರ ಮಧ್ಯೆ ಜಿಲ್ಲೆ, ರಾಜ್ಯದಲ್ಲಿನ ಸಮಸ್ಯೆಗೆ ಶಿವಲಿಂಗವೇ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಭಗ್ನ ಶಿವಲಿಂಗ ವಿಸರ್ಜನೆಗೆ ಎಂಎಲ್‍ಸಿ ಮನವಿ ಮಾಡಿದ್ದಾರೆ. ಈ ಮೂಲಕ ತಲಕಾವೇರಿ ಶಿವಲಿಂಗ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
ತಲಕಾವೇರಿಯ ಭಗ್ನ ಶಿವಲಿಂಗ ವಿಸರ್ಜನೆಗೆ ಎಂಎಲ್‍ಸಿ ವೀಣಾ ಅಚ್ಚಯ್ಯ ಅವರು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೆ ಮನವಿ ಮಾಡಿದ್ದಾರೆ.
2002ರಲ್ಲಿ ಜೀರ್ಣೋದ್ಧಾರ ವೇಳೆ ಭಗ್ನವಾಗಿದ್ದ ಶಿವಲಿಂಗ. ಬಳಿಕ ಗರ್ಭಗುಡಿಯಲ್ಲಿ ಹುದುಗಿಸಲಾಗಿತ್ತು. ಅಗಸ್ತ್ಯ ಮುನಿಗಳೇ ಪ್ರತಿಷ್ಟಾಪನೆ ಮಾಡಿದ್ದರೆನ್ನಲಾಗುವ ಲಿಂಗ 1000ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಆದರೆ, 5 ಅಡಿ ಎತ್ತರದ ಶಿವಲಿಂಗ ಮೂರು ಭಾಗವಾಗಿದೆ.
ಎರಡು ವರ್ಷದ ಹಿಂದೆ ಶಿವಲಿಂಗವನ್ನು ಹೊರತೆಗೆದಿದ್ದ ಸಮಿತಿ, ಬಳಿಕ ಪೂಂಪ್‍ಹಾರ್‌ನಲ್ಲಿ ವಿಸರ್ಜನೆಗೆ ಮುಂದಾಗಿತ್ತು. ಆದ್ರೆ ವಿಸರ್ಜನೆ ಮಾಡದಂತೆ ಕೆಲವರು ಹೈಕೋರ್ಟ್ ಸ್ಟೇ ತಂದಿದ್ದರು.
ಇದೀಗ ಸದನದಲ್ಲಿ ವಿಚಾರ ಪ್ರಸ್ತಾಪಿಸಿದ ವೀಣಾ ಅಚ್ಚಯ್ಯ, ಜಿಲ್ಲೆ, ರಾಜ್ಯದಲ್ಲಿನ ಸಮಸ್ಯೆಗೆ ಶಿವಲಿಂಗವೇ ಕಾರಣವಾಗಿದೆ ಎಂದಿದ್ದಾರೆ.
ಇದರಿಂದ ಅದನ್ನು ಶಾಸ್ತ್ರೋಕ್ತವಾಗಿ ವಿಸರ್ಜನೆ ಮಾಡಲು ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ.
ಅಗಸ್ತ್ಯ ಮುನಿಗಳೇ ಪ್ರತಿಷ್ಟಾಪನೆ ಮಾಡಿದ್ದರೆನ್ನಲಾಗುವ ಲಿಂಗ 1000ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಆದರೆ, 5 ಅಡಿ ಎತ್ತರದ ಶಿವಲಿಂಗ ಮೂರು ಭಾಗವಾಗಿದೆ.