'ಬೆಂಗಳೂರಲ್ಲಿ ಕೊರಿಯಾ ಕಾನ್ಸುಲ್‌ ಕಚೇರಿ ಆರಂಭಕ್ಕೆ ಅವಕಾಶ ನೀಡಿ’

First Published Nov 26, 2020, 7:32 AM IST

ಬೆಂಗಳೂರು(ನ.26): ನಗರದಲ್ಲಿ ಕೊರಿಯಾ ಕೌನ್ಸಿಲರ್‌ ಜನರಲ್‌ ಕಚೇರಿ ಆರಂಭಿಸುವ ಕುರಿತು ಚೆನ್ನೈ ಕೌನ್ಸಿಲರ್‌ ಜನರಲ್‌ ಹೋಂಗ್‌-ಯೂಪ್‌ ಲೀ ಅವರು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರೊಂದಿಗೆ ಬುಧವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಚರ್ಚೆ ನಡೆಸಿದ್ದಾರೆ. 

<p>ಪಾಲಿಕೆ ಕೇಂದ್ರ ಕಚೇರಿಗೆ ಬುಧವಾರ ಭೇಟಿ ಮಾಡಿದ ಹೋಂಗ್‌ ಯೂಪ್‌ ಲೀ ಅವರು, ಬೆಂಗಳೂರಿನಲ್ಲಿ ಒಂದು ಸಾವಿರಕ್ಕೂ ಅಧಿಕ ಕೊರಿಯಾ ಪ್ರಜೆಗಳಿದ್ದಾರೆ. ಜತೆಗೆ, ಪ್ರತಿವರ್ಷ ಭಾರತದಿಂದ ಕೊರಿಯಾಗೆ ಹೋಗುವ ನಾಗರಿಕರಲ್ಲಿ ಶೇ.30ಕ್ಕೂ ಅಧಿಕ ಬೆಂಗಳೂರಿನವರಾಗಿದ್ದಾರೆ. ಹೀಗಾಗಿ, ಬೆಂಗಳೂರು ಮತ್ತು ಕೋರಿಯಾ ನಡುವೆ ಬಾಂಧವ್ಯ ಹೆಚ್ಚಳ ಮಾಡಲು, ಪ್ರಜೆಗಳಿಗೆ ಸೌಕರ್ಯ ಒದಗಿಸಲು ನಗರದಲ್ಲಿ ಕೌನ್ಸಿಲ್‌ ಜನರಲ್‌ ಕಚೇರಿ ತೆರೆಯಲು ಅವಕಾಶ ನೀಡುವಂತೆ ಬಿಬಿಎಂಪಿ ಆಯುಕ್ತರಿಗೆ ಮನವಿ ಮಾಡಿದ್ದಾರೆ.</p>

ಪಾಲಿಕೆ ಕೇಂದ್ರ ಕಚೇರಿಗೆ ಬುಧವಾರ ಭೇಟಿ ಮಾಡಿದ ಹೋಂಗ್‌ ಯೂಪ್‌ ಲೀ ಅವರು, ಬೆಂಗಳೂರಿನಲ್ಲಿ ಒಂದು ಸಾವಿರಕ್ಕೂ ಅಧಿಕ ಕೊರಿಯಾ ಪ್ರಜೆಗಳಿದ್ದಾರೆ. ಜತೆಗೆ, ಪ್ರತಿವರ್ಷ ಭಾರತದಿಂದ ಕೊರಿಯಾಗೆ ಹೋಗುವ ನಾಗರಿಕರಲ್ಲಿ ಶೇ.30ಕ್ಕೂ ಅಧಿಕ ಬೆಂಗಳೂರಿನವರಾಗಿದ್ದಾರೆ. ಹೀಗಾಗಿ, ಬೆಂಗಳೂರು ಮತ್ತು ಕೋರಿಯಾ ನಡುವೆ ಬಾಂಧವ್ಯ ಹೆಚ್ಚಳ ಮಾಡಲು, ಪ್ರಜೆಗಳಿಗೆ ಸೌಕರ್ಯ ಒದಗಿಸಲು ನಗರದಲ್ಲಿ ಕೌನ್ಸಿಲ್‌ ಜನರಲ್‌ ಕಚೇರಿ ತೆರೆಯಲು ಅವಕಾಶ ನೀಡುವಂತೆ ಬಿಬಿಎಂಪಿ ಆಯುಕ್ತರಿಗೆ ಮನವಿ ಮಾಡಿದ್ದಾರೆ.

<p>ಕೊರಿಯಾ ಮೂಲದ 49 ಕಂಪನಿಗಳು ನಗರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅವುಗಳ ನಿರ್ವಹಣೆ ಮತ್ತು ತಂತ್ರಜ್ಞಾನ ಅಭಿವೃದ್ಧಿ ಸಂಬಂಧ ಎರಡೂ ದೇಶಗಳ ಪ್ರಜೆಗಳ ಸಂಚಾರ ಅಗತ್ಯವಾಗಿದೆ.&nbsp;</p>

ಕೊರಿಯಾ ಮೂಲದ 49 ಕಂಪನಿಗಳು ನಗರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅವುಗಳ ನಿರ್ವಹಣೆ ಮತ್ತು ತಂತ್ರಜ್ಞಾನ ಅಭಿವೃದ್ಧಿ ಸಂಬಂಧ ಎರಡೂ ದೇಶಗಳ ಪ್ರಜೆಗಳ ಸಂಚಾರ ಅಗತ್ಯವಾಗಿದೆ. 

<p>ಕೊರಿಯಾಕ್ಕೆ ಹೋಗಲು ವೀಸಾ ಪಡೆಯುವುದು, ಅದಕ್ಕೆ ಅನುಮತಿ, ಸಹಾಯವಾಣಿ ಸೇರಿ ಎಲ್ಲ ಕಾರ್ಯಕ್ಕೂ ಕಚೇರಿ ನೆರವಾಗಲಿದೆ. ಹೀಗಾಗಿ, ಚೆನ್ನೈ ನಲ್ಲಿರುವ ಕೌನ್ಸಿಲ್‌ ಜನರಲ್‌ ಮಾದರಿಯಲ್ಲಿ, ಬೆಂಗಳೂರಿನಲ್ಲಿಯೂ ಕಚೇರಿ ತೆರೆಯಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ ಎಂದು ಆಯುಕ್ತ ಮಂಜುನಾಥ್‌ ಪ್ರಸಾದ್‌ ಮಾಹಿತಿ ನೀಡಿದ್ದಾರೆ.</p>

ಕೊರಿಯಾಕ್ಕೆ ಹೋಗಲು ವೀಸಾ ಪಡೆಯುವುದು, ಅದಕ್ಕೆ ಅನುಮತಿ, ಸಹಾಯವಾಣಿ ಸೇರಿ ಎಲ್ಲ ಕಾರ್ಯಕ್ಕೂ ಕಚೇರಿ ನೆರವಾಗಲಿದೆ. ಹೀಗಾಗಿ, ಚೆನ್ನೈ ನಲ್ಲಿರುವ ಕೌನ್ಸಿಲ್‌ ಜನರಲ್‌ ಮಾದರಿಯಲ್ಲಿ, ಬೆಂಗಳೂರಿನಲ್ಲಿಯೂ ಕಚೇರಿ ತೆರೆಯಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ ಎಂದು ಆಯುಕ್ತ ಮಂಜುನಾಥ್‌ ಪ್ರಸಾದ್‌ ಮಾಹಿತಿ ನೀಡಿದ್ದಾರೆ.

<p>ಈ ವೇಳೆ ಬಿಬಿಎಂಪಿ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಿ. ರಂದೀಪ್‌ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.</p>

ಈ ವೇಳೆ ಬಿಬಿಎಂಪಿ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಿ. ರಂದೀಪ್‌ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?