ಗಂಗಾವತಿ: ನವ ವೃಂದಾವನ ಗಡ್ಡೆಯಲ್ಲಿ ಜಯತೀರ್ಥರ ಆರಾಧನೆ
ಗಂಗಾವತಿ(ಜು.11): ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯ ನವ ವೃಂದಾವನ ಗಡ್ಡೆಯಲ್ಲಿ ಮಂತ್ರಾಲಯ ಮಠದಿಂದ ಶ್ರೀಜಯತೀರ್ಥ ಗುರುಸಾರ್ವಭೌಮರ ಆರಾಧನಾ ಮಹೋತ್ಸವ ಗುರುವಾರ ಜರುಗಿದೆ.
ಆನೆಗೊಂದಿಯ ನವ ವೃಂದಾವನ ಗಡ್ಡೆಯಲ್ಲಿ ಪ್ರಾತಃ ಕಾಲದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು
ಈ ಸಂದರ್ಭದಲ್ಲಿ ಶ್ರೀ ಜಯತೀರ್ಥಗುರುಸಾರ್ವಭೌಮರ ಗ್ರಂಥಗಳ ಪಾರಾಯಣ ಹಾಗೂ ಅದರ ಮೇಲೆ ವಿದ್ವಾಂಸರಿಂದ ಉಪನ್ಯಾಸಗಳು, ಭಜನೆ ಹಾಗೂ ಸಂಗೀತ ಕಾರ್ಯಕ್ರಮಗಳು ಜರುಗಿದವು
ಶ್ರೀಜಯತೀರ್ಥ ಗುರುಸಾರ್ವಭೌಮರ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಗಂಗಾವತಿಯ ಅನೇಕ ಭಕ್ತರು ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ವ್ಯವಸ್ಥಾಪಕರಾದ ಸುಮಂತ ಕುಲಕರ್ಣಿ, ಪಂಡಿತರಾದ ಕಡಪ ಧೀರೇಂದ್ರ ಆಚಾರ್ಯ, ಆಯಾಚಿತ್ ಧೀರೇಂದ್ರಆಚಾರ್ಯ, ಗುರುಪ್ರಸಾದ್ ಆಚಾರ್ಯ, ತ್ರಿವಿಕ್ರಮಆಚಾರ್ಯ, ಪವಮಾನ ಆಚಾರ್ಯ ಹೊಸಪೇಟೆ, ನರಸಿಂಹಆಚಾರ್ಯ, ನವವೃಂದಾವನದ ಅರ್ಚಕರಾದ ನರಸಿಂಹಆಚಾರ್ಯ, ವಿಜೇಂದ್ರ ಆಚಾರ್ಯ, ಗುರುರಾಜ ಆಚಾರ್ಯ ಕಿನ್ನಾಳ, ಶ್ರೀನಿವಾಸ ಆಚಾರ್ಯ ಭಾಗಿಯಾಗಿದ್ದರು.