ಲಾಕ್‌ಡೌನ್‌ನಲ್ಲಿ ಬಾವಿ ಅಗೆದ ಅಕ್ಷತಾ: ಫಿಟ್ನೆಸ್‌ ಆಯ್ತು, ನೀರೂ ಸಿಕ್ತು..!

First Published 29, Apr 2020, 1:14 PM

ಈ ಲಾಕ್‌ಡೌನ್‌ ದಿನಗಳು ಕೆಲವರ ಜೀವನದಲ್ಲಿ ಅತ್ಯಂತ ವ್ಯರ್ಥವಾಗಿ ಕಳೆದು ಹೋಗುತ್ತಿವೆ. ಆದರೆ ಅಂತಾರಾಷ್ಟ್ರೀಯ ಪವರ್‌ ಲಿಫ್ಟಿಂಗ್‌ನಲ್ಲಿ 3 ಚಿನ್ನದ ಪದಕ ಗೆದ್ದಿರುವ, ಏಕಲವ್ಯ ಪ್ರಶಸ್ತಿ ವಿಜೇತೆ ಅಕ್ಷತಾ ಪೂಜಾರಿ ಬೋಳ ಅವರ ಜೀವನದಲ್ಲಿ ಮಾತ್ರ ಈ ಲಾಕ್‌ಡೌನ್‌ ದಿನಗಳು ಸಾರ್ಥಕವಾಗಿ ಕಳೆಯತ್ತಿವೆ. ಲಾಕ್‌ಡೌನ್ ಸಂದರ್ಭ ಬಾವಿ ಕೊರೆದು ಫಿಟ್‌ನೆಸ್ ಕಾಪಾಡೋದರ ಜೊತೆ ನೀರೂ ಸಿಕ್ಕಿದೆ. ಇಲ್ಲಿವೆ ಫೋಟೋಸ್

ಎಲ್ಲ ಸರಿಯಾಗಿದ್ದರೆ, ಅಕ್ಷತಾ ಥೈವಾನ್‌ನಲ್ಲಿ ಈಗ ನಡೆಯಬೇಕಾಗಿದ್ದ ಅಂತಾರಾಷ್ಟ್ರೀಯ ಪವರ್‌ ಲಿಫ್ಟಿಂಗ್‌ ಕೂಟದಲ್ಲಿ ಭಾಗವಹಿಸಬೇಕಾಗಿತ್ತು. ಆದರೆ ಲಾಕ್‌ಡೌನ್‌ನಿಂದಾಗಿ ಅತ್ತ ಥೈವಾನೂ ಇಲ್ಲ, ಇತ್ತ ಪ್ರಾಕ್ಟೀಸೂ ಇಲ್ಲ, ಜಿಮ್ಮಿಗೂ ಹೋಗಲಿಕ್ಕಿಲ್ಲ ಇಲ್ಲ, ಫಿಟ್ನೆಸ್‌ ವರ್ಕೌಟೂ ಮಾಡುವಂತಿಲ್ಲ.

ಆದ್ದರಿಂದ ಕಾರ್ಕಳ ತಾಲೂಕಿನ ಬೋಳ ಗ್ರಾಮದಲ್ಲಿರುವ ಮನೆಗೆ ಬಂದಿರುವ ಅಕ್ಷತಾ ಇತರರಂತೆ ಮನೆಯಲ್ಲಿ ಕುಳಿತು ಟೈಮ್‌ ವೇಸ್ವ್‌ ಮಾಡಲಿಲ್ಲ. ಬದಲಿಗೆ 25 ಅಡಿ ಆಳದ ಬಾವಿಯನ್ನು ತೋಡಿ ನೀರು ಚಿಮ್ಮಿಸಿದ್ದಾರೆ.

ಮನೆಯಲ್ಲಿದ್ದ ಹಳೆಯ ಬಾವಿಯಲ್ಲಿ ಏಪ್ರಿಲ್‌ ಆರಂಭವಾಗುತಿದ್ದಂತೆ ನೀರು ಬತ್ತುತ್ತದೆ, ಕಳೆದ ವರ್ಷ ಅಕ್ಷತಾ ಅವರು ಪ್ರತಿದಿನ ತಮ್ಮ ಹಳೆಯ ಸ್ಕೂಟಿಗೆ 2 ಕೊಡಗಳನ್ನು ಕಟ್ಟಿಕೊಂಡು ಕಿಮೀ ದೂರದಿಂದ ನೀರೆಳೆದು ತಂದಿದ್ದರು. ಈ ಬಾರಿ ನೀರಿನ ಸಂಕಷ್ಟಆರಂಭವಾಗುವ ಮೊದಲೇ ಮನೆಯ ಪಕ್ಕದಲ್ಲಿಯೇ ಬಾವಿಯೊಂದನ್ನು ತೊಡಿದರೆ ಹೇಗೆ ಎಂಬ ಆಲೋಚನೆ ಹೊಳೆದದ್ದೇ ಮೂವರು ಅಣ್ಣಂದಿರನ್ನು ಕೂಡಿಕೊಂಡು ಕೈಗೆ ಗುದ್ದಲಿ ಹಿಡಿದೇಬಿಟ್ಟರು.

ಶನಿವಾರದಂದು (ಏ.18) ಬಾವಿ ತೊಡಲಾರಂಭಿಸಿದರು, 6 ದಿನಗಳ ಕಾಲ ಸತತವಾಗಿ ಮೈಮುರಿದು ಬಾವಿ ಅಗೆದರು, ಎಷ್ಟುಆಳದಲ್ಲಿ ನೀರು ಸಿಗುತ್ತದೆ ಎಂಬ ಕಲ್ಪನೆ ಇರಲಿಲ್ಲ. ಅಕ್ಷತಾ ಅವರಿಗೆ ಶುಕ್ರವಾರ ಶುಭದಿನ, ಅಂದಾದರೂ ಬಾವಿಯಲ್ಲಿ ನೀರು ಉಕ್ಕಬೇಕು ಎಂದವರಿಗೆ ಆಸೆ ಇತ್ತು. ಆದರೆ ಶುಕ್ರವಾರ (ಏ.24) ಸಂಜೆಯವರೆಗೂ 25 ಅಡಿ ಅಗೆದರೂ ನೀರು ಬರಲಿಲ್ಲ, ದೇವರಿಗೆ ತನ್ನ ಪ್ರಾರ್ಥನೆ ಸಂದಿಲ್ಲವೇನೋ ಎಂದು ಅಕ್ಷತಾ ಬೇಸರಿಸಿಕೊಂಡರು,

ಇನ್ನೇನೂ ಸಂಜೆ 5 ಗಂಟೆಗೆ ಅಂದಿನ ಕೆಲಸ ಮುಗಿಸೋಣ ಎಂದುಕೊಳ್ಳುವಷ್ಟರಲ್ಲಿ ಬಾವಿಯ ಒಂದು ಮೂಲೆಯಿಂದ ನೀರು ಒಸರಲಾರಂಭಿಸಿತು. ಮನೆಯವರಿಗೆ ದೊಡ್ಡ ಸಮಸ್ಯೆಯೊಂದು ಪರಿಹಾರವಾದಂತಾಯಿತು, ಅಕ್ಷತಾ ಅವರಂತೂ ಇನ್ನೊಂದು ಪದಕ ಗೆದ್ದಷ್ಟುಸಂಭ್ರಮಪಟ್ಟರು. ಅಕ್ಷತಾರ ಅಣ್ಣ ಈ ಬಾರಿ ಕಂಬಳದ ಕೋಣಗಳನ್ನು ಸಾಕುತ್ತಿದ್ದಾರೆ, ಅವುಗಳಿಗೆ ದಿನಕ್ಕೆರಡು ಬಾರಿ ಸ್ನಾನ ಮಾಡಿಸಬೇಕು, ಅದಕ್ಕೆ ಹತ್ತಿಪ್ಪತ್ತು ಕೊಡ ನೀರು ಬೇಕು, ಅದನ್ನೂ ಅಕ್ಷತಾ ಬಾವಿಯಿಂದ ಎಳೆದುಕೊಡುತ್ತಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಜಿಮ್ಮಿಗೆ ಹೋಗಿ ವರ್ಕೌಟ್‌ ಮಾಡುವುದಕ್ಕಾಗಲಿಲ್ಲ, ಆದರೆ ಬಾವಿ ತೋಡಿದ್ದು ಜಿಮ್ಮಿಗಿಂತಲೂ ಹೆಚ್ಚು ವರ್ಕೌಟ್‌ ಮಾಡಿದಂತಾಯಿತು. ನಿತ್ಯ ಬಾವಿಯಿಂದ ನೀರೆಳೆಯುವುದು ಇನ್ನೂ ಒಳ್ಳೆಯ ವ್ಯಾಯಾಮ ಆಗುತ್ತಿದೆ ಎಂದು ನಗುತ್ತಾರೆ ಅಕ್ಷತಾ.

ನಂಗೆ ಸ್ಪೋರ್ಟ್‌್ಸ ಅಂದ್ರೆ ಪ್ರಾಣ, ಒಂದಿನವೂ ಪ್ರಾಕ್ಟೀಸ್‌ ಮಾಡ್ದೆ ಇರುವುದಕ್ಕಾಗುವುದಿಲ್ಲ, ಆದ್ರೇ ಲಾಕ್‌ಡೌನ್‌ ನಿಂದಾಗಿ ಮನೆಯಲ್ಲಿಯೇ ಇರ್ಬೇಕಾಗಿದೆ, ಆದ್ರೆ ನಂಗೆ ಸುಮ್ಮನೇ ಒಂದ್ಕಡೆ ಕೂರುವುದಕ್ಕಾಗುವುದಿಲ್ಲ, ಸಮಯವನ್ನು ಯಾಕೆ ವ್ಯರ್ಥ ಮಾಡಬೇಕು ಎಂದೆನಿಸಿ ಬಹಳ ವರ್ಷಗಳ ಸಮಸ್ಯೆಯಾಗಿರುವ ಬಾವಿಯನ್ನು ತೊಡುವುದಕ್ಕೆ ಆರಂಭಿಸಿದೆವು. ಈಗ ಮನೆಯಲ್ಲಿ ಎಲ್ಲರಿಗೂ ಖುಷಿಯಾಗಿದೆ, ನನಗೂ ಫಿಟ್ನೆಸ್‌ ಕಾಪಾಡುವುದಕ್ಕೊಂದು ಒಳ್ಳೆಯ ಉಪಾಯ ಆಗಿದೆ ಎನ್ನುತ್ಥಾರೆ ಅಕ್ಷತಾ.

ಮನೆಯವರೇ ಕೊರೆದ ಬಾವಿಯಲ್ಲಿ ನೀರು. ಅಕ್ಷತಾ ರಾಜ್ಯಮಟ್ಟದಲ್ಲಿ 10 ಚಿನ್ನ, 2 ಬೆಳ್ಳಿ ಪದಕಗಳೊಂದಿಗೆ 5 ಬಾರಿ ಸ್ಟ್ರಾಂಗ್‌ ವುಮನ್‌ ಪ್ರಶಸ್ತಿ, ರಾಷ್ಟ್ರ ಮಟ್ಟದಲ್ಲಿ 10 ಚಿನ್ನ 2 ಬೆಳ್ಳಿ ಪದಕಗಳೊಂದಿಗೆ 4 ಬಾರಿ ಸ್ಟ್ರಾಂಗ್‌ ವುಮನ್‌ ಪ್ರಶಸ್ತಿ ಗೆದ್ದಿದ್ದಾರೆ. ಏಷ್ಯಾ ಮಟ್ಟದಲ್ಲಿ 4 ಬಾರಿ ಚಿನ್ನ, ಕಾಮನ್‌ವೆಲ್ತ್‌ ಕೂಟದಲ್ಲಿ 8 ಚಿನ್ನ, ವಿಶ್ವ ಮಟ್ಟದಲ್ಲಿ 2 ಚಿನ್ನದ ಪದಕ ಗೆದ್ದಿದ್ದಾರೆ.

loader