Dog attacks sheep: ದಾಳಿ ಮಾಡಿದ್ದು ಒಂದೇ ನಾಯಿ, 12 ಕುರಿಮರಿ ಬಲಿ
ಶ್ವಾನದ ದಾಳಯಿಂದ 12 ಕುರಿಮರಿ(Sheep) ಬಲಿ ಮಾಲೀಕರಿಗೆ ಕನಿಷ್ಠ 1 ಲಕ್ಷ ರು.ಗಳು ನಷ್ಟ
15

ಶ್ವಾನವೊಂದು ದಾಳಿ ನಡೆಸಿದ ಪರಿಣಾಮ 12 ಕುರಿಮರಿಗಳನ್ನು ಬಲಿ ಪಡೆದ ಘಟನೆ ತಾಲೂಕಿನ ಆಲ್ದಾಳ ಗ್ರಾಮದ ಹೊರಗಿನ ಜಮೀನವೊಂದರಲ್ಲಿ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ನಡೆದಿದೆ.
25
ಗ್ರಾಮದ ಹೊರಗಿನ ಜಮೀನವೊಂದರಲ್ಲಿ ಡೊಡ್ಡ ಬಲಿ ಹಾಕಿ 3ರಿಂದ 5 ತಿಂಗಳೊಳಗಿನ ಕುರಿಮರಿಗಳನ್ನು ಕೂಡಿ ಮಾಲೀಕ ಸಿದ್ದಪ್ಪ ಬಂಡೆಪ್ಪ ಕೊಜ್ಜಾಪುರ ಕುರಿ ಮೇಯಿಸಲು ಹೋಗಿದ್ದರು.
35
ಯಾರು ಇಲ್ಲದ ಸಮಯದಲ್ಲಿ ಶ್ವಾನವೊಂದು ದಾಳಿ ಮಾಡಿ ಎಲ್ಲೆಂದರಲ್ಲಿ ಕಚ್ಚಿದ್ದರಿಂದ 12 ಕುರಿಮರಿಗಳು ಸ್ಥಳದಲ್ಲೇ ಮೃತಪಟ್ಟಿವೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಗ್ರಾಮ ಲೆಕ್ಕಿಗರು ಆಗಮಿಸಿ ಪರಿಶೀಲಿಸಿ ಪಂಚನಾಮ ಮಾಡಿದ್ದಾರೆ.
45
ಒಂದು ಕುರಿಮರಿಯೂ ಕನಿಷ್ಠ 6 ರಿಂದ 10 ಸಾವಿರ ಬೆಲೆ ಬಾಳುತ್ತಿದ್ದವು. ಮಾಲೀಕರಿಗೆ ಕನಿಷ್ಠ 1 ಲಕ್ಷ ರು.ಗಳು ನಷ್ಟವಾಗಿದೆ.
55
ಹೊಸದಾಗಿ ಕುರಿಗಳನ್ನು ಮಾಡಿಕೊಂಡಿರುವ ಸಿದ್ದಪ್ಪನಿಗೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕೆಂದು ಗ್ರಾಪಂ ಸದಸ್ಯರಾದ ನಿಂಗಣ್ಣ ಚೆರ್ಮಾನ್, ತಿರುಪತಿ ಹುದ್ದಾರ್, ಮುಖಂಡ ಭೀಮಣ್ಣ ಹುದ್ದಾರ್ ಮಾಸ್ಟರ್ ಆಗ್ರಹಿಸಿದ್ದಾರೆ.
Latest Videos