MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ವಿಶ್ವದ ಶ್ರೀಮಂತ ಭಿಕ್ಷುಕ ಭರತ್ ಜೈನ್ 7.5 ಕೋಟಿ ರೂ. ಸಂಪಾದಿಸಿದ ಸತ್ಯಾಂಶ ಬಯಲು

ವಿಶ್ವದ ಶ್ರೀಮಂತ ಭಿಕ್ಷುಕ ಭರತ್ ಜೈನ್ 7.5 ಕೋಟಿ ರೂ. ಸಂಪಾದಿಸಿದ ಸತ್ಯಾಂಶ ಬಯಲು

ವಿಶ್ವದ ಶ್ರೀಮಂತ ಭಿಕ್ಷುಕನೆಂದೇ ಖ್ಯಾತಿಯಾಗಿರುವ ಮುಂಬೈನ ಭಿಕ್ಷುಕ ಭರತ್ ಜೈನ್ ಕೋಟಿ ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಕಾರ್ಪೊರೇಟ್ ಕಂಪನಿಗಳಲ್ಲಿ ಉನ್ನತ ಹುದ್ದೆಗಳಲ್ಲಿರುವ ಅನೇಕ ಸುಶಿಕ್ಷಿತ ವೃತ್ತಿಪರರಿಗಿಂತ ಅವರ ಗಳಿಕೆ ಹೆಚ್ಚಾಗಿದೆ. ಪ್ರಸ್ತುತ ಈತ 7.5 ಕೋಟಿ ರೂ. ಸಂಪತ್ತಿನ ಒಡೆಯನಾಗಿದ್ದಾನೆ. ಆತನ ಕಾರ್ಯವೈಖರಿ ಇಲ್ಲಿದೆ ನೊಡಿ.

2 Min read
Author : Sathish Kumar KH
Published : Sep 12 2024, 08:08 PM IST
Share this Photo Gallery
  • FB
  • TW
  • Linkdin
  • Whatsapp
15
ಬಡತನದಿಂದ ಶಿಕ್ಷಣ ವಂಚಿತ

ಬಡತನದಿಂದ ಶಿಕ್ಷಣ ವಂಚಿತ

ನಾವು ಸಾಮಾನ್ಯವಾಗಿ ಭಿಕ್ಷುಕರನ್ನು ಅತ್ಯಂತ ಬಡವರು, ದೈನಂದಿನ ಉಳಿವಿಗಾಗಿ ಹೋರಾಡುವವರು ಎಂದು ಗ್ರಹಿಸುತ್ತೇವೆ. ಆದರೆ, ಒಬ್ಬ ಭಿಕ್ಷುಕ ಕೋಟಿಗಟ್ಟಲೆ ಸಂಪತ್ತನ್ನು ಸಂಪಾದಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಅತ್ಯಂತ ಶ್ರೀಮಂತ ಭಿಕ್ಷುಕ ಎಂದು ಪರಿಗಣಿಸಲ್ಪಟ್ಟ ಭರತ್ ಜೈನ್  ಅಸಾಧಾರಣ ವ್ಯಕ್ತಿ. ಮುಂಬೈನ ನಿವಾಸಿಯಾಗಿರುವ ಭರತ್ ಜೈನ್ ಕೋಟಿಗಟ್ಟಲೆ ಆಸ್ತಿಯನ್ನು ಹೊಂದಿದ್ದಾರೆ. ಕಾರ್ಪೊರೇಟ್ ಕಂಪನಿಗಳಲ್ಲಿ ಉನ್ನತ ಹುದ್ದೆಗಳಲ್ಲಿರುವ ಅನೇಕ ಸುಶಿಕ್ಷಿತ ವೃತ್ತಿಪರರಿಗಿಂತ ಅವರ ಗಳಿಕೆ ಹೆಚ್ಚಾಗಿದೆ.

25
ಒಟ್ಟು 7.5 ಕೋಟಿ ರೂ. ಸಂಪತ್ತಿನ ಒಡೆಯ

ಒಟ್ಟು 7.5 ಕೋಟಿ ರೂ. ಸಂಪತ್ತಿನ ಒಡೆಯ

ತನ್ನ ಕುಟುಂಬದ ಭರತ್‌ಗೆ ಔಪಚಾರಿಕ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಈ ಸವಾಲುಗಳನ್ನು ಮೆಟ್ಟಿನಿಂತ ಅವರು ಕಠಿಣ ಪರಿಶ್ರಮದ ಮೂಲಕ ಹಣ ಸಂಪಾದಿಸಿದರು. ತಮ್ಮ ಇಬ್ಬರು ಪುತ್ರರಿಗೆ ಶಿಕ್ಷಣ ನೀಡಿದರು ಮತ್ತು ಅವರ ಮದುವೆಯನ್ನೂ ಮಾಡಿಸಿದರು. ಇದೀಗ ಭರತ್ ಜೈನ್ ಅವರ ಒಟ್ಟು ಆಸ್ತಿ ಸುಮಾರು 7.5 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

35
ಮಾಸಿಕ ಆದಾಯ 75 ಸಾವಿರ ರೂ.

ಮಾಸಿಕ ಆದಾಯ 75 ಸಾವಿರ ರೂ.

ದೇಶದ ಪ್ರಮುಖ ಇಂಗ್ಲಿಷ್ ಸುದ್ದಿ ಸಂಸ್ಥೆಯ ವರದಿಯ ಪ್ರಕಾರ ಅವರ ಮಾಸಿಕ ಆದಾಯ 60 ಸಾವಿರ ರೂ.ಗಳಿಂದ 75 ಸಾವಿರ ರೂ.ಗಳು ಎಂದು ತಿಳಿಸಿದೆ. ಇದು ಭಾರತದಲ್ಲಿ ಅನೇಕ ತಂತ್ರಜ್ಞಾನ ವೃತ್ತಿಪರರ ಸರಾಸರಿ ವೇತನಕ್ಕಿಂತಲೂ ಹೆಚ್ಚಾಗಿದೆ. ಕೇವಲ ಭಿಕ್ಷಾಟನೆಯಿಂದ ಬರುವ ಗಳಿಕೆಯ ಹೊರತಾಗಿ, ಭರತ್ ಹಲವಾರು ಕಡೆಗಳಲ್ಲಿ ಹಣ ಹೂಡಿಕೆ ಮಾಡಿದ್ದಾರೆ.

45
ಮುಂಬೈನಲ್ಲಿ ಎರಡು ಅಪಾರ್ಟ್‌ಮೆಂಟ್ ಮಾಲೀಕ

ಮುಂಬೈನಲ್ಲಿ ಎರಡು ಅಪಾರ್ಟ್‌ಮೆಂಟ್ ಮಾಲೀಕ

ಮುಂಬೈ ನಗರದಲ್ಲಿ ಬರೋಬ್ಬರಿ 1.4 ಕೋಟಿ ರೂ. ಮೌಲ್ಯದ ಎರಡು ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಿ ಬಾಡಿಗೆ ಬಿಟ್ಟಿದ್ದಾರೆ. ಅವರು ಥಾಣೆಯಲ್ಲಿ ಎರಡು ಅಂಗಡಿಗಳಲ್ಲಿ  ಹಣ ಹೂಡಿಕೆ ಮಾಡಿದ್ದಾರೆ. ಈ ಅಂಗಡಿ ಯಾವುದೇ ಶ್ರಮವಿಲ್ಲದೇ ತಿಂಗಳಿಗೆ ರೂ. 30,000 ಬಾಡಿಗೆ ಆದಾಯವನ್ನು ತರುತ್ತದೆ. ಜೊತೆಗೆ ಈತ ಹಲವು ಕಡೆಗಳಲ್ಲಿ ಅಂಗಡಿಗಳನ್ನು ತೆರೆದು ಅಲ್ಲಿ ವ್ಯಾಪಾರಕ್ಕೆ ಮಕ್ಕಳನ್ನು ನಿಯೋಜನೆ ಮಾಡಿದ್ದಾನೆ. ಈ ಮೂಲಕ ಮಕ್ಕಳ ಜೀವನಕ್ಕೆ ದಾರಿ ಮಾಡಿಕೊಟ್ಟಿದ್ದಾನೆ.

55
ಕೋಟಿ ಒಡೆಯನಾಗಿದ್ದರೂ ಭಿಕ್ಷಾಟನೆ ಬಿಟ್ಟಿಲ್ಲ

ಕೋಟಿ ಒಡೆಯನಾಗಿದ್ದರೂ ಭಿಕ್ಷಾಟನೆ ಬಿಟ್ಟಿಲ್ಲ

ಇಷ್ಟೆಲ್ಲಾ ಸಂಪತ್ತು ಇದ್ದರೂ ಭರತ್ ಮುಂಬೈನಲ್ಲಿರುವ ಛತ್ರಪತಿ ಶಿವಾಜಿ ಟರ್ಮಿನಸ್ ಮತ್ತು ಆಜಾದ್ ಮೈದಾನ್‌ನಂತಹ ಸ್ಥಳಗಳಲ್ಲಿ ಭಿಕ್ಷೆ ಬೇಡುತ್ತಲೇ ಇದ್ದಾರೆ. ಅವರು ಪಾರೆಲ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅವರ ಮಕ್ಕಳು ಕಾನ್ವೆಂಟ್ ಶಾಲೆಗಳಲ್ಲಿ ಓದಿದ್ದಾರೆ. ಜೈನ್ ಅವರ ಕುಟುಂಬವು ಸ್ಟೇಷನರಿ ಅಂಗಡಿಯನ್ನು ಸಹ ನಡೆಸುತ್ತಿದೆ. ಭರತ್ ಜೈನ್ ಅವರ ಕಥೆ ಎಲ್ಲರನ್ನೂ ಆಶ್ಚರ್ಯಗಳಿಸುತ್ತದೆ. ಅವರು ಕಠಿಣ ಪರಿಶ್ರಮಕ್ಕೆ ಒಂದು ಈ ಹಣ ಗಳಿಕೆ ಗಮನಾರ್ಹ ಉದಾಹರಣೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.

Latest Videos
Recommended Stories
Recommended image1
ತನ್ನ ಸಾಕುನಾಯಿಗೆ ವರನ ಕಡೆಯವರು ಥಳಿಸಿದ್ದಕ್ಕೆ ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವಧು
Recommended image2
ಭಾರತದ ಮೇಲೆ ಶೇ.18% ಅಲ್ಲ, ಇನ್ನು ಶೇ.15ರಷ್ಟು ಟ್ರಂಪ್‌ ತೆರಿಗೆ!
Recommended image3
ಅತ್ಯುತ್ತಮ ವಿವಿ ಕಟ್ಟಲು ಏಕೆ ಆಗುತ್ತಿಲ್ಲ? ಕುಲಪತಿಗಳಿಗೆ ಸಿಎಂ ಸಿದ್ದರಾಮಯ್ಯ ಕ್ಲಾಸ್‌
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved