32 ವರ್ಷದ ಮಿಜೋರಾಂನ ಶಾಸಕಿ ಬ್ಯಾರಿಲ್ ವನ್ನೈಸಂಗಿ, ಯಾವ ಹೀರೋಯಿನ್‌ಗೂ ಕಮ್ಮಿ ಇಲ್ಲ ಈ ಸುರಸುಂದರಾಂಗಿ!
ZPM MLA From Mizoram Meet Baryl Vanneihsangi ರಾಜಕೀಯಕ್ಕೆ ಬರುವ ಮುನ್ನ ಬ್ಯಾರಿಲ್ ವನ್ನೈಸಂಗಿ ಐಜ್ವಾಲ್ ಮುನ್ಸಿಪಲ್ ಕಾರ್ಪೊರೇಷನ್ (AMC) ನಲ್ಲಿ ಕಾರ್ಪೊರೇಟರ್ ಆಗಿ ಸೇವೆ ಸಲ್ಲಿಸಿದರು. ಮೇಘಾಲಯದ ಶಿಲ್ಲಾಂಗ್‌ನಲ್ಲಿರುವ ನಾರ್ತ್ ಈಸ್ಟರ್ನ್ ಹಿಲ್ ವಿಶ್ವವಿದ್ಯಾಲಯದಿಂದ ಮಾಸ್ಟರ್ ಆಫ್ ಆರ್ಟ್ಸ್‌ನಲ್ಲಿ ಪದವಿಯನ್ನೂ ಇವರು ಪಡೆದುಕೊಂಡಿದ್ದಾರೆ.
32 ವರ್ಷ ವಯಸ್ಸಿನ ಬ್ಯಾರಿಲ್ ವನ್ನೈಸಂಗಿ ಅವರು ಮಿಜೋರಾಂ ವಿಧಾನಸಭಾ ಚುನಾವಣೆಯಲ್ಲಿ ಐಜ್ವಾಲ್ ಸೌತ್-III ಕ್ಷೇತ್ರದಿಂದ ಜಯಗಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ರಾಜ್ಯದ ಅತ್ಯಂತ ಕಿರಿಯ ಮಹಿಳಾ ಎಂಎಲ್‌ಎ ಎನ್ನುವ ಶ್ರೇಯ ಇವರದಾಗಿದೆ.
ಝೋರಾಮ್ ಪೀಪಲ್ಸ್ ಮೂವ್ಮೆಂಟ್ (ZPM) ಅನ್ನು ಪ್ರತಿನಿಧಿಸುವ ಅವರು 9,370 ಮತಗಳೊಂದಿಗೆ ದೊಡ್ಡ ಜನಾದೇಶವನ್ನು ಪಡೆದುಕೊಂಡಿದ್ದಾರೆ. ಮಿಜೋ ನ್ಯಾಷನಲ್ ಫ್ರಂಟ್ (MNF) ಅಭ್ಯರ್ಥಿ ಎಫ್ ಲಾಲ್ನುನ್ಮಾವಿಯಾ ಅವರನ್ನು ಈ ಕ್ಷೇತ್ರದಲ್ಲಿ ಸೋಲಿಸಿದ್ದಾರೆ.
ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುವ ಮುನ್ನ ಬ್ಯಾರಿಲ್ ವನ್ನೈಸಂಗಿ ಐಜ್ವಾಲ್ ಮುನ್ಸಿಪಲ್ ಕಾರ್ಪೊರೇಷನ್ (AMC) ನಲ್ಲಿ ಕಾರ್ಪೊರೇಟರ್ ಆಗಿ ಸೇವೆ ಸಲ್ಲಿಸಿದರು.
ಮೇಘಾಲಯದ ಶಿಲ್ಲಾಂಗ್‌ನಲ್ಲಿರುವ ನಾರ್ತ್ ಈಸ್ಟರ್ನ್ ಹಿಲ್ ವಿಶ್ವವಿದ್ಯಾಲಯದಿಂದ ಮಾಸ್ಟರ್ ಆಫ್ ಆರ್ಟ್ಸ್‌ನಲ್ಲಿ ಪದವಿ ಪಡೆದುಕೊಂಡ ನಾಯಕಿಯಾಗಿದ್ದಾರೆ.
ನೋಡಲು ಹೀರೋಯಿನ್ ರೀತಿಯಲ್ಲಿ ಇರುವ ಬ್ಯಾರಿಲ್ ವನ್ನೈಸಂಗಿ ಯಾವುದೇ ಕ್ರಿಮಿನಲ್ ದಾಖಲೆಯನ್ನು ಹೊಂದಿದ್ದಾರೆ. ಆರಂಭದಲ್ಲಿ ಟಿವಿ ನಿರೂಪಕಿಯಾಗಿ ಅವರು ತಮ್ಮ ವೃತ್ತಿ ಜೀವನ ಆರಂಭಿಸಿದ್ದರು.
ರಾಜಕೀಯದ ಹೊರತಾಗಿ, ಬ್ಯಾರಿಲ್ ದೊಡ್ಡ ಮಟ್ಟದ ಸೋಶಿಯಲ್ ಮೀಡಿಯಾ ಫಾಲೋವರ್‌ಗಳನ್ನು ಹೊಂದಿದ್ದಾರೆ. ವಿಶೇಷವಾಗಿ Instagram ನಲ್ಲಿ, 251,000 ಕ್ಕಿಂತ ಹೆಚ್ಚಿನ ಫಾಲೋವರ್ಸ್‌ಗಳು ಈಕೆಗೆ ಇದ್ದಾರೆ.
ಆಕೆಯ ಪ್ರೊಫೈಲ್, 446 ಪೋಸ್ಟ್‌ಗಳನ್ನು ಒಳಗೊಂಡಿದೆ, ತಾವಯ "ಟಿವಿ ನಿರೂಪಕಿ/ಹೋಸ್ಟ್/ಆಂಕರ್/ರಾಜಕಾರಣಿ" ಎಂದು ಬಯೋದಲ್ಲಿ ಬರೆದುಕೊಂಡಿದ್ದಾರೆ.
40 ಸದಸ್ಯ ಬಲದ ಮಿಜೋರಾಂ ವಿಧಾನಸಭಾ ಚುನಾವಣೆಯಲ್ಲಿ ZPM ಗಮನಾರ್ಹ ವಿಜಯ ಸಾಧಿಸಿದೆ. 27 ಸ್ಥಾನಗಳನ್ನು ಗೆದ್ದಿರುವ ಝಡ್‌ಪಿಎಮ್, ಎಂಎನ್‌ಎಫ್ ಅಧಿಕಾರವನ್ನು ಕೊನೆ ಮಾಡಿದೆ.
23 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದರೆ, ಕಾಂಗ್ರೆಸ್ ಒಂದೇ ಸ್ಥಾನವನ್ನು ಪಡೆದುಕೊಂಡಿದೆ.
ಇದೇ ಮೊದಲ ಬಾರಿಗೆ ಮಿಜೋರಾಂ ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಆಮ್ ಆದ್ಮಿ ಪಾರ್ಟಿ ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿತ್ತು. ನಾಲ್ಕೂ ಕ್ಷೇತ್ರದಲ್ಲಿ ಸೋಲು ಕಂಡಿದೆ.
ಮಿಜೋರಾಂ ವಿಧಾನಸಭೆಗೆ ಆಯ್ಕೆಯಾಗಿರುವ ಮೂರು ಮಂದಿ ಮಹಿಳೆಯರಲ್ಲಿ ಬ್ಯಾರಿಲ್ ವನ್ನೈಸಂಗಿ ಕೂಡ ಒಬ್ಬರಾಗಿದ್ದಾರೆ. ಇದು ವಿಧಾನಸಭೆಯ ಇತಿಹಾಸದಲ್ಲಿಯೇ ಅಪರೂಪದ ಕ್ಷಣವಾಗಿದೆ.
ರಾಜ್ಯದ ಅಸೆಂಬ್ಲಿ ಚುನಾವಣೆಯಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿದ ಮೂವರು ಮಹಿಳಾ ಅಭ್ಯರ್ಥಿಗಳಲ್ಲಿ ಬ್ಯಾರಿಲ್ ವನ್ನೈಸಂಗಿ ಕೂಡ ಒಬ್ಬರಾಗಿದ್ದಾರೆ. ಐಜ್ವಾಲ್ ಸೌತ್-III ನಿಂದ ಈಕೆ ಗೆದ್ದಿದ್ದಾರೆ. ಲುಂಗ್ಲೀ ಈಸ್ಟ್‌ನ ಲಾಲ್ರಿನ್‌ಪುಯಿ ಮತ್ತು ಎಂಎನ್‌ಎಫ್‌ನಿಂದ ಪ್ರೊವಾ ಚಕ್ಮಾ ಕೂಡ ಗೆಲುವು ಕಂಡಿದ್ದಾರೆ.