ಉತ್ತರಖಂಡ ದುರಂತ: ಸತತ 50 ಗಂಟೆ ಕಾರ್ಯಾಚರಣೆ, 19 ಮೃತದೇಹ ಪತ್ತೆ!
ಉತ್ತರಖಂಡ ಹಿಮಸ್ಫೋಟ ಹಾಗೂ ಪ್ರವಾಹ ಪರಿಣಾಮ ಘನಘೋರ ದುರಂತವೇ ಸಂಭವಿಸಿದೆ. ನಿನ್ನೆ(ಫೆ.07)ಯಿಂದ NDRF,ಭಾರತೀಯ ಸೇನೆ ಸೇರಿದಂತೆ ರಕ್ಷಣಾ ಪಡೆಗಳು ಕಾರ್ಯಚರಣೆ ನಡೆಸುತ್ತಿದೆ. ಸತತ 50 ಗಂಟೆಗಳ ಕಾರ್ಯಚರಣೆ ವಿವರ ಇಲ್ಲಿದೆ.
ಉತ್ತರಖಂಡದಲ್ಲಿ ಸಂಭವಿಸಿದ ಹಿಮಪಾತ ಹಾಗೂ ಪ್ರವಾಹಕ್ಕೆ ಜಲಾಶಯ, ವಿದ್ಯುತ್ ಸ್ಥಾವರ ಧ್ವಂಸಗೊಂಡಿದೆ. ನಿನ್ನೆಯಿಂದ ಸತತ ಕಾರ್ಯಾಚರಣೆ ನಡೆಸುತ್ತಿರುವ ರಕ್ಷಣಾ ಪಡೆ ಹಲವು ಸವಾಲುಗಳನ್ನು ಎದುರಿಸಿದೆ
ಸತತ 50 ಗಂಟೆಗಳ ಕಾರ್ಯಚರಣೆ ಬಳಿಕ 19 ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ. ಆದರೆ ಇನ್ನೂ 150 ಮಂದಿ ಕಣ್ಮರೆಯಾಗಿದ್ದಾರೆ. ಅವರ ಕುರಿತು ಸುಳಿವಿಲ್ಲ ಎಂದು ರಕ್ಷಣಾ ಪಡೆಗಳು ಹೇಳಿವೆ.
ತಪೋವನ ಸುರಂಗದೊಳಗೆ ಕಾರ್ಯಚರಣೆ ಮುಂದುವರಿದೆ. ಅತ್ಯಂತ ದುರ್ಗಮ ಕಾರ್ಯಚರಣೆ ಇದಾಗಿದ್ದು, ಅಧಿಕಾರಿಗಳು ಸಿಬ್ಬಂದಿಗಳು, ಕಾರ್ಮಿಕರು ಸೇರಿದಂತೆ 36 ಮಂದಿ ಈ ಸುರಂಗದೊಳಗೆ ಸಿಲುಕಿದ್ದಾರೆ ಅನ್ನೋ ಮಾಹಿತಿ ಇದೆ.
ಸುರಂಗದೊಳಗೆ ಸಿಲುಕಿರುವ 36 ಮಂದಿಯ ಕುರಿತು ಯಾವುದೇ ಸುಳಿವು ಲಭ್ಯವಾಗಿಲ್ಲ. ಈಗಾಗಲೇ 50 ಗಂಟೆಗಳು ಕಳೆದಿದೆ. ಸುರಂಗದೊಳಗೆ ಸಂಪೂರ್ಣ ಕೆಸರು ಮಣ್ಣು ತುಂಬಿಕೊಂಡಿದ್ದು, ತೆರುವು ಕಾರ್ಯಚರಣೆ ನಡೆಯುತ್ತಿದೆ.
ಪ್ರವಾದಿಂದ ಕೊಚ್ಚಿ ಹೋದ ಕೆಲ ಸ್ಥಳಗಳಿಗೆ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಬೇಟಿ ನೀಡಿದ್ದಾರೆ. ಮತ್ತಷ್ಟು ರಕ್ಷಣಾ ತಂಡಗಳನ್ನು ಕೆರೆಯಿಸಿಕೊಳ್ಳುವ ಸಾಧ್ಯತೆ ಇದೆ.
ಸಂಪೂರ್ಣ ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಉತ್ತರಖಂಡ ಸಂಸದರ ಜೊತೆ ಸಭೆ ನಡೆಸಿದ್ದಾರೆ. ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ.
ಚಮೋಲಿ ಜಿಲ್ಲೆಯ ಜೋಶಿಮಠ ವಲಯ ಹಾಗೂ ಧೌಲಿ ಗಂಗಾ ನದಿ ತಟದ ಸ್ಥಳ ದುರ್ಗಮ ಪ್ರದೇಶವಾಗಿದೆ. ಇಷ್ಟೇ ಅಲ್ಲ ರಕ್ಷಣಾ ಕಾರ್ಯಯಕ್ಕೂ ಹಲವು ಅಡಚಣೆಗಳು ಇವೆ.
ಕಾರ್ಯಚರಣೆಯಲ್ಲಿ 16 ಮಂದಿಯನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ. ITBP, ಭಾರತೀಯ ಸೇನೆ, SDRF ಹಾಗೂ NDRF ತಂಡಗಳು ಜಂಟಿಯಾಗಿ ಕಾರ್ಯಚರಣೆ ನಡೆಸುತ್ತಿದೆ. ಇತ್ತ ಧೌಲಿ ಗಂಗಾ ನದಿ ಶಾಂತವಾಗಿದೆ.